--Ads--

ಧ್ರುವನಾರಾಯಣ್ ಜನಪರ ಕಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ ಸಚಿವ ಡಾ ಯತಿಂದ್ರಸಿದ್ದರಾಮಯ್ಯ.

On: August 1, 2026 12:26 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಧ್ರುವನಾರಾಯಣ್ ಜನಪರ ಕಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ ಸಚಿವ ಡಾ ಯತಿಂದ್ರಸಿದ್ದರಾಮಯ್ಯ.

ತಾಂಡವಪುರ ಜುಲೈ 31-ದಿ.ಆರ್ ಧ್ರುವನಾರಾಯಣ್ ಅವರು ಎಲ್ಲಾ ಜಾತಿ ಧರ್ಮದ ಜನರನ್ನು ಪ್ರೀತಿಸುವ ಗೌರವಿಸುವ ಪ್ರವೃತಿ ಬೆಳೆಸಿಕೊಂಡಿದ್ದ ಆದರ್ಶ ಜನಾನುರಾಗಿ ರಾಜಕಾರಣಿಯಾಗಿದರು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ದಿ.ಆರ್ ಧ್ರುವನಾರಾಯಣ್ ಅವರ 65 ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ಉದ್ಯೋಗ ಮೇಳವನ್ನು ಸಚಿವ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯನವರು ಉದ್ಘಾಟಿಸಿ ಮಾತಾಡುತ್ತಾ ಸಾಮಾನ್ಯವಾಗಿ ರಾಜಕಾರಣಿಗಳು ಬದುಕಿದ್ದಾಗ ಜನಪ್ರಿಯರಾಗಿರುವುದು ಸಹಜ ಆರ್ ಧ್ರುವನಾರಾಯಣ್ ಅವರು ಕಾಲವಾದ ನಂತರವೊ ಅವರ ಜನಪ್ರಿಯತೆ ಬೆಳೆಯುತ್ತಿದೆ.ಯಾವುದೇ ಜನಪ್ರತಿನಿಧಿಯಾದವರು ಜನಪರ ಅಭಿವೃದ್ಧಿ ಪರವಾಗಿ ಇರಬೇಕು ಜೊತೆಗೆ ಜನರ ಪ್ರೀತಿಸುವ ಗುಣವೀರಬೇಕು ಆಎಲ್ಲಾ ಗುಣಗಳು ಸಹ ಧ್ರುವನಾರಾಯಣ್ ಅವರಲ್ಲಿತ್ತು ಆದ್ದರಿಂದಲ್ಲೇ ಅವರನ್ನು ಜನರು ಎಂದೊ ಬಿಟ್ಟು ಇರುತ್ತಿರಲಿಲ್ಲ ಅವರ ಸರಳ ಸಜ್ಜನಯೇ ಸಭ್ಯತೆಯಿಂದ ಕೊಡಿದ ನಾಯಕತ್ವ ಗುಣಗಳನ್ನು ಹೊಂದಿತವರು ಜನಪರ ರಾಜಕಾರಣಕ್ಕೆ ಧ್ರುವನಾರಾಯಣ್ ಅವರು ಮಾದರಿ ವ್ಯಕ್ತಿತ್ವ, ಅವರು 2 ಬಾರಿ ಸಂಸದರಾಗಿ ಈ ಕ್ಷೇತ್ರಕ್ಕೆ ಅಭಿವೃದ್ಧಿ ಪರವಾಗಿ ನಿಂತು ಕೆಲಸ ಮಾಡುತ್ತಿದ್ದರು ಅವರ ಗುಣದಲ್ಲಿ ಅವರ ಮಗ ಶಾಸಕ ದರ್ಶನ್ ಅವರನ್ನು ಕಾಣುತ್ತಿದ್ದೆವೆ ಎಂದರು.

ಧ್ರುವನಾರಾಯಣ್ ಅವರು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಆಸೆ ಬಹಳ ಇತ್ತು ಆದ್ದರಂತೆ ಶಾಸಕ ದರ್ಶನ್ ಅವರು 3 ವರ್ಷದಿಂದ ಉದ್ಯೋಗ ಮೇಳ ನಡೆಸಿಕೊಂಡು ನಿರುದ್ಯೋಗಿಗಳಿಗೆ ದಾರಿದೀಪವಾಗಿದ್ದಾರೆ.ಬಿಜೆಪಿ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಸಂಧರ್ಭದಲ್ಲಿ ದೇಶದಲ್ಲಿ ನಿರುದ್ಯೋಗವನ್ನು ಹೋಗಲಾಡಿಸುತ್ತೆನೆ ಎಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಯಾವುದೇ ಉದ್ಯೋಗ ನೀಡಿಲ್ಲ.ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗ ನಿರ್ವಾಹಣೆಯಾಗುತ್ತದೆ ಎಂದು ತಿಳಿಸಿದರು.

ಸಂಸದ ಸುನೀಲ್ ಭೊಸ್ ಮಾತನಾಡಿ ದಿ.ಆರ್ ಧ್ರುವನಾರಾಯಣ್ ಅವರು 2 ಬಾರಿ ಶಾಸಕರಾಗಿ ಹಾಗೂ 2 ಬಾರಿ ಸಂಸದರಾಗಿ ಚಾಮರಾಜನಗರ ಹಾಗೂ ಮೈಸೂರು ಭಾಗ ಅಭಿವೃದ್ಧಿಗೆ ದುಡಿದವರು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ತಂದು ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆಸಿದರು.ಸಂಸತಿನಲ್ಲಿ ಅತೀ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಮೊದಲನೇ ಸಂಸದ ಹಾಗೂ ಅಭಿವೃದ್ಧಿಯಲ್ಲಿ ಇಢೀ ದೇಶದಲ್ಲೇ ಮೊದಲ ಸಂಸದ ಎಂದೇ ಹೆಸರು ಪಡೆದಿಂತಹ ಮೊದಲ ವ್ಯಕ್ತಿ ಆರ್ ಧ್ರುವನಾರಾಯಣ್ ಅವರಾಗಿದರು. ತಂದೆಯ ಸ್ಥಾನವನ್ನು ಅವರ ಮಗ ತುಂಬುತ್ತಾರೆ:- ಅಜಾತ ಶತ್ರುವಾಗಿದ್ದ ಧ್ರುವನಾರಾಯಣ್ ಅವರ ವ್ಯಕ್ತಿತ್ವನೇ ಅವರ ಪುತ್ರ ಶಾಸಕ ದರ್ಶನ್ ಧ್ರುವನಾರಾಯಣ್ ಕೂಡ ಹೊಂದಿದ್ದು ಎಲ್ಲಾ ಜನರೊಂದಿಗೆ ಬೆರೆತು ಪ್ರೀತಿಸುವ ಮೂಲಕ ತಂದೆಯ ಸ್ಥಾನವನ್ನು ತುಂಬುವ ಕೆಲಸವನ್ನು ಅವರ ಮಗ ಶಾಸಕ ದರ್ಶನ್ ಧ್ರುವನಾರಾಯಣ್ ಮಾಡುತ್ತಿದ್ದಾರೆ.ಅವರಿಗೆ ನಾನು ಸಂಪೂರ್ಣವಾಗಿ ಬೆಂಬಲ ನೀಡುತ್ತೆನೆ ಎಂದರು.

ಮಾಜಿ ಸಂಸದ ಚಂದ್ರಪ್ಪ ಮಾತನಾಡಿ ಧ್ರುವನಾರಾಯಣ್ ಅವರು ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಹಗಲು-ರಾತ್ರಿ ಎನ್ನದೇ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಧಣಿವರಿಯದೇ ದುಡಿದರು ಎಲ್ಲರ ಜೊತೆ ಸ್ನೇಹಮಯಿ ಇಟ್ಟುಕೊಂಡು ಅಜಾತಶತ್ರು ಎನಿಸಿಕೊಂಡ ನಿಷ್ಠಕಳಂಕ ರಾಜಕಾರಣಿ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಸಚಿವರೊಂದಿಗೆ ಸಂಪರ್ಕ ಇಟ್ಟುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ ನಿಷ್ಠಾವಂತ ರಾಜಕಾರಣಿ ಅವರ ಸರಳ ಜೀವನ ಎಲ್ಲಾರಿಗೂ ಮಾದರಿಯಾಗಿರಲ್ಲಿ ಎಂದರು. ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ನಮ್ಮ ತಂದೆಯವರು 2 ಬಾರಿ ಸಂಸದರಾಗಿ ಈ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು ಅದರಂತೆ ಪ್ರತಿ ವರ್ಷ ಉದ್ಯೋಗ ಮೇಳವನ್ನು ನಡೆಸಲಾಗುವುದು ಕಳೆದ ಬಾರಿ 2000 ವಿದ್ಯಾರ್ಥಿಗಳು ಭಾಗವಹಿಸಿ ಅದರಲ್ಲಿ 700 ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತ್ತಿದೆ ಅದೇ ರೀತಿ ಈ ವರ್ಷವು ಕೂಡ ಉದ್ಯೋಗ ಮೇಳ ನಡೆಸಲಾಗಿದೆ.ನಾನು ನಮ್ಮ ತಂದೆಯಂತೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಕಷ್ಟ ಸು:ಖಗಳಿಗೆ ಭಾಗಿಯಾಗಿ ಕೆಲಸ ಮಾಡುತ್ತೆನೆ ಎಂದು ತಿಳಿಸಿದರು. ಈ ವೇಳೆ ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾಧ್ಯಕ್ಷ ಬಿ ಜೆ ವಿಜಯ್ ಕುಮಾರ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಸ್ ಸಿ ಬಸವರಾಜ್ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಬ್ಲಾಕ್ ಅದ್ಯಕ್ಷ ಕೆ ಜಿ ಮಹೇಶ್ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಲತಾಸಿದ ಶೆಟ್ಟಿ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪರ ಸಮಿತಿಯ ಮಾಜಿ ಅಧ್ಯಕ್ಷ ದಲಿತ ಮುಖಂಡ ಹೆಜ್ಜೆಗೆ ಆರ್ ಇಂದನ್ ಬಾಬು ಮೈಸೂರು ಜಿಲ್ಲಾ ಹಿರಿಯ ಕಾರ್ಯದರ್ಶಿ ಸಕಳ್ಳಿ ಬಸವರಾಜು ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕೀಲರು ಆದ ಎಂಸಿ ಹುಂಡಿ ಶಿವಪ್ರಸಾದ ಗುತ್ತಿಗೆದಾರಹೆಜ್ಜೆಗೆ ರವಿಕುಮಾರ್ ಗೋಪಾಲಕೃಷ್ಣ ಭಾಸ್ಕರ್, ಶ್ರೀಕಂಠನಾಯಕ, ಸಿ ಎಂ ಶಂಕರ್,ಜಿ ಪಂ ಮಾಜಿ ಸದಸ್ಯ ಕೆ ಮಾರುತಿ,ವಿರದೇವನಪುರ ಶ್ರೀನಿವಾಸಮೂರ್ತಿ, ನಂಜನಗೂಡು ಉಸ್ತುವಾರಿ ಹಿರೇಹಳ್ಳಿ ಸೋಮೇಶ್, ಜಯರಾಂ, ಕಗ್ಗಲಿಹುಂಡಿ ಮಹದೇವು, ಶ್ರೀಕಂಠು, ಇಂಧನಬಾಬು,ಲತಾಸಿದ್ದಶೆಟ್ಟಿ,ಕಾಡ ಅದ್ಯಕ್ಷ ಮರಿಸ್ವಾಮಿ, ಕಾವೇರಪ್ಪ,ಮಡಕೆಹುಂಡಿ ಶಿವಣ್ಣ,ಸೇರಿದಂತೆ ಧ್ರುವನಾರಾಯಣ್ ಅಭಿಮಾನಿ ಬಳಗದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಹುಳಿಮಾವು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಆತಂಕ ಚಿರತೆ ಸೆರೆ ಹಿಡಿಯಲು ಗ್ರಾಮಸ್ಥರ ಒತ್ತಾಯ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಕ್ರೀಡಾಕೂಟ ಆಯೋಜನೆ: ಪ್ರಧಾನ ಕಾರ್ಯದರ್ಶಿ ಕ್ರಿಕೆಟ್ ತಂಡಕ್ಕೆ ಗೆಲುವು

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ  ಪತ್ರಿಕಾ ಭವನ ನಿರ್ಮಾಣಕ್ಕೆ  ಅನುದಾನ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ

ಮೈಸೂರು ನಗರವನ್ನು  ಸುಸಜ್ಜಿತ ವಿಶ್ವಮಟ್ಟದ ನಗರವನ್ನಾಗಿ ನಿರ್ಮಿಸುವ ಮಹತ್ವಾಕಾಂಕ್ಷಿ : ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಎರಡನೇ ಆಷಾಢ ಶುಕ್ರವಾರವು ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದ ಸಂಸದ ಸುನಿಲ್ ಬೋಸ್

ಮೈಸೂರುನಲ್ಲಿ ಸಾಧ್ವಿ ಸಂಸ್ಕಾರ ನಿಧಿಶ್ರೀ ಅವರ ಚಾತುರ್ಮಾಸಿಕ ಮಂಗಳ ಪ್ರವೇಶ