ಗ್ರಾಮೀಣ ಮಕ್ಕಳಿಗೂ ಕೃತಕಬುದ್ಧಿಮತ್ತೆ ಪ್ರಚಲಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಬೇಕು
ವಿಜಯ ದರ್ಪಣ ನ್ಯೂಸ್…
ಗ್ರಾಮೀಣ ಮಕ್ಕಳಿಗೂ ಕೃತಕಬುದ್ಧಿಮತ್ತೆ ಪ್ರಚಲಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಬೇಕು

ಶಿಡ್ಲಘಟ್ಟ : ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ತಂತ್ರಜ್ಞಾನಾಧಾರಿತ ಶಿಕ್ಷಣ, ಕೃತಕಬುದ್ಧಿಮತ್ತೆ ಕುರಿತ ತರಬೇತಿಯಂತಹ ಪ್ರಚಲಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಬೇಕಿದೆ ಎಂದು
ಬೆಂಗಳೂರು ಜಲಮಂಡಳಿಯ ಸಹಾಯಕ ಅಭಿಯಂತರ ದಿನೇಶ್ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯಾಧುನಿಕ ಎಲ್‌ಇಡಿ ಟಿವಿ, ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಲಾಖೆಯೊಂದಿಗೆ ಸಮುದಾಯ ಸಹಕರಿಸಬೇಕಿದೆ ಶಿಕ್ಷಕರು ಮಕ್ಕಳ ಶೈಕ್ಷಣಿಕಾಭಿವೃದ್ಧಿಯಲ್ಲಿ ಪ್ರಮುಖ ಭಾಗೀದಾರರಾಗಿ ಪಾತ್ರ ವಹಿಸಬೇಕು ಎಂದರು.
ಕಳೆದ ಜೂನ್‌ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಹಸಿರು ಸುಗಟೂರು ಆಂದೋಲನದ ಮೂಲಕ ಸುಮಾರು ೬೦೦೦ ಗಿಡಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಗಿದೆ ಆ ಗಿಡಗಳನ್ನು ರೈತರು ಖಾಲಿಜಾಗ, ಜಮೀನುಗಳಲ್ಲಿ ನೆಟ್ಟಿದ್ದು ಉತ್ತಮವಾಗಿ ಪೋಷಿಸಿದವರನ್ನು ಗುರುತಿಸಿ ಮುಂಬರುವ ಜೂನ್‌ನಲ್ಲಿ ಪ್ರಮಾಣಪತ್ರ ವಿತರಿಸಿ ಸನ್ಮಾನಿಸಲಾಗುವುದು ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ,
ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅಗತ್ಯವಾದ ಕೃತಕ ಬುದ್ಧಿಮತ್ತೆ ಆಪ್‌ಗಳ ಪರಿಚಯ ಮಾಡಿಕೊಡಲಾಗುತ್ತಿದೆ ವಿದ್ಯಾರ್ಥಿಗಳಲ್ಲಿ ಛಲ, ಆತ್ಮವಿಶ್ವಾಸ, ಸಮಯಪ್ರಜ್ಞೆ, ನಿರಂತರ ಶ್ರಮ ಗುರುಹಿರಿಯರಲ್ಲಿ ಗೌರವಾದರ ಭಾವನೆಗಳು ಹೆಚ್ಚಬೇಕು ಎಂದು ಹೇಳಿದರು.
ಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಾಗಲೇ ಉಚಿತ ತರಬೇತಿ ನೀಡಲಾಗುತ್ತಿದ್ದು ಎನ್‌ಎಂಎಂಎಸ್ ನಂತಹ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ನಂದಿನಿ ದಿನೇಶ್ ಅವರು ಶಾಲೆಗೆ ಅತ್ಯಾಧುನಿಕ ಟಿವಿ ಹಸ್ತಾಂತರಿಸಿದರು ಹಾಗು ಶಾಲೆಗೆ ಗಿಡಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಮಾಜಿ ಸದಸ್ಯ ಬಚ್ಚೇಗೌಡ, ಗ್ರಾಮದ ರಾಮಚರಣ್, ನಂದಿನಿ,ತ್ರಿಷಿಕಾ, ಶಿಕ್ಷಕರಾದ ಟಿ.ಎಂ.ಮಧು, ಬಿ.ನಾಗರಾಜು, ತಾಜೂನ್ ಮತ್ತಿತರರು ಹಾಜರಿದ್ದರು.
