ಯುವ ಸಮೂಹ ಕಲಾ ಪ್ರತಿಭೆಯ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಮನೋಸ್ಥೆರ್ಯವನ್ನು ಹೆಚ್ಚಿಸಿಕೊಳ್ಳಿ : ಪ್ರೊ.ಬಿ.ಎನ್.ಕೃಷ್ಣಪ್ಪ
ವಿಜಯ ದರ್ಪಣ ನ್ಯೂಸ್….
ಯುವ ಸಮೂಹ ಕಲಾ ಪ್ರತಿಭೆಯ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಮನೋಸ್ಥೆರ್ಯವನ್ನು ಹೆಚ್ಚಿಸಿಕೊಳ್ಳಿ : ಪ್ರೊ.ಬಿ.ಎನ್.ಕೃಷ್ಣಪ್ಪ

ದೇವನಹಳ್ಳಿ: ನಮ್ಮ ಸಾಂಸ್ಕೃತಿಕ ಸೊಗಡಿನ ಸಂಗೀತ,ಚಿತ್ರಕಲೆ ಮತ್ತು ನೃತ್ಯ ಸೇರಿದಂತೆ ಮೊದಲಾದ ಪ್ರತಿಭೆಗಳು ಒಳಗೊಂಡಂತೆ ಇಂದಿನ ಮಕ್ಕಳು ಮತ್ತು ಯುವ ಸಮೂಹ ಕಲಾ ಪ್ರತಿಭೆಯ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಮನೋಸ್ಥೆರ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಸಲಹೆ ನೀಡಿದರು.
ದೇವನಹಳ್ಳಿ ತಾಲೂಕಿನ ಅಂಜನಾದ್ರಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಮತ್ತು ಯುವ ಪ್ರತಿಭೆ ಎಂಬ ಜಿಲ್ಲಾ ಮಟ್ಟದ ವಿವಿಧ ಕಲಾ ಸ್ಪರ್ಧೆಯು ಕಲಾಪ್ರತಿಭೋತ್ಸವ -2025 ಎಂಬ ಶೀರ್ಷಿಕೆಯ ಕಾರ್ಯಕ್ರಮ ವನ್ನು ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ. ಬಿ.ಎನ್. ಕೃಷ್ಣಪ್ಪ ನೆರವೇರಿಸಿ ಮಾತನಾಡಿದರು.
ಅಂಜನಾದ್ರಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಾವ್ಯಶ್ರೀ ಮಾತನಾಡಿ ಪ್ರತಿಭೆ ಯಾರೋ ಒಬ್ಬರ ಸ್ವತ್ತಲ್ಲ, ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆಯನ್ನು ಹೊರ ತರುವ
ಒಂದು ಒಳ್ಳೆಯ ವೇದಿಕೆಯಾಗಿದೆ ಕಾರಣ 8 ರಿಂದ 30 ವರ್ಷದವರೆಗೂ ಮಕ್ಕಳು ಮತ್ತು ಯುವಕರು ಕಲಾ ಸ್ಪರ್ಧೆಯಲ್ಲಿ ಭಾಗವಹಿಸ ಬಹುದಾಗಿದೆ ಒಳ್ಳೆಯ ಪ್ರತಿಭೆಗಳನ್ನು ಬೆಳೆಸುವ ಒಂದು ಒಳ್ಳೆಯ ಸದುದ್ದೇಶ ದೊಂದಿಗೆ ಇಂತಹ ಅವಕಾಶವನ್ನು ಕಲ್ಪಿಸಲಾಗಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಬಾಲ ಕಲಾಪ್ರತಿಭೋತ್ಸವದಲ್ಲಿ ಪ್ರತಿಭೆಗಳಿಗಾಗಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ , ಚಿತ್ರಕಲೆ, ಜಾನಪದ ಗೀತೆ, ಹಿಂದುಸ್ತಾನಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಯುವ ಪ್ರತಿಭೆಗಳಿಗಾಗಿ ನನ್ನ ಮೆಚ್ಚಿನ ಸಾಹಿತಿ, ಶಾಸ್ತ್ರೀಯ ನೃತ್ಯ ಸುಗಮ ಸಂಗೀತ ಹಿಂದುಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಕರ್ನಾಟಕ ರಾಜ್ಯ ಸಂಗೀತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಪ್ರತಿಯೊಂದು ಸ್ಪರ್ಧೆಗೂ ವಿಜೇತರಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನದ ಪ್ರಶಂಸೆ ಪತ್ರ ಹಾಗೂ ನಗದು ಬಹುಮಾನಗಳನ್ನು ನೀಡಲಾಯಿತು
ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಧ , ಕರ್ನಾಟಕ ಕರ್ನಾಟಕ ಜಾನಪದ ಮೂರ್ತಿ, ಅಂಜನಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾವ್ಯಶ್ರೀ, ಚಲನಚಿತ್ರ ಗಾಯಕ ಮೋಹನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಆರ್ ಕೆ.ನಂಜೇಗೌಡ, ದೇವನಹಳ್ಳಿ ದೇವರಾಜ್ ಸೇರಿದಂತೆ ಹಲವು ಮುಖಂಡರು, ಮಕ್ಕಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿವರ್ಗ ಯುವ ಸಮೂಹ ಸ್ಪರ್ಧಿಗಳು, ಕಾಲೇಜಿನ ಭಾಗಿಯಾಗಿದ್ದರು
