ಕರ್ನಾಟಕ ಅತ್ಯಂತ ಶಿಸ್ತುಬದ್ಧ ಮತ್ತು ಬ್ಲೂ-ಚಿಪ್ ಕ್ರಿಪ್ಟೊ ಮಾರುಕಟ್ಟೆಗಳಲ್ಲಿ ಒಂದಾಗಿದೆ: ಕಾಯಿನ್ ಸ್ವಿಚ್ ವಾರ್ಷಿಕ ವರದಿ
ವಿಜಯ ದರ್ಪಣ ನ್ಯೂಸ್….
ಕರ್ನಾಟಕ ಅತ್ಯಂತ ಶಿಸ್ತುಬದ್ಧ ಮತ್ತು ಬ್ಲೂ-ಚಿಪ್ ಕ್ರಿಪ್ಟೊ ಮಾರುಕಟ್ಟೆಗಳಲ್ಲಿ ಒಂದಾಗಿದೆ: ಕಾಯಿನ್ ಸ್ವಿಚ್ ವಾರ್ಷಿಕ ವರದಿ

ಕರ್ನಾಟಕ, ಡಿಸೆಂಬರ್ 15, 2025: ಭಾರತದ ಅತ್ಯಂತ ದೊಡ್ಡ ಕ್ರಿಪ್ಟೊ ಟ್ರೇಡಿಂಗ್ ಪ್ಲಾಟ್ ಫಾರಂ ಕಾಯಿನ್ ಸ್ವಿಚ್ ಇಂದು ತನ್ನ “ಇಂಡಿಯಾಸ್ ಕ್ರಿಪ್ಟೊ ಪೋರ್ಟ್ ಫೋಲಿಯೊ: ಹೌ ಇಂಡಿಯಾ ಇನ್ವೆಸ್ಟ್ಸ್(ಭಾರತದ ಕ್ರಿಪ್ಟೊ ಪೋರ್ಟ್ ಫೋಲಿಯೊ: ಭಾರತ ಹೇಗೆ ಹೂಡಿಕೆ ಮಾಡುತ್ತದೆ) ಎಂಬ ವರದಿಯ 2025ರ ಆವೃತ್ತಿ ಬಿಡುಗಡೆ ಮಾಡಿದ್ದು 2.5 ಕೋಟಿಗೂ ಹೆಚ್ಚು ಹೂಡಿಕೆದಾರರಿಂದ ಒಳನೋಟಗಳನ್ನು ಆಧರಿಸಿದೆ. ಇದು ಕರ್ನಾಟಕವನ್ನು ಭಾರತದ ಅತ್ಯಂತ ಕ್ರಮಬದ್ಧ ಮತ್ತು ರಿಸ್ಕ್ ಅರಿವನ್ನು ಹೊಂದಿದ ಕ್ರಿಪ್ಟೊ ಮಾರುಕಟ್ಟೆಗಳಲ್ಲಿ ಒಂದು ಎಂದು ಗುರುತಿಸಿದ್ದು ಅದಕ್ಕೆ ಬೆಂಗಳೂರಿನ ಸದೃಢ ತಂತ್ರಜ್ಞಾನ ಇಕೊಸಿಸ್ಟಂ ಮತ್ತು ಡಿಜಿಟಲ್ ಫೈನಾನ್ಸ್ ನ ಪ್ರಾರಂಭಿಕ ಪ್ರಭಾವ ಕಾರಣವಾಗಿದೆ ಎಂದು ಹೇಳಿದೆ.
ಕರ್ನಾಟಕವು ಭಾರತದ ಟಾಪ್ 10 ಕ್ರಿಪ್ಟೊ ಮಾರುಕಟ್ಟೆಗಳಲ್ಲಿ ಒಂದಾಗಿದ್ದು ದೇಶದ ಒಟ್ಟು ಹೂಡಿಕೆಯ ಮೌಲ್ಯದ ಶೇ.7.9ರಷ್ಟು ಕೊಡುಗೆ ನೀಡುತ್ತಿದೆ. ಇದರ ಪ್ರಗತಿಯು ಪ್ರಬುದ್ಧ ಹೂಡಿಕೆದಾರರ ವ್ಯಾಪ್ತಿಯನ್ನು ಬಿಂಬಿಸುತ್ತಿದ್ದು ದೀರ್ಘಾವಧಿ, ಉನ್ನತ ಲಿಕ್ವಿಡಿಟಿಯ ಡಿಜಿಟಲ್ ಸಂಪತ್ತಿನ ಕುರಿತು ಸದೃಢ ಅರಿವು ಕಾರಣವಾಗಿದೆ. ಯುವ ಹೂಡಿಕೆದಾರರು ಕರ್ನಾಟಕದಲ್ಲಿ ಚಟುವಟಿಕೆಯನ್ನು ಪ್ರಭಾವಿಸುತ್ತಿದ್ದು ಅದು ರಾಷ್ಟ್ರೀಯ ಜನಸಂಖ್ಯಾ ಪ್ರವೃತ್ತಿಗಳಿಗೆ ಪೂರಕವಾಗಿದೆ. ಶೇ.29.0ರಷ್ಟು ರಾಜ್ಯದ ಕ್ರಿಪ್ಟೊ ಹೂಡಿಕೆದಾರರು ಮಹಿಳೆಯರಾಗಿದ್ದಾರೆ ಮತ್ತು ಪುರುಷರು ಶೇ.71.0 ಇದ್ದಾರೆ.
ಕಾಯಿನ್ ಸ್ವಿಚ್ ಸಹ-ಸಂಸ್ಥಾಪಕ ಆಶಿಷ್ ಸಿಂಘಾಲ್, “2025 ಭಾರತದ ಕ್ರಿಪ್ಟೊ ಮಾರುಕಟ್ಟೆಗೆ ಸ್ಪಷ್ಟ ಪ್ರಬುದ್ಧತೆಯ ವರ್ಷವಾಗಿದೆ” ಎನ್ನುತ್ತಾರೆ. “ನಾವು ಹಿಂದಿನ ಪ್ರಾರಂಭಿಕ ಉತ್ಸಾಹದಿಂದ ಮುನ್ನಡೆದಿದ್ದು ಹೆಚ್ಚು ಮಾಹಿತಿಪೂರ್ಣ, ಅರಿವಿನಿಂದ ಕೂಡಿದ ನಿರ್ಧಾರಗಳನ್ನು ಕಾಣುತ್ತಿದ್ದೇವೆ. ಮೆಟ್ರೋಗಳು ಸದೃಢ ಆಸಕ್ತಿ ತೋರುತ್ತಿದ್ದರೂ ಭಾರತದಾದ್ಯಂತ ಮೆಟ್ರೋಗಳಲ್ಲದ ಪ್ರದೇಶಗಳಲ್ಲೂ ಅಳವಡಿಕೆ ಹೆಚ್ಚಾಗುತ್ತಿದ್ದು ಈಗ ಅದು ದೇಶದ ಶೇ.75ರಷ್ಟು ಕ್ರಿಪ್ಟೊ ಚಟುವಟಿಕೆಗೆ ಕಾರಣವಾಗಿವೆ” ಎಂದರು.
ರಾಜ್ಯದ ಪೋರ್ಟ್ ಫೋಲಿಯೊ ಮಿಶ್ರಣದಲ್ಲಿ ಶಿಸ್ತಿನ, ಸ್ಥಿರತೆ ಕೇಂದ್ರಿತ ವಿಧಾನವಿದೆ: ಶೇ.30.1ರಷ್ಟು ಬ್ಲೂ-ಚಿಪ್ ಸಂಪತ್ತುಗಳು, ಶೇ.31.2ರಷ್ಟು ಲಾರ್ಜ್ ಕ್ಯಾಪ್ ಗಳು, ಶೆ.17.6 ಮಿಡ್ ಕ್ಯಾಪ್ ಮತ್ತು ಶೇ.21.2ರಷ್ಟು ಸ್ಮಾಲ್ ಕ್ಯಾಪ್ ಗಳಲ್ಲಿ ಹೊಂದಿದೆ. ಬಿಟ್ ಕಾಯಿನ್ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಹೂಡಿಕೆಯಾದ ಸಂಪತ್ತಾಗಿದ್ದು ಎಕ್ಸ್.ಆರ್.ಪಿ. ಟ್ರೇಡಿಂಗ್ ಚಟುವಟಿಕೆಯಲ್ಲಿ ಮುಂದಿದೆ.
