--Ads--

ಹೈನುಗಾರಿಕೆ ಅವಲಂಬಿತರು  ಆರ್ಥಿಕವಾಗಿ ಸದೃಢರನ್ನಾಗಿಸುವ ಕೆಲಸ ನಿಮ್ಮಿಂದ ಆಗಬೇಕು: ಲೋಕೇಶ್ ಗೌಡ

On: February 8, 2026 4:38 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಹೈನುಗಾರಿಕೆ ಅವಲಂಬಿತರು  ಆರ್ಥಿಕವಾಗಿ ಸದೃಢರನ್ನಾಗಿಸುವ ಕೆಲಸ ನಿಮ್ಮಿಂದ ಆಗಬೇಕು: ಲೋಕೇಶ್ ಗೌಡ

ಶಿಡ್ಲಘಟ್ಟ : ನಮ್ಮ ಬಾಗದಲ್ಲಿ ಹೈನುಗಾರಿಕೆಯನ್ನು ಸಾಕಷ್ಟು ಕುಟುಂಬಗಳು ನಡೆಸುತ್ತಿದ್ದು ಈ ಕುಟುಂಬಗಳನ್ನು ಆರ್ಥಿಕವಾಗಿ ಇನ್ನಷ್ಟು ಸದೃಢರನ್ನಾಗಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಳುವನಹಳ್ಳಿ ಲೋಕೇಶ್‌ ಗೌಡ ತಿಳಿಸಿದರು.

ಚಿಮುಲ್ ನಿರ್ದೇಶಕರ ಚುನಾವಣೆಯಲ್ಲಿ ವಿಜೇತರಾದ ತಾಲ್ಲೂಕಿನ ಬಂಕ್ ಮುನಿಯಪ್ಪ ಹಾಗೂ ಹುಜುಗೂರು ರಾಮಣ್ಣ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ನಂತರ ಅವರೊಂದಿಗೆ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳ ಆರ್ಥಿಕ ಮಟ್ಟ ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಚರ್ಚಿಸಿ ಮನವಿಮಾಡಿದರು.

ಹೊಸ ಹೊಸ ಯೋಜನೆ ಗಳನ್ನು ಜಾರಿಗೆ ತರುವ ಜತೆಗೆ ಇದೀಗ ಇರುವ ಯೋಜನೆಗಳನ್ನು ಇನ್ನಷ್ಟು ಪರಿ ಣಾಮಕಾರಿಯಾಗಿ ಮಾಡಬೇಕು ಸಂಷಕ್ಟಕ್ಕೆ ಸಿಲುಕಿರುವ ಈ ಹೈನುಗಾರಿಕೆ ಮತ್ತು ಕೃಷಿ ಕುಟುಂಬಗಳನ್ನು ಉಳಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷಿ ಮತ್ತು ಹೈನುಗಾರಿಕೆ ಕುಟುಂಬಗಳು ರಾಜ್ಯಕ್ಕೆ ಅತಿ ಹೆಚ್ಚು ಕೆಎಎಸ್ ಅಧಿಕಾರಿಗಳು ಮತ್ತು ವಕೀಲರನ್ನು ಕೊಟ್ಟಿವೆ ಎಂದು ವಿವರಿಸಿದರು.

ಈ ಹಿಂದೆ ನಾನು ರೇಷ್ಮೆ ಬೆಳೆಗಾರರ ಪ್ರಕೋಷ್ಠದ ರಾಜ್ಯ ಉಪಾಧ್ಯಕ್ಷನಾಗಿದ್ದಾಗ ಇಡೀ ರಾಜ್ಯವನ್ನು ಸುತ್ತಿ ರೇಷ್ಮೆ ಬೆಳೆಗಾರರು, ಹೈನುಗಾರರ ನೂರಾರು ಕುಟುಂಬಗಳನ್ನು ಭೇಟಿ ಮಾಡಿ ಅವರ ಕಷ್ಟ ಕಾರ್ಪಣ್ಯ ಕೇಳಿದ್ದು ಸರಕಾರಕ್ಕೆ ವರದಿ ನೀಡಿದ್ದೆ ಆ ಎಲ್ಲಾ ಸಮಸ್ಯೆಗಳ ನಿವಾರಣೆಗೆ ನೀವು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ನಿಮ್ಮ ಬೆಂಬಲಕ್ಕೆ ನಿಮ್ಮೊಂದಿಗೆ ಸದಾ ನಿಮ್ಮ ಜತೆ ಇರುತ್ತೇವೆ ಎಂದರು.

WhatsApp

Join Now

Telegram

Join Now

Instagram

Join Now