--Ads--

ಮೈಸೂರಿನಲ್ಲಿ ಕೆ.ಎಂ.ಕಾರ್ಯಪ್ಪ ಅವರ 127 ನೇ ಜನ್ಮ ಸ್ಮರಣೆ

On: January 28, 2026 3:53 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮೈಸೂರಿನಲ್ಲಿ ಕೆ.ಎಂ.ಕಾರ್ಯಪ್ಪ ಅವರ  127 ನೇ ಜನ್ಮ ಸ್ಮರಣೆ

ಮೈಸೂರು ತಾಂಡವಪುರ ಜನವರಿ 28: ಕೊಡವ ಸಮಾಜ ಮೈಸೂರು‌ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅಭಿಮಾನಿ ಬಳಗ ಮೈಸೂರು ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 127ನೇ ಜನ್ಮದಿನವನ್ನು ಆಚರಿಸಲಾಯಿತು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿರುವ ಪ್ರತಿಮೆ ಮುಂಭಾಗದ ನಡೆದ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ 127ನೇ ಜಯಂತಿ ಆಚರಣೆ ಸಮಾಜಕ್ಕೆ ಅತ್ಯಂತ ಶೋಭೆತರುವಂತಹದ್ದು. ಇಡೀ ದೇಶಕ್ಕೆ ಕೊಟ್ಟ ಅವರ ಕೊಡುಗೆ ಹಾಗೂ ಶೌರ್ಯಕ್ಕೆ ಅವರು ನಮಗೆಲ್ಲ ಆಪ್ಯಾಯ ಮಾನ್ಯರಾಗಿದ್ದಾರೆ.

ಈ ದೇಶಕ್ಕೆ ಕೊಡಗಿನ ಕೊಡುಗೆ ಅಪಾರ. ಕೊಡಗಿನ ಪರಂಪರೆಯಂತಹ ದೇಶ, ಪ್ರೇಮಿಗಳು, ವೀರರು ಮತ್ತೆಲ್ಲೂ ಹುಟ್ಟಲು ಸಾಧ್ಯವಿಲ್ಲ. ದೇಶಭಕ್ತಿ ಅವರಲ್ಲಿ ಪಾರಂಪರಿಕವಾಗಿ ಬೆಳೆದು ಬಂದಿದೆ. ಕೊಡವ ಸಮಾಜ ಸಣ್ಣ ಸಮುದಾಯವಾದರೂ ಸೈನ್ಯಕ್ಕೆ ಅವರ ಸೇವೆ ಬೃಹತ್ತಾಕಾರದ್ದು.

ಇಂತಹ ಪರಂಪರೆಯಲ್ಲಿ‌ ಹುಟ್ಟಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ‌ ಅವರ ಸ್ಮರಣೆ ಈ‌ ನಾಡಿಗೆ ದೊರಕಿರುವ ಸೌಭಾಗ್ಯ. ಎರಡನೇ ಮಹಾಯುದ್ಧ, ಸ್ವಾತಂತ್ರ್ಯ ಸಮಯದ ಅವರ ಸೇವೆ ಇಡೀ‌ ಜಗತ್ತಿಗೆ ಮಾದರಿ. ಭಾರತೀಯ ಸೈನ್ಯದ ಅತ್ಯುನ್ನತ ಪದವಿ ಫೀಲ್ಡ್ ಮಾರ್ಷಲ್ ಹುದ್ದೆ. ಇದು ಕೊಡವ ಸಮಾಜವಲ್ಲದೇ, ಕನ್ನಡ ನಾಡು ಹೆಮ್ಮೆ ಪಡುವಂತಹದ್ದು. ಅವರಿಗೆ ಭಾರತರತ್ನ ದೊರೆಯದೆ ಇರಬಹುದು.

ಆದರೆ ಫೀಲ್ಡ್ ಮಾರ್ಷಲ್‌ ಹುದ್ದೆ‌ದೊರಕಿದೆ. ಪ್ರಜಾಪ್ರಭುತ್ವ‌ ಭಾರತಕ್ಕೆ ಒಂದು ಉತ್ತಮ ಆಕಾರ ನೀಡಿ ಮುನ್ನಡೆಸಿದ್ದು, ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಅವರು. ಇವತ್ತಿಗೂ ಭಾರತೀಯ ಸೈನ್ಯದಲ್ಲಿ 30ಕ್ಕೂ ಹೆಚ್ಚು ಲೆಫ್ಟಿನೆಂಟ್ ಕರ್ನಲ್ ಸೈನಿಕರು ಹಾಗೂ ಭಾರತದ ಹಾಕಿ ಕ್ರೀಡೆಗೆ 5ಜನ ನಾಯಕ ಕ್ರೀಡಾಪಟುಗಳು, 6೦ಕ್ಕೂ ಹೆಚ್ಚು‌ ಆಟಗಾರರನ್ನು ಕೊಡವ ಸಮುದಾಯ‌ ದೇಶಕ್ಕೆ ನೀಡಿದೆ. ಇದಕ್ಕಾಗಿ‌‌ ಸಮುದಾಯ ಗರ್ವ, ಹೆಮ್ಮೆ‌ಪಡಬೇಕಿದೆ. ಸಮುದಾಯ‌ ಬೆಳೆಯಬೇಕಿದೆ. ಅದರಿಂದ ದೇಶ, ದೇಶಭಕ್ತಿ ಬೆಳೆಯುತ್ತದೆಂದರು.

ಮಾಜಿ‌ ಶಾಸಕ ಎಲ್.‌ನಾಗೇಂದ್ರ ಮಾತನಾಡಿ, ಇವತ್ತು ಇಡೀ ಜಗತ್ತು ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಅವರನ್ನು ಪ್ರತಿನಿತ್ಯ ಸ್ಮರಿಸಬೇಕಿದೆ. ಮೆಟ್ರೋಪಾಲ್ ವೃತ್ತದಲ್ಲಿ ಕಾರ್ಯಪ್ಪ ಅವರ ಪ್ರತಿಮೆ ಸ್ಥಾಪಿಸುವ ಸಂದರ್ಭದಲ್ಲಿ ಅನೇಕ ಅಡೆ ತಡೆಗಳು ಎದುರಾಗಿದ್ದವು. ಅದೆಲ್ಲವನ್ನು ಬದಿಗೊತ್ತಿ ಪ್ರತಿಮೆ ನಿಂತಿದೆ‌ ಇದು ಅತ್ಯಂತ‌ ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಸಾವಿರಾರು ಸಂಖ್ಯೆ ಸಮುದಾಯವರು ಒಂದೆಡೆ ಸೇರಿ ಕಾರ್ಯಪ್ಪ ಅವರ ಜಯಂತಿ ದೊಡ್ಡ‌ ಮಟ್ಟದಲ್ಲಿ ಮಾಡುವಂತಾಗಲಿ ಎಂದು ಹೇಳಿದರು.

ಮಾಜಿ ಮಹಾಪೌರ ಎಂ.ಜೆ.ರವಿಕುಮಾರ್‌, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭಾರತ್‌, ಎಂ.ಯು.ಸುಬ್ಬಯ್ಯ, ಚಾಮರಾಜ ಕ್ಷೇತ್ರದ ಬಿಜೆಪಿ ಮುಖಂಡರಾದ ದಿನೇಶ್‌ ಗೌಡ, ಪೊಂಜಂಡ ಎ.ಗಣಪತಿ, ಮುಕ್ಕಾಟಿರ ಸಿ.ಆಶೋಕ್‌, ನಾಯಕಂಡ ತಿಮ್ಮಯ್ಯ, ರವಿಕುಮಾರ್‌, ವಿ.ಎಸ್‌.ಕಿರಣ್‌, ಟಿನ್ನಿಸ್‌ ಗೋಪಿ, ಆರ್‌.ಪರಮೇಶ್‌ ಗೌಡ, ಶ್ರವಣ್‌ ಮಾಲಿ, ವಿನೋದ್‌, ಚರಣ್‌, ಕೃಷ್ಣನಾಯಕ್‌, ಹರೀಶ್‌, ಮಹೇಶ್‌, ಪ್ರಕಾಶ್‌ ಇನ್ನಿತರರು ಇದ್ದರು.

WhatsApp

Join Now

Telegram

Join Now

Instagram

Join Now