ರಾಜೀವ್‌ಗಾಂಧಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಎಚ್.ಎಸ್.ರುದ್ರೇಶಮೂರ್ತಿ ಭಾಜನ
ವಿಜಯ ದರ್ಪಣ ನ್ಯೂಸ್….
ರಾಜೀವ್‌ಗಾಂಧಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಎಚ್.ಎಸ್.ರುದ್ರೇಶಮೂರ್ತಿ ಭಾಜನ
ಶಿಡ್ಲಘಟ್ಟ : ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರು ಪ್ರಸಕ್ತ ಸಾಲಿನ ರಾಜೀವ್‌ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಕೆಪಿಸಿ ಜೋಡೋ ಭಾರತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್, ಎಐಸಿಸಿ ಹರಿಯಾಣ ಉಸ್ತುವಾರಿ ಬಿ.ಕೆ.ಹರಿಪ್ರಸಾದ್, ಶಿಕ್ಷಣತಜ್ಞ ವಿ.ಪಿ.ನಿರಂಜನಾರಾಧ್ಯ. ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಟೀಚರ್ಸ್ ಫೆಡರೇಷನ್ ನಾ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ, ಕಾರ್ಯದರ್ಶಿ ಹರಿಗೋವಿಂದನ್, ಮತ್ತಿತರರು ಪಾಲ್ಗೊಂಡಿದ್ದ ಸಭೆಯಲ್ಲಿ
ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಹುಮುಖ ವ್ಯಕ್ತಿತ್ವಕ್ಕೆ ಸಂದ ಗೌರವ : ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರದ್ದು ಬಹುಮುಖ ವ್ಯಕ್ತಿತ್ವ ಉತ್ತಮ ಶಿಕ್ಷಕರಾಗಿದ್ದು ಕೃತಕ ಬುದ್ದಿಮತ್ತೆ ಬಳಕೆ, ಇ-ಕಂಟೆಂಟ್ ತಯಾರಿ, ಆಡಿಯೋ ಮತ್ತು ವೀಡಿಯೋ ಪಾಠಗಳ ತಯಾರಿಕೆ, ಕಲಿಕಾಫಲಾಧಾರಿತ ಪ್ರಶ್ನೆಕೋಠಿ ತಯಾರಿಕೆ, ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿಗಳಂತಹ ಕಾರ್ಯಗಳಲ್ಲಿ ಇಲಾಖೆಯಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಶಿಕ್ಷಕಪರ್ವ, ನಿಷ್ಟಾ, ದೀಕ್ಷಾಗಳಿಗೂ ಸಂಪನ್ಮೂಲ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ,ರಾಜ್ಯ, ಜಿಲ್ಲಾ ಮಟ್ಟದ ಶಿಕ್ಷಕರ ತರಬೇತಿ ಕಾರ್ಯಾಗಾರಗಳಲ್ಲಿ ಸಾಹಿತ್ಯ ರಚನೆ, ತರಬೇತಿ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯಿಕ, ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ.
ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಪರಿಸರ ಉತ್ತಮಪಡಿಸುವಲ್ಲಿ ಸಕ್ರಿಯವಾಗಿದ್ದು, ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ವಿಶೇಷ ತರಬೇತುಗೊಳಿಸುವ ಮೂಲಕ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಂತಹ ಪರೀಕ್ಷೆಗಳಲ್ಲಿ ಗ್ರಾಮೀಣಭಾಗದ ವಿದ್ಯಾರ್ಥಿಗಳು ಆಯ್ಕೆಯಾಗಲು ಶ್ರಮಿಸುತ್ತಿದ್ದಾರೆ.
ಏಕ್‌ಭಾರತ್ ಶ್ರೇಷ್ಟ ಭಾರತ್, ಮಿಶನ್‌ಲೈಫ್ ಇಕೋಕ್ಲಬ್, ಜಲಶಕ್ತಿ ಅಭಿಯಾನ್‌ನಂತಹ ರಾಷ್ಟೀಯ ಕಾರ್ಯಕ್ರಮಗಳನ್ನು ಮಾದರಿಯಾಗಿ ಅನುಷ್ಟಾನಗೊಳಿಸಿದ್ದು, “ಹಸಿರು ಸುಗಟೂರು” ಮನೆಮನೆಗೆ ಸಸಿ ವಿತರಿಸಿ ಪೋಷಿಸಲು ಜಾಗೃತಿ ಮೂಡಿಸಿದ ಕಾರ್ಯಕ್ರಮವು ರಾಜ್ಯಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.