ಉತ್ತರ ಕನ್ನಡ ಜಿಲ್ಲೆಯಲ್ಲಿನ ಕಲೆಯ ಪ್ರಕಾರಗಳನ್ನು ಯುವಪೀಳಿಗೆಗೆ ಪರಿಚಯ ಮಾಡಿಸುವುದು ಅವಶ್ಯ: ರತ್ನಾಕರ ಕುಂದಾಪುರ.

ವಿಜಯ ದರ್ಪಣ ನ್ಯೂಸ್

ಹಾವೇರಿ ಜಿಲ್ಲೆ ,ರಾಣೇಬೆನ್ನೂರು : ಉತ್ತರ ಕನ್ನಡ ಜಿಲ್ಲೆಯಲ್ಲಿನ ಕಲೆಯ ಪ್ರಾಕಾರಗಳು ಈ ಭಾಗದಲ್ಲಿ ಪ್ರಸ್ತುತ ಪಡಿಸುವ ಮೂಲಕ ಯುವಪೀಳಿಗೆಗೆ ಕಲೆಯ ಪರಿಚಯ ಮಾಡಿಸುವುದು ಅವಶ್ಯ ಎಂದು ಕರಾವಳಿಬಳಗದ ಅಧ್ಯಕ್ಷ ರತ್ನಾಕರ ಕುಂದಾಪುರ ಹೇಳಿದರು.


ಅವರು ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ನಡೆದ ೮೭ನೇಯ ವರ್ಷದ ನಾಡಹಬ್ಬ ಕಾರ್ಯಕ್ರಮದ ಏಳನೆಯ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡುತ್ತ, ಅರ್ಜುನ ಮತ್ತು ಹನುಮಂತ ಇಬ್ಬರ ನಡುವೆ ನಡೆಯುವ ಸ್ಪರ್ಧೆಯೇ ಶರಸೇತುಬಂಧನ ಇದರ ಕೊನೆಯಲ್ಲಿ ರಾಮನ ನಿರ್ದೇಶನದಂತೆ ಅರ್ಜುನನ ರಥದಲ್ಲಿ ಕಪಿಕೇತನಾಗಿ ಹನುಮಂತ ಬರುತ್ತಾನೆ

ಆಗ ಅರ್ಜುನ ಹನುಮಂತರ ಸ್ನೇಹಬಂಧವಾಗುತ್ತದೆ ಎಂದರು ವೇದಿಕೆಯಲ್ಲಿ ಅತಿಥಿಯಾಗಿ ಆಗಮಿಸಿದ್ದ ಕಾಕಿ ಜನಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಡಿ. ಕಾಕಿ ಮಾತನಾಡಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಕರ್ನಾಟಕ ಸಂಘದ ಕಾರ್ಯಕ್ರಮಗಳು ಕಾರ್ಯಕರ್ತರ ಉತ್ಸಾಹವೇ ನನಗೆ ಪ್ರೇರಣೆ ಎಂದು ಹೇಳಿದರು. ಹಾಗೂ ಅಧ್ಯಕ್ಷತೆಯನ್ನು ಸತ್ಯನಾರಾಯಣ ಹೊಳೆಬಾಗಿಲ ವಹಿಸಿಕೊಂಡಿದ್ದರು.


ಹೊಸಾಕುಳಿ, ಸಾಣ್ಮನೆಯ ಶ್ರೀ ಮಹಾಗಣಪತಿ ಯಕ್ಷ ಕಲಾ ವೃಂದದವರಿಂದ ಪ್ರಸ್ತುತಪಡಿಸಲ್ಪಟ್ಟ ಪೌರಾಣಿಕ ಯಕ್ಷಗಾನ ಶರಸೇತುಬಂಧನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ಶ್ರೀನಿಧಿ ಶಿರಹಟ್ಟಿ ನಾಡಗೀತೆ ಹಾಡಿದರು, ಅಭಿನಂದನ ಜೋಶಿ ಸ್ವಾಗತಿಸಿ, ಪರಿಚಯಿಸಿದರು, ಸತ್ಯನಾರಾಯಣ ವಿಶ್ವರೂಪ ವಂದಿಸಿದರು.