ಕಾರ್ಮಿಕರಿಗೆ ಚಾಕು ತೋರಿಸಿ ಮೊಬೈಲ್‍ಗಳನ್ನು ದೋಚಿ ಪರಾರಿ
ವಿಜಯ ದರ್ಪಣ ನ್ಯೂಸ್….
ಕಾರ್ಮಿಕರಿಗೆ ಚಾಕು ತೋರಿಸಿ ಮೊಬೈಲ್‍ಗಳನ್ನು ದೋಚಿ ಪರಾರಿ

ಶಿಡ್ಲಘಟ್ಟ : ತಾಲ್ಲೂಕಿನ ಎಚ್.ಕ್ರಾಸ್ ಬಳಿ ಕಾರಿನಲ್ಲಿ ಆಗಮಿಸಿದ ಇಬ್ಬರು ದರೋಡೆಕೋರರು ಕಾರ್ಮಿಕರಿಗೆ ಚಾಕು ತೋರಿಸಿ ಕಾರ್ಮಿಕರ ಬಳಿಯಿದ್ದ ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮೊಬೈಲ್‍ಗಳನ್ನು ದೋಚಿ ಪರಾರಿಯಾಗುವ ಭರದಲ್ಲಿ ಕಾರು ಪಲ್ಟಿಯಾಗಿ ಮುಗಿಚಿಬಿದ್ದು ಸ್ಥಳದಲ್ಲೆ ಒಬ್ಬ ಮೃತಪಟ್ಟಿದ್ದು ಇನ್ನೊಬ್ಬನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ತಾಲೂಕಿನ ಎಚ್.ಕ್ರಾಸ್ ಮಾರ್ಗದ ಹಾರಡಿ ಬಳಿ ಟೈಲ್ಸ್ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ನಾಲ್ವರು ಕಾರ್ಮಿಕರು ಕೆಲಸ ಬಿಟ್ಟು ಸ್ವಂತ ಊರಿಗೆ ತೆರಳಲು ಬಸ್‍ಗಾಗಿ ಎಚ್.ಕ್ರಾಸ್‍ಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ನಾಲ್ವರ ಪೈಕಿ ಮೂವರ ಬಳಿ ಮೊಬೈಲ್‍ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಅದೇ ಸಮಯಕ್ಕೆ ರಾತ್ರಿ ಗಸ್ತು ಮುಗಿಸಿ ಠಾಣೆಗೆ ವಾಪಸ್ ಆಗುತ್ತಿದ್ದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಎಸ್‍ಐ ಅವರ ಜೀಪನ್ನು ನಿಲ್ಲಿಸಿದ ಕೂಲಿ ಕಾರ್ಮಿಕರು ನಡೆದ ಘಟನೆಯನ್ನು ವಿವರಿಸಿದ್ದಾರೆ,ಕೂಡಲೆ ಕೂಲಿ ಕಾರ್ಮಿಕರ ಮೊಬೈಲ್‍ಗಳು ದರೋಡೆಕೋರರ ಬಳಿ ಇದ್ದ ಕಾರಣ ಮೊಬೈಲ್ ಟವರ್ ಲೊಕೇಷನ್‍ನ್ನು ತಿಳಿದುಕೊಂಡು ಪೊಲೀಸರು ದರೋಡೆಕೋರರ ಕಾರನ್ನು ಹಿಂಬಾಲಿಸಿದ್ದಾರೆ,
ಆದರೆ ಅಷ್ಟರಲ್ಲಿ ದರೋಡೆ ಕೋರರ ಕಾರು ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೋದಗೂರು ಮಳಮಾಚನಹಳ್ಳಿ ಮದ್ಯೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ 25 ವರ್ಷದ ಸಿದ್ದು ಅಲಿಯಾಸ್ ಸಿದ್ದೇಶ್ ಮೃತಪಟ್ಟಿದ್ದಾನೆ.
ಸಿದ್ದೇಶ್ ಮೂಲತಃ ಆಂಧ್ರದ ಚಿತ್ತೂರಿನವನಾಗಿದ್ದು ಲಾರಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡು ಕಳೆದ ಮೂರು ವರ್ಷಗಳಿಂದಲೂ ಹೆಂಡತಿ ಜತೆ ಕೈವಾರದಲ್ಲಿ ನೆಲೆಸಿದ್ದ ಎನ್ನಲಾಗಿದೆ.
ಇನೊಬ್ಬ ಕನ್ನಮಂಗಲ ವಾಸಿ ವೈಶಾಖ್ ಕೂಡ ಲಾರಿ ಡ್ರೈವರ್ ಕೆಲಸ ಮಾಡಿಕೊಂಡು ಕೈವಾರದಲ್ಲಿ ನೆಲೆಸಿದ್ದು ಸಿದ್ದೇಶ್ ಮತ್ತು ವೈಶಾಖ್ ಇಬ್ಬರು ಪರಿಚಿತರಾಗಿದ್ದು ಲಾರಿ ಡ್ರೈವರ್ ಕೆಲಸದ ಜತೆಗೆ ದರೋಡೆ ಕೃತ್ಯಗಳಲ್ಲಿ ಭಾಗಿ ಆಗಿದ್ದಾರೆ, ಇಬ್ಬರೂ ಕುಡಿತದ ದಾಸರಾಗಿದ್ದು ಮೊಬೈಲ್ ದರೋಡೆ ಸಮಯದಲ್ಲೂ ವಿಪರೀತ ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಪ್ರಕರಣ ದಾಖಲಿಸಿಕೊಂಡ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಎಸ್ಪಿ ಕುಶಲ್ ಚೌಕ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲು ಸೂಚಿಸಿದ್ದಾರೆ.
&&&&&&&&&₹₹₹₹₹₹₹&&&&&&&&&
ಆರೋಗ್ಯ ಸಂಜೀವಿನಿ ಸೌಲಭ್ಯಗಳಂತಹ ಯೋಜನೆಗಳು ಎಲ್ಲಾ ಸರ್ಕಾರಿ ನೌಕರರಿಗೂ ಬಹು ಉಪಯುಕ್ತವಾಗಿವೆ : ಕೆ ಎನ್ ಸುಬ್ಬಾರೆಡ್ಡಿ

ಶಿಡ್ಲಘಟ್ಟ : ನೌಕರರು ಮತ್ತು ಅವಲಂಬಿತರಿಗೆ ಆರೋಗ್ಯ ಸಂಜೀವಿನಿ, ಸ್ಯಾಲರಿ ಅಕೌಂಟ್ ಮೂಲಕ ಸಾಲಸೌಲಭ್ಯಗಳನ್ನು ಒದಗಿಸುವುದು, ವಿಮಾ ಸೌಲಭ್ಯ, ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮತ್ತು ಋತುಚಕ್ರ ರಜಾ ಸೌಲಭ್ಯಗಳಂತಹ ಯೋಜನೆಗಳು ಎಲ್ಲಾ ಸರ್ಕಾರಿ ನೌಕರರಿಗೂ ಬಹು ಉಪಯುಕ್ತವಾಗಿವೆ ಎಂದುಸರ್ಕಾರಿ ನೌಕರರ ಸಂಘದ ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸರ್ವಸದಸ್ಯರ ಸಭೆ, ನೂತನ ನಿರ್ದೇಶಕರ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಕ್ಕುಗಳ ರಕ್ಷಣೆ, ಆರೋಗ್ಯ ಸಂಜೀವಿನಿಯಂ
ತಹ ಕಾರ್ಯಕ್ರಮಗಳ ಮೂಲಕ ಆರೋಗ್ಯಸೌಲಭ್ಯಗಳ ವಿಸ್ತರಣೆ, ವೇತನ ತಿದ್ದುಪಡಿ ಮತ್ತು ಹೆಚ್ಚಳದಂತಹ ಅನೇಕ ನೌಕರ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಬಹುಪಯೋಗಿ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮತ್ತು ತಂಡದವರ ಶ್ರಮವು ಶ್ಲಾಘನೀಯವಾದುದು ಎಂದು ಸಭೆಯಲ್ಲಿ ಮಂಡಿಸಿದರು.
ಶಾಸಕರ ಸಹಕಾರಕ್ಕೆ ಧನ್ಯವಾದ : ತಾಲ್ಲೂಕಿನಲ್ಲಿ ನೆನೆಗುದಿಗೆ ಬಿದ್ದಿದ್ದ ಗುರುಭವನ ಮತ್ತು ಸರ್ಕಾರಿ ನೌಕರರ ಭವನ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡು ೨೦೨೬ ರ ವೇಳೆಗೆ ಪೂರ್ಣಗೊಳಿಸುವ ಭರವಸೆ ನೀಡಿದಂತೆ ಈಗಾಗಲೇ ನೌಕರರ ಭವನದ ನೆಲಮಹಡಿ ಮತ್ತು ಒಂದನೇ ಮಹಡಿಯ ನಿರ್ಮಾಣ ಮುಕ್ತಯಾದ ಹಂತದಲ್ಲಿದ್ದು ಅದಕ್ಕೆ ಸಂಪೂರ್ಣ ಅನುದಾನ ಒದಗಿಸಿರುವ ಶಾಸಕ ಬಿ.ಎನ್.ರವಿಕುಮಾರ್ ಅವರ ಕಾಳಜಿಯನ್ನು ಈ ವೇಳೆ ಅವರು ಅಭಿನಂದಿಸಿದರು.
ನೌಕರರ ಭವನದ ೩ ನೇ ಮಹಡಿಯ ನಿರ್ಮಾಣ ಮತ್ತು ಗುರುಭವನ ನಿರ್ಮಾಣಕ್ಕೆ ಈಗಾಗಲೇ ಅನುದಾನ ಹೊಂದಿಸಲಾಗುತ್ತಿದ್ದು ಶಾಸಕರ ಸಹಕಾರ ಅಗತ್ಯವಿದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಸಂಜೀವಿನಿ ಯೋಜನೆಯ ಮೂಲಕ ಈಗಾಗಲೇ ಅನೇಕ ನೌಕರರಿಗೆ ಅನುಕೂಲವಾಗಿದೆ, ಸಂಘದ ನೌಕರಸ್ನೇಹಿಯಾದ ಯೋಜನೆಗಳ ಅನುಷ್ಟಾನದಲ್ಲಿ ಬರಬಹುದಾದ ಎಲ್ಲಾ ತಾಂತ್ರಿಕಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ವಿಸ್ತರಿಸುವ ಅಗತ್ಯವಿದೆ ಎಂದರು.
ನೌಕರರ ಸಂಘದ ಖಜಾಂಚಿ ವಸಂತಕುಮಾರ್ ಅವರು ಆಯವ್ಯಯ ಮಂಡಿಸಿ ಅನುಮೋದನೆ ಪಡೆದರು.
ಸಂಘದ ಸುಮಾರು ೫ ಲಕ್ಷ ರೂ ಉಳಿತಾಯ ಮಾಡಿರುವುದಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿ ಎ.ಎಂ.ಕೆಂಪೇಗೌಡ, ರಾಜ್ಯಪರಿಷತ್ ಸದಸ್ಯ ಟಿ.ಟಿ.ನರಸಿಂಹಪ್ಪ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರಸ್ವತಮ್ಮ, ಮಂಜುನಾಥ್, ಆರೋಗ್ಯ ಇಲಾಖೆಯ ದೇವರಾಜು,ಎನ್.ಮೂರ್ತಿ, ಶ್ರೀನಾಥ್‌ರೆಡ್ಡಿ ಸಭೆ ಕುರಿತು ಮಾತನಾಡಿದರು.
ವಿವಿಧ ಕಾರಣಗಳಿಂದ ತೆರವಾದ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಹೊಸಬರನ್ನು ಆಯ್ಕೆ
ಮಾಡಿಕೊಳ್ಳಲಾಯಿತು, ನಾಮನಿರ್ದೇಶಿತ ನಿರ್ದೇಶಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಸಂಘದ ಪದಾಧಿಕಾರಿಯಾಗಿ ಸೇವೆಸಲ್ಲಿಸಿ ವರ್ಗಾವಣೆಗೊಂಡಿರುವ ಪಿಡಿಒ ರಮಾಕಾಂತ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
