--Ads--

ಕಡಕೋಳ ಬಿಕೆಟಿ ಪಬ್ಲಿಕ್ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆದ ಶಾಲಾ ವಾರ್ಷಿಕೋತ್ಸವ

On: February 2, 2026 5:02 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕಡಕೋಳ ಬಿಕೆಟಿ ಪಬ್ಲಿಕ್ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆದ ಶಾಲಾ ವಾರ್ಷಿಕೋತ್ಸವ

ತಾಂಡವಪುರ ಫೆಬ್ರುವರಿ 3 ಮೈಸೂರು ಜಿಲ್ಲೆ ಕಡಕೋಳ ಗ್ರಾಮದ ಕಾಳಿ ಬೀರೇಶ್ವರ ದೇವಾಲಯ ಬಳಿ ಇರುವ ಬಿಕೆಟಿ ಪಬ್ಲಿಕ್ ಶಾಲೆಯಲ್ಲಿ 9ನೇ ವರ್ಷದ ಶಾಲಾ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಮೂಡ ಮಾಜಿ ಅಧ್ಯಕ್ಷರಾದ ಕೆ ಮರೇಗೌಡರವರು ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುತ್ತಿದ್ದು ಈ ಶಾಲೆಯ ಬೆಳವಣಿಗೆಗೆ ಮತ್ತು ಜಿಲ್ಲೆಯಲ್ಲ ರಾಜ್ಯದಲ್ಲೇ ಉತ್ತಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು ಈ ಶಾಲೆ ಆ ದಿಕ್ಕಿನಲ್ಲಿ ನಾವೆಲ್ಲರೂ ಶ್ರಮಿಸೋಣ ಶಾಲೆಯ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನವನ್ನು ಕೊಡಿಸುವ ಮೂಲಕ ಶಾಲೆ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲು ನಾನು ಕೂಡ ನನ್ನ ಕೈಲಾದಮಟ್ಟಿಗೆ ಸಹಾಯ ಮಾಡುತ್ತೇನೆ ಅಲ್ಲದೆ ಈ ಶಾಲೆಯ ಅಭಿವೃದ್ಧಿಗೆ ಹೆಚ್ಚು ಶ್ರಮ ವಹಿಸುತ್ತಿರುವ ಟ್ರಸ್ಟಿನ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಅಕ್ಕಪಕ್ಕ ಗ್ರಾಮದ ಮುಖಂಡರುಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಈ ಶಾಲೆಯ ಬೆಳವಣಿಗೆ ಎಲ್ಲರೂ ಕೈಜೋಡಿಸಿ ಎಂದು ಮರಿಗೌಡರು ಸಲಹೆ ನೀಡಿದರು.

ಕಾಳಿ ಬೀರಿಶ್ವರ ಟ್ರಸ್ಟಿನ ಅಧ್ಯಕ್ಷರು ಹಾಗೂ ಬಿಕೆಟಿ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ಬಿ ನಾಗರಾಜ್ ರವರು ಶಾಲೆಯಲ್ಲಿ 10ನೇ ತರಗತಿ ಶಿಕ್ಷಣ ಪಡೆದು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹ ನೀಡಿ ಮಾತನಾಡುತ್ತ ಈ ಶಾಲೆ ನನ್ನ ಶಾಲೆಯಲ್ಲ ನಮ್ಮ ಶಾಲೆ ಈ ಶಾಲೆ ರಥ ಇದ್ದಂತೆ ರಥವನ್ನು ಒಬ್ಬರಿಂದ ಎಳೆಯರು ಸಾಧ್ಯವಿಲ್ಲ ಎಲ್ಲರೂ ಕೈಜೋಡಿಸಿ ಎಳೆದರೆ ರಥವನ್ನು ಮುಂದಕ್ಕೆ ಎಳೆಯಲು ಸಾಧ್ಯ ಆದ್ದರಿಂದ ಈ ಶಾಲೆಯ ಸಂಸ್ಥಾಪಕ ಹಾಗೂ ಕಾಳಿ ಬೀರೇಶ್ವರ ಟ್ರಸ್ಟಿನ ಅಧ್ಯಕ್ಷರಾದ ನಾನು ಈ ಶಾಲೆಯನ್ನು ಇನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ತಾವೆಲ್ಲರೂ ಕೈಜೋಡಿಸಿದರೆ ರಥ ಹೇಗೆ ಮುಂದಕ್ಕೆ ಸಾಗುತ್ತದೆ ಹಾಗೆಯೇ ಈ ಶಿಕ್ಷಣ ಸಂಸ್ಥೆಯನ್ನು ರಾಜ್ಯದಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆ ಎಂದು ಹೇಳುವ ಹಾಗೆ ನಾನು ಸದಾ ದುಡಿಯಲು ಸಿದ್ದನಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ ಮರಿಗೌಡ ಸಂಸ್ಥೆಯ ಸಂಸ್ಥಾಪಕ ಬಿ ನಾಗರಾಜ್ ಪೊಲೀಸ್ ಅಧಿಕಾರಿ ಶೇಖರ್ ತಾಲೂಕ ಪಂಚಾಯತಿ ಮಾಜಿ ಸದಸ್ಯ ಶ್ರೀಕಂಠ ತೊಂಡೆಗೌಡ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜವರಪ್ಪ ಕಡಕೋಳ ಕುಮಾರಸ್ವಾಮಿ ಗೌಡಕ್ಕೆ ಮಹೇಶ್ ಹರೀಶ್ ವೇದಾಂತ್ ಕಾರ್ಯದರ್ಶಿ ಕೆಂಪೇಗೌಡ ನಂಜುಂಡೇಗೌಡ ಖಜಾಂಚಿ ಶ್ರೀ ಕೃಷ್ಣ ಕೆ ಟಿ ಶಿವಣ್ಣ ಟ್ರಸ್ಟಿನ ಸದಸ್ಯರಾದ ಸಿದ್ದರಾಮೇಗೌಡ, ಶಿವಕುಮಾರ ಸಿದ್ದಪ್ಪ ಹುಚ್ಚೇಗೌಡ ಕಾಳೇಗೌಡ ಕರಿಗೌಡ ಮಾದೇಗೌಡ ಜವರೇಗೌಡ ಚಂದ್ರು ರಾಜು ಪುಟ್ಟಪ್ಪ ಜಯಸ್ವಾಮಿ ರಾಕೇಶ ಮಾಲೆಗೌಡ ಡಾಬ ಚಂದ್ರು ಶಿವಲಿಂಗು ಶಂಭುಲಿಂಗು ಚನ್ನಬಸವ ಸುಬ್ಬೇಗೌಡ ನಾರಾಯಣ ನಾಯ್ಕ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳುಬಿಕೆಟಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಎಂ ಕುಮಾರಸ್ವಾಮಿ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಪೋಷಕರುಗಳು ಭಾಗಿಯಾಗಿದ್ದರು ಇದೇ ವೇಳೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆವತಿಯಿಂದ ಬಹುಮಾನ ವಿತರಿಸಲಾಯಿತು

WhatsApp

Join Now

Telegram

Join Now

Instagram

Join Now