ವಿಜಯ ದರ್ಪಣ ನ್ಯೂಸ್….
ಕಟಿಬದ್ಧರಾಗಿ ಕೆಲಸ ಮಾಡಿರಿ,
ಪಕ್ಷ ಸಂಘಟನೆಗೆ ದುಡಿಯಿರಿ
ಕಾಂಗ್ರೆಸ್ ವೀಕ್ಷಕ ರಾಜೇಶ್ ಠಾಗೋರ್ ಕರೆ

ತಾಂಡವಪುರ ಜುಲೈ 30: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಧ್ಯಕ್ಷರುಗಳು, ನಾಯಕರು, ಮುಖಂಡರು ಸೇರಿದಂತೆ ಎಲ್ಲರೂ ಪಕ್ಷದ ಬಲವರ್ಧನೆಗಾಗಿ ಮತ್ತಷ್ಟು ಕಟಿಬದ್ದರಾಗಿ ಕೆಲಸ ಮಾಡಬೇಕೆಂದು ಹಿರಿಯ ಮುಖಂಡರೂ ಹಾಗೂ ಕಾಂಗ್ರೆಸ್ ವೀಕ್ಷಕರೂ ಆದ ರಾಜೇಶ್ ಠಾಗೋರ್ ಕರೆ ನೀಡಿದರು.
ಮೈಸೂರು ಜಿಲ್ಲೆ ವರುಣ ವಿಧಾನಸಬಾ ಕ್ಷೇತ್ರದ ವರಕೋಡು ಗೇಟ್ ಬಳಿಯ ಬ್ಲೂ ವೆರ್ಸಲ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ ಅಭಿಯಾನ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಪಕ್ಷದ ನಾಯಕರು, ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಮೂಲಕ ದೇಶದಾದ್ಯಂತ ಸಂಚರಿಸಿ, ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆ, ತಾಲೂಕುಗಳ ಅಧ್ಯಕ್ಷರೂ ಸೇರಿದಂತೆ ಪಕ್ಷದ ಮುಖಂಡರುಗಳಿಗೆ ಹಲವು ಸೂಚನೆ-ಸಲಹೆ ನೀಡಿದ್ದಾರೆ ಎಂದರು.
ಈ ನಡುವೆ ಕೆಲ ಅಧ್ಯಕ್ಷರುಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಅವರು ಅಧ್ಯಕ್ಷರುಗಳ ಬದಲಾವಣೆಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ಎಲ್ಲಾ ಕಡೆ ಸಂಘಟನ್ ಸೃಜನ್ ಅಭಿಯಾದ ಮೂಲಕ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ನೂತನ ಅಧ್ಯಕ್ಷರ ನೇಮಕ್ಕೆ ಮುಂದಾಗಿದ್ದಾರೆ ಎಂದ ಅವರು, ಕಟಿಬದ್ದರಾಗಿ ಕೆಲಸ ಮಾಡುವ ಮೂಲಕ ಜನರ ಬಳಿ ನೇರವಾಗಿ ತೆರಳಿ ಅವರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವಂತಹ ಅಧ್ಯಕ್ಷರುಗಳನ್ನು ತಾವೆಲ್ಲರೂ ಚುನಾಯಿಸಬೇಕೆಂದರು.
ಸಿದ್ದರಾಮಯ್ಯನವರು ದೇಶಕ್ಕೆ ಮಾದರಿ ರಾಜಕಾರಣಿಯಾಗಿದ್ದು, ಕೊಟ್ಟ ಮಾತಿನಂತೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ಆಡಳಿತ ನಡೆಸಲು ಅನುವು ಮಾಡಿಕೊಟ್ಟಂತಹ ಮಾದರಿ ವ್ಯಕ್ತಿತ್ವವನ್ನು ಸಾಬೀತು ಮಾಡಿದ್ದಾರೆ ಎಂದು ತಿಳಿಸಿದ ಅವರು, ಅವರ ನಡೆ, ಆದರ್ಶವನ್ನು ಪಾಲಿಸುವಂತಾಗಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕಾಂಗ್ರೆಸ್ ಎಂದಿಗೂ ದೇಶದ ಜನರ ಪರವಾಗಿದ್ದು, ಜನರ ಅಭಿವೃದ್ದಿಯೇ ಕಾಂಗ್ರೆಸ್ ತತ್ವವಾಗಿದೆ ಎಂದರಲ್ಲದೇ, ಸಮರ್ಥ ನೂತನ ಅಧ್ಯಕ್ಷರುಗಳ ನೇಮಕಕ್ಕೆ ತಾವೆಲ್ಲರೂ ಸಹಕರಿಸಬೇಕು.ಈ ಮೂಲಕ ಸಂಘಟನ್ ಸೃಜನ್ ಅಭಿಯಾನವನ್ನು ಯಶಸ್ವಿಗೊಳಿಸುವ ಮುಖಾಂತರ ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಪಕ್ಷದ ಮುದ್ದ ಹನುಮಗೌಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಸ್ ಸಿ ಬಸವರಾಜು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್. ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ. ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಎಂ ರಾಮು. ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಕೀಲರ ಆಗ ಎಂ ಸಿ ಹುಂಡಿ ಶಿವಪ್ರಸಾದ್ ಮೈಸೂರು ಜಿಲ್ಲಾ ಹಿರಿಯ ಕಾರ್ಯದರ್ಶಿಗಳಾದ ಸಕಳ್ಳಿ ಬಸವರಾಜುಮಣಿಅಯ್ಯಯ್ಯ ವರುಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿ ಕೆಎಸ್ ಹುಂಡಿ ರವಿ ಏನ್ ನಂಜಯ್ಯ ಮರಳೂರು ಜಿ ಎನ್ ಸೂರಿ ಬಿ ಪುಟ್ಟಸ್ವಾಮಿ ಮಾಲೇಗೌಡಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯ ಕೆ ಎಸ್ ಹುಂಡಿ ರವಿ ಬೀರಯ್ಯ ಬಿದರಗೋಡು ಮಾದೇವಸ್ವಾಮಿ ಆಲಂಬೂರು ಮೋಹನಮಾದೇವ್. ಭಾಗ್ಯಮ್ಮ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುದ್ದುರಾಮೇಗೌಡಉಮೇಶ್. ಮಹದೇವಪ್ಪ. ಗಂಗನ ತಿಮ್ಮಯ್ಯ. ತುಂಬಲ ಬಾಬು. ಮೋಸಿನ್ ಖಾನ್. ಮಾದೇಗೌಡ. ಕಲ್ಲಳ್ಳಿ ಬಾಬು. ಪುಟ್ಟಣ್ಣ. ಸಿದ್ಧ ಶೆಟ್ಟಿ. ಪುರುಷೋತ್ತಮ್. ಚೂರ್ನಳ್ಳಿ ರಾಜು. ವರುಣದೇವಯ್ಯ. ಚಿಕ್ಕಳ್ಳಿ ದೇವರಾಜುವೆಂಕಟರಮಣ. ಮುದ್ದು ಮಾದೇಗೌಡ. ವರಕೋಡು ಉಮೇಶ್. ಶೇಖರ್. ದೊರೆಸ್ವಾಮಿ ಕೆಂಪಿರಯ್ಯ. ಜಯಶೀಲ. ಬಸವರಾಜು. ಚಂದ್ರಶೇಖರ್. ಹೊಸಳ್ಳಿ ಶೇಖರ್. ಬೈರೇಗೌಡ, ಜಿಲ್ಲಾ ಕಾಂಗ್ರೆಸ್ ಕಮಿಟಿ ಪಾಳ್ಯ ಸುರೇಶ್ ವರುಣ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಜರಿದ್ದರು.









