ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ಮರು ಜಾರಿಗೊಳಿಸುವಂತೆ ರೈತರು ಹೋರಾಟಕ್ಕೆ ನಿಲ್ಲಬೇಕಿದೆ :ಬಳುವನಹಳ್ಳಿ ಲೋಕೇಶ್ ಗೌಡ
ವಿಜಯ ದರ್ಪಣ ನ್ಯೂಸ್….
ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ಮರು ಜಾರಿಗೊಳಿಸುವಂತೆ ರೈತರು ಹೋರಾಟಕ್ಕೆ ನಿಲ್ಲಬೇಕಿದೆ :ಬಳುವನಹಳ್ಳಿ ಲೋಕೇಶ್ ಗೌಡ
ಶಿಡ್ಲಘಟ್ಟ : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಗಳನ್ನು ವಿರೋಧಿಸುವ, ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ಮರು ಜಾರಿಗೊಳಿಸುವಂತೆ ಸರ್ಕಾರದ ವಿರುದ್ಧ ರೈತರು ಹೋರಾಟಕ್ಕೆ ನಿಲ್ಲಬೇಕಿದೆ ಈ ನಿಟ್ಟಿನಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಎಲ್ಲಾ ರೈತರನ್ನೂ ಒಗ್ಗೂಡಿಸಲಾಗುವುದು ಎಂದು ಎಂದು ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಳುವನಹಳ್ಳಿ ಲೋಕೇಶ್ ಗೌಡ
ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರೇಷ್ಮೆ ಕೃಷಿ ಮತ್ತು ಹೈನುಗಾರಿಕೆ ಚೇತರಿಕೆಗೆ ಈ ಹಿಂದೆ ಇದ್ದ ಅನೇಕ ಯೋಜನೆಗಳನ್ನು ಈ ಸರ್ಕಾರ ನಿಲ್ಲಿಸಿದೆ ರೇಷ್ಮೆ ಇಲಾಖೆ ಮತ್ತು ಕೃಷಿ ಇಲಾಖೆದು ಅಧಿಕಾರಿ, ಸಿಬ್ಬಂದಿಯನ್ನು ಕಡಿತಗೊಳಿಸಿ ಎರಡೂ ಇಲಾಖೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ಎರಡೂ ಇಲಾಖೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ ರಾಜ್ಯ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಭಿನ್ನವಾಗಿಲ್ಲ ಎಂದು ದೂರಿದರು.
ನಮ್ಮದು ಕೃಷಿ ಪ್ರಧಾನ ದೇಶ,ರೈತ ಈ ದೇಶದ ಬೆನ್ನೆಲುಬು ಎಂದು ಉದ್ದುದ್ದ ಭಾಷಣ ಬಿಗಿಯುವ ರೈತರ ಹೆಸರಲ್ಲಿ ಅಧಿಕಾರಕ್ಕೆ ಬರುವ ಪಕ್ಷ ಸರ್ಕಾರ, ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದ ನಂತರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಪ್ರಧಾನಿ ಆದಾಗ 2025ರ ವೇಳೆಗೆ ಕೃಷಿಕರ ಆದಾಯ ದ್ವಿಗುಣ ಮಾಡುವುದಾಗಿ ಭರವಸೆ ನೀಡಿ, ಕೃಷಿ ಉಪ ಕಸುಬುಗಳಿಗೆ ಪ್ರೋತ್ಸಾಹ ನೀಡುವ ಅನೇಕ ಯೋಜನೆಗಳನ್ನು ಆರಂಭಿಸಿದ್ದರು ಆದರೆ 2025 ಮುಗಿಯುತ್ತಾ ಬಂದಿದೆ ರೈತರ ಆದಾಯ ದ್ವಿಗುಣ ಆಗಿಲ್ಲ ಆದರೆ ಈಗಾಗಲೆ ಮೋದಿ ಅವರು ಆರಂಭಿಸಿದ ಕೃಷಿ ಉಪ ಕಸುಬುಗಳ ಪ್ರೋತ್ಸಾಹದ ಆ್ಯಪ್ ಮಾತ್ರ ನಿಷ್ಕ್ರಿಯವಾಗಿದೆ ಎಂದರು.
ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ರೈತ 44 ಸಾವಿರ ರೂಪಾಯಿ ವಂತಿಗೆ ಕಟ್ಟಿದರೆ, ಸರ್ಕಾರ ಇನ್ನುಳಿದ ಹಣ ಭರಿಸಿ 19 ಕುರಿ, ಒಂದು ಟಗರನ್ನು ರೈತನಿಗೆ ಉಚಿತವಾಗಿ ನೀಡುತ್ತಿದ್ದರು ಈ ರೀತಿದು ಕುರಿಸಾಕಣೆ ಉಪ ಕಸುಬು ಪ್ರೋತ್ಸಾಹಿಸುವ ಯೋಜನೆಯನ್ನು ಇದೀಗ ಸಿದ್ದರಾಮಯ್ಯ ಅವಧಿಯಲ್ಲೇ ನಿಲ್ಲಿಸಿರುವುದು ರೈತರನ್ನು ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹೈನುಗಾರರು ಮತ್ತು ರೇಷ್ಮೆ ಬೆಳೆಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈತರನ್ನು ಉಳಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಅನೇಕ ರೈತ ಪ್ರಮುಖ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗಿದೆ ಇನ್ನೂ ಹಲವು ಸುತ್ತಿನ ಮಾತುಕತೆ ನಡೆಸಬೇಕಿದೆ ಮುಂದಿನ ದಿನಗಳಲ್ಲಿ ಎಲ್ಲಾ ರೈತ ಪರ ಸಂಘಟನೆಗಳನ್ನು ಒಕ್ಕೂಟದ ವೇದಿಕೆಯಡಿ ಸಂಘಟಿಸ ಲಾಗುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೃಷಿಕರಿಗೆ ಸಿಗಬೇಕಾದ ಸವಲತ್ತುಗಳು ಹಾಗು ಯೋಜನೆಗಳನ್ನು ಸಿಗುವಂತೆ ಮಾಡಲಾಗುವುದುಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರೈತಮುಖಂಡರಾದ ವೀರಾಪುರ ರಾಮಣ್ಣ ಬಶೆಟ್ಟಹಳ್ಳಿ ನರಸಿಂಹಗೌಡ ,ವೆಂಕಟಸ್ವಾಮಪ್ಪ, ನರಸಿಂಹಪ್ಪ , ರಘು ಮತ್ತಿತರರು ಭಾಗವಹಿಸಿದ್ದರು.