--Ads--

ರಾಣೆಬೆನ್ನೂರಲ್ಲಿ ಶ್ರೀ ಪಾಂಡುರಂಗ- ರುಕ್ಕುಮಾಯಿ ಡಿಂಡಿ ಉತ್ಸವ

On: February 4, 2026 3:03 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ರಾಣೆಬೆನ್ನೂರಲ್ಲಿ ಶ್ರೀ ಪಾಂಡುರಂಗ- ರುಕ್ಕುಮಾಯಿ ಡಿಂಡಿ ಉತ್ಸವ

ರಾಣೆಬೆನ್ನೂರು ಫೆಬ್ರವರಿ 4 : ಮಾನವ ಜನ್ಮ ಬಹುದೊಡ್ಡದು ಅದು ಹಾಳು ಮಾಡಿಕೊಳ್ಳಬೇಡಿ ಎನ್ನುವ ಮಾತುಗಳು ಸಾರ್ವಕಾಲಿಕ ಸತ್ಯವಾಗಿವೆ. ಪ್ರತಿಯೊಬ್ಬ ದೇವರು ಧರ್ಮ ಆರಾಧನೆ ಮತ್ತು ಸಂಸ್ಕಾರ ಅರಿತು ನಡೆದರೆ ಮಾನವ ಜನ್ಮ ಸದಾಕಾಲ ಸಾರ್ಥಕವಾಗುವುದು ಎಂದು ಶ್ರೀ ಕ್ಷೇತ್ರ ಪಂಡರಾಪುರ ಹ.ಭ.ಪ. ಶ್ರೀ ಯಶವಂತ ಮಹಾರಾಜ ಬೋಧಲೆ ಹೇಳಿದರು.

ಅವರು ಇಲ್ಲಿನ ದೊಡ್ಡಪೇಟೆ ಭಾವಸಾರ ಕ್ಷತ್ರಿಯ ಸಮಾಜವು, ಆಯೋಜಿಸಿದ್ದ ಶ್ರೀ ಪಾಂಡುರಂಗ- ರುಕ್ಕುಮಾಯಿ ಅವರ 31ನೇ ವಾರ್ಷಿಕ ಸಂಪ್ರದಾಯದ ದಿಂಡಿ ಉತ್ಸವ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಭಾವಸಾರ ಸಮಾಜದ ನಾಗರಿಕರು, ಭಕ್ತಿ ಪಂಥದಲ್ಲಿ ಸಾಗುವುದರ ಮೂಲಕ, ಧರ್ಮದ ಜಾಗೃತಿಯನ್ನು ಅನಾವರಣಗೊಳಿಸುವವರಾಗಿದ್ದಾರೆ. ಧರ್ಮ ಮತ್ತು ಸಂಸ್ಕೃತಿ ಎರಡು ಮುಖದ ಒಂದು ನಾಣ್ಯ. ಜೀವನ ನಿರ್ವಹಣೆಗೆ ಅನುಸರಿಸಿಕೊಂಡು ಬಂದಿರುವ ವೃತ್ತಿ. ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ಹರಿ ಕೀರ್ತನೆ. ವೇದ ಇತಿಹಾಸ ಕಾಲಗಳಿಂದಲೂ ಭಗವಂತನ ಸಾಕ್ಷಾತ್ಕಾರಕ್ಕೆ ಪಾಂಡುರಂಗ ರುಕ್ಕುಮಾಯಿ ಅವರ ಆರಾಧನೆಯ ಮೂಲಕ ಸಮಾಜದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಂಡು, ಎಲ್ಲರೊಳಗೊ ನಾವು ಎನ್ನುವಂತೆ ಬದುಕು ಸಾಗಿಸುತ್ತಿದ್ದಾರೆ. ಸಾತ್ವಿಕತೆಯ ಜೀವನ ಬದುಕು ನಿತ್ಯ ನಿರಂತರವಾಗಿ ಸಾಗಲಿ ಎಂದು, ಸರ್ವ ಭಕ್ತಾದಿಗಳಿಗೆ ಅವರು ಅನುಗ್ರಹ ದಯಪಾಲಿಸಿದರು.

ನಗರದಲ್ಲಿ ಮೂರು ದಿವಸಗಳ ಕಾಲ ನಡೆದ ದಿಂಡಿ ಉತ್ಸವದಲ್ಲಿ ನಗರ ಜಿಲ್ಲೆ ಮತ್ತು ನಾಡಿನ ಸಹಸ್ರಾರು ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಸೇವೆ ಸಲ್ಲಿಸಿದರು. ಕೀರ್ತನಕಾರರಾಗಿ ಭಾನು ದಾಸ, ವೆಂಕಟೇಶರಾವ್, ಸರ್ವದೆ, ಚಂದ್ರಕಾಂತ ಮೋಹನ ವಾದೋನಿ, ಮಲ್ಲಪ್ಪ ಕಾಕೋಳ, ನಾಮದೇವ ರಾಶಿನಕರ, ಅಶೋಕರಾವ, ತುಳಜಾ ರಾಮ, ಶುಭಂ, ಮನೋಜ ಗುಜ್ಜರ, ವಿನಯ ಜಿಂಗಾಡೆ, ಆರಂಭ ಟಿಕಾರೆ, ರಾಮಚಂದ್ರ ತೇಲ್ಕರ ಮೃದಂಗಕಾರರು ಪಾಲ್ಗೊಂಡಿದ್ದರು.

ಸಮಾಜದ ಅಧ್ಯಕ್ಷ ರಾಮಣ್ಣನವಲೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪರಶುರಾಮ ಚಂಬಳೇಕರ, ಕಾರ್ಯದರ್ಶಿ ಮಾಲತೇಶ ಜಿಂಗಾಡೆ, ಸಹಕಾರದರ್ಶಿ ಕಮಲಾಕರ ಪಿಸೆ, ಖಜಾಂಚಿ ಅಶೋಕರಾವ್ ಟಿಕಾರೆ, ಸದಸ್ಯರಾದ ಪ್ರಕಾಶ ಜಿಂಗಾಡೆ, ಲಕ್ಷ್ಮಿಕಾಂತ ದೊಯಿಜೋಡೆ, ಪ್ರಹ್ಲಾದ ನವಲೆ, ಖಂಡೊಬಾ ಚುಂಬಳೇಕರ,ಶಿವಾ ಟಿಕಾರೆ, ಮಂಜು ಜಿಂಗಾಡೆ, ಪ್ರವೀಣ ಮಾಳದಕರ, ನಾಗರಾಜ ಜಿಂಗಾಡೆ, ಮಾರುತಿ ಟಿಕಾರೆ, ಕೃಷ್ಣ ದಾಮೋದರ, ಮಿಥುನ ಟಿಕಾರೆ, ಗಜೇಂದ್ರ ಮಾಂಡ್ರೆ, ಹನುಮಂತ ಮಾಂಡ್ರೆ, ವೆಂಕಟೇಶ್ ದೋಯಿಜೋಡೆ, ಲಕ್ಷ್ಮಿಕಾಂತ್ ದ್ರೋಯಿ ಜೋಡೆ, ಪೂಜಾ ನವಲೆ, ಮಾಲತೇಶ ಜಿಂಗಾಡೆ, ಕಮಲಾಕರ ಪಿಸೆ ಮತ್ತಿತರರು ಪಾಲ್ಗೊಂಡಿದ್ದರು.

ಕೊನೆಯ ದಿವಸ ನಗರ ಪ್ರದಕ್ಷಣಿ ಪಾಲಕಿ ಉತ್ಸವ ನಡೆಯಿತು, ಮಹಾಪ್ರಸಾದ ವಿತರಣೆ ಮಾಡಲಾಯಿತು. ಉತ್ಸವಕ್ಕೆ ವಿವಿಧ ವಾದ್ಯ ವೈಭವಗಳು ವಿಶೇಷ ಮೆರಗು ನೀಡಿದ್ದವು.

WhatsApp

Join Now

Telegram

Join Now

Instagram

Join Now