ಸ್ವದೇಶಿ ದೃಷ್ಟಿಕೋನದಲ್ಲಿ ವಿಕಸಿತ ಭಾರತ ನಿರ್ಮಾಣವಾಗಬೇಕು : ಸಂಸದ ಯದುವೀರ ಒಡೆಯರ್ 

ವಿಜಯ ದರ್ಪಣ ನ್ಯೂಸ್……

ಸ್ವದೇಶಿ ದೃಷ್ಟಿಕೋನದಲ್ಲಿ ವಿಕಸಿತ ಭಾರತ ನಿರ್ಮಾಣವಾಗಬೇಕು : ಸಂಸದ ಯದುವೀರ ಒಡೆಯರ್ 

ಬೆಂಗಳೂರು:’ಸ್ವದೇಶಿ ದೃಷ್ಟಿಕೋನದಲ್ಲಿ ವಿಕಸಿತ ಭಾರತ ನಿರ್ಮಾಣವಾಗಬೇಕಿದೆ ಈ ನಿಟ್ಟಿನಲ್ಲಿ ಭಾರತೀಯ ಪರಂಪರೆಯ ನಿಜ ದರ್ಶನ ನೀಡುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕಿದೆ” ಎಂದು ಮೈಸೂರು ಹಾಗೂ ಕೊಡಗು ಸಂಸದ ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.

ರಾಮೋಹಳ್ಳಿ ಬಳಿಯ ಯೂನಿವರ್ಸಲ್ ಸಮೂಹ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಾಗೂ ರಜತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು

”ಈ ವಿಕಾಸ ಪರ್ವವು ದೇಶದ ಭವ್ಯ ಪರಂಪರೆ, ಸಂಸ್ಕೃತಿಯನ್ನು ಇಮ್ಮಡಿಗೊಳಿಸು ಇರಬೇಕು ಸ್ವಂತಿಕೆ, ವಂತೆ ಸ್ವಾಭಿಮಾನ ಉದ್ದೀಪನಗೊಳಿಸು ವಂತಿರಬೇಕು. ಕಾನೂನು ರೂಪಿಸುವುದು ಶಾಸಕಾಂಗದ ಕಾರ್ಯ. ಅದರ ಯಶಸ್ಸು ಹಾಗೂ ಸೋಲು ಅಧಿಕಾರಿ ವರ್ಗದ ಮೇಲೆ ನಿಂತಿದೆ. ನಿಷ್ಠಾವಂತ ಅಧಿಕಾರಿಗಳಿಂದಲೇ ಮೈಸೂರು ಸಂಸ್ಥಾನ ಇಂದಿಗೂ ಜನಮನ್ನಣೆ ಗಳಿಸಿದೆ,” ಎಂದರು.

ಯೂನಿವರ್ಸಲ್ ಸಮೂಹ ಸಂಸ್ಥೆಯ ಚೇರ್ಮನ್ ಆರ್ ಉಪೇಂದ್ರ ಶೆಟ್ಟಿ ಮಾತನಾಡಿ, “ತ್ಯಾಗ ಮತ್ತು ಪರಿಶ್ರಮದ ಫಲವಾಗಿ ಯೂನಿವರ್ಸಲ್ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. 8000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಅಧಿಕಾರಿಗಳಾಗಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ,” ಎಂದು ಸ್ಮರಿಸಿದರು.

ಅತ್ಯುತ್ತಮ ಅಂಕ ಗಳಿಸಿದ 100 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವುದಾಗಿ ಅವರು ಘೋಷಿಸಿದರು ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ 10 ಶಿಕ್ಷಕರನ್ನು ಸನ್ಮಾನಿಸ ಲಾಯಿತು.

ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಡಾ ಪ್ರಕಾಶ್ ಶೆಟ್ಟಿ ಐಆರ್‌ಎಸ್ ಅಧಿಕಾರಿ ಕೊಟ್ರಸ್ವಾಮಿ, ಅಶೋಕ್ ಚನ್ನೇಗೌಡ ಉಪಸ್ಥಿತರಿದ್ದರು.

₹₹₹₹₹₹₹₹₹########₹₹₹₹₹₹₹₹₹#######

ಅದೈತ್ ಹುಂಡೈ ಸಂಸ್ಥೆಯು ಗಣರಾಜ್ಯೋತ್ಸವ ಪ್ರಯುಕ್ತ ತನ್ನ ಉದ್ಯೋಗಿಗಳಿಗಾಗಿ ಹೊಸ ಏರ್‌ಪೋರ್ಟ್ ರಸ್ತೆಯ ಹುತ್ತನಹಳ್ಳಿ ನೈಸ್ ಕ್ರಿಕೆಟ್ ಆರೀನಾದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಿತ್ತು. 9 ತಂಡಗಳು ಭಾಗವಹಿಸಿ, ಹೊರವರ್ತುಲ ರಸ್ತೆ ಶಾಖೆ ತಂಡ ವಿಜಯಿಯಾಗಿ ಹೊರಹೊಮ್ಮಿತು. ಎಲ್.ಎನ್. ಅಜಯ್ ಸಿಂಗ್, ಶಶಿರಾವ್ ಪಾಲ್ಗೊಂಡಿದ್ದರು.

*******&&&&&&********&&&&&******†**

ಅಣು ವಿಜ್ಞಾನಿ ಅವರ ಜನ್ಮ ಶತಮಾನೋತ್ಸವದ ಆಚರಣೆ

ಬೆಂಗಳೂರು:ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲೆಯ ಆಶ್ರಯದಲ್ಲಿ ಭಾರತದ ಹೆಮ್ಮೆಯ ಅಣು ವಿಜ್ಞಾನಿ ಅವರ ಜನ್ಮ ಶತಮಾನೋತ್ಸವದ ಸಮಾರಂಭವನ್ನು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಸಂತ ಜೋಸಫರ ಫ್ರೀ ಯುನಿವರ್ಸಿಟಿ “ಫೇಬರ್ ಸಭಾಂಗಣ”ದಲ್ಲಿ ನಡೆಯಿತು.
ಡಾಕ್ಟರ್ ರಾಜಾರಾಮಣ್ಣ ಅವರು ಭಾರತದ ಅಣು ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಕುರಿತು ಡಾಕ್ಟರ್ ವೈ ಸಿ ಕಮಲಾ ಸಹಾಯಕ ಪ್ರಾಧ್ಯಾಪಕರು ಅವರು ( ವಿಜ್ಞಾನ ಲೇಖಕರು, ಸಂವಹನಾಕಾರರು) ಮಾತನಾಡಿದರು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ನಿರ್ಮಲ ರಘುನಂದನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಯದರು.

ಶ್ರೀ ಶುಭಾಂಕರ್ ಬಿಶ್ವಾಸ್, ಕಾರ್ಯದರ್ಶಿ, ಇಂಡಿಯನ್ ಅಕಾಡೆಮಿ ಸೈನ್ಸ್ ಸ್ಸ್ ಸಮಿತಿಯ ಬೆಂಗಳೂರು ಜಿಲ್ಲಾಧ್ಯಕ್ಷ ನಾ ಶ್ರೀಧರ್ ಮತ್ತು ಕಾರ್ಯದರ್ಶಿ ಎಂ ಲಕ್ಷ್ಮೀ ನರಸಿಂಹ ಅವರು ಸಭೆಯಲ್ಲಿ ಉಪಸ್ಥಿತರಿದ್ದರು