ದೇವೇಗೌಡರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಸೇವಾದಳ ಬದ್ಧ : ಬಸವರಾಜ್ ಪಾದಯಾತ್ರಿ
ವಿಜಯ ದರ್ಪಣ ನ್ಯೂಸ್….
ದೇವೇಗೌಡರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಸೇವಾದಳ ಬದ್ಧ : ಬಸವರಾಜ್ ಪಾದಯಾತ್ರಿ
ಹಾಸನ : ಇಡೀ ದೇಶದಲ್ಲಿ ತೃತೀಯ ರಂಗ ಸ್ಥಾಪನೆ ಮಾಡಿ ಪ್ರಾದೇಶಿಕ ಶಕ್ತಿಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯದಲ್ಲಿ ಜನತಾ ಪಕ್ಷ ಜನತಾ ರಂಗ ಜನತಾದಳ ಕರ್ನಾಟಕ ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ಬಗ್ಗೆ ರೈಲ್ವೆ ನೀರಾವರಿ ಇಂತಹ ಬಹಳಷ್ಟು ಅಭಿವೃದ್ಧಿ ಯೋಜನೆಗಳ ಬಗ್ಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇವೇಗೌಡರ ಸಲಹೆಗಳನ್ನು ಪರಿಗಣಿಸಿ ರಾಜಕೀಯ ಅಭಿವೃದ್ಧಿ ಕಾರ್ಯಗಳನ್ನು ನೀಡುತ್ತಿದ್ದಾರೆ ಇಡೀ ದೇಶದಲ್ಲಿ ಪ್ರಪ್ರಥಮ ಬಾರಿಗೆ ಏತ ನೀರಾವರಿ ಜಾರಿಗೆ ತಂದಿದ್ದು ಕರ್ನಾಟಕದಲ್ಲಿ ದೇವೇಗೌಡರು ಪ್ರಪ್ರಥಮವಾಗಿ ಲಕ್ಷಾಂತರ ರೈತರಿಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ದೇವೇಗೌಡರ ಪ್ರತಿಮೆ ನಿರ್ಮಾಣ ಮಾಡಿರುವುದು ಇತರೆ ರಾಜ್ಯಗಳಲ್ಲಿಯೂ ದೇವೇಗೌಡರ ನೀರಾವರಿಯ ಕೊಡುಗೆಯನ್ನು ಕಂಡು ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಅವರ ನೀರಾವರಿ ಕಾಳಜಿ ರೈತರ ಕಾಳಜಿ ನಾವು ಜಾತ್ಯಾತೀತವಾಗಿ ಪಕ್ಷಾತೀತವಾಗಿ ವ್ಯಕ್ತಿಗತವಾಗಿ ಅವರ ಕೆಲಸ ಕಾರ್ಯಗಳನ್ನು ಸ್ಮರಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಪ್ರದೇಶ ಜನತಾದಳ ಜಾತ್ಯತೀತ ಪಕ್ಷದ ಸೇವಾದಳ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ವಕ್ತಾರರು ಆಗಿರುವ ಬಿ ಎನ್ ಬಸವರಾಜ್ ಪಾದಯಾತ್ರಿ ಹೇಳಿದರು.
ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆದ ಧರ್ಮಸ್ಥಳ ಸತ್ಯ ಯಾತ್ರೆಯಲ್ಲಿ ಪಾಲ್ಗೊಂಡು ತಾಲೂಕಿನ ಶ್ರೀ ಕೋಡಿಮಠ ಶ್ರೀಗಳ ಆಶೀರ್ವಾದ ಪಡೆದು ನಂತರ ಬೆಂಗಳೂರಿಗೆ ತೆರಳುವ ವೇಳೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬರುವ ದಿನಗಳಲ್ಲಿ ಎಚ್ ಡಿ ದೇವೇಗೌಡರ ಮಾರ್ಗದರ್ಶನದಲ್ಲಿ ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ರಾಜ್ಯಾದ್ಯಂತ ಜೆಡಿಎಸ್ ಸೇವಾದಳದಿಂದ ಪಕ್ಷ ಸಂಘಟನೆಗೆ ಬದ್ಧ ಇರುವುದಾಗಿ ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸೇವಾದಳದ ಕಾರ್ಯಕರ್ತರು ಸೈನಿಕರಂತೆ ಕೆಲಸ ನಿರ್ವಹಿಸಲಾಗುವುದು ಎಂದು ಬಸವರಾಜ್ ಪಾದಯಾತ್ರೆ ಹೇಳಿದರು.
ರಾಜ್ಯ ಸೇವಾದಳ ಪ್ರಧಾನ ಕಾರ್ಯದರ್ಶಿ ಎಮ್ ವೆಂಕಟೇಶಯ್ಯ ಯಲಹಂಕ ಹೋಬಳಿ ಅಧ್ಯಕ್ಷ ಸುರೇಶ್. ಪಕ್ಷದ ಮುಖಂಡರಾದ ಗೋಪಾಲಗೌಡ ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು