--Ads--

ವಿದ್ಯಾರ್ಥಿಗಳು ಶಿಕ್ಷಕರನ್ನು ಸದಾ ನೆನೆಯಬೇಕು: ಗೋಪಾಲಗೌಡ

On: February 11, 2026 4:42 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ವಿದ್ಯಾರ್ಥಿಗಳು ಶಿಕ್ಷಕರನ್ನು ಸದಾ ನೆನೆಯಬೇಕು: ಗೋಪಾಲಗೌಡ

ಶಿಡ್ಲಘಟ್ಟ : ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವರು ಈ ಸಾಧನೆಗೆ ಕಾರಣರಾದ ಶಿಕ್ಷಕರನ್ನು ಸದಾ ನೆನೆಯಬೇಕು ಎಂದು ಎಂ.ಪಿ.ಸಿ.ಎಸ್ ಸದಸ್ಯ ಗೋಪಾಲಗೌಡ ತಿಳಿಸಿದರು.

ತಾಲ್ಲೂಕಿನ ಗೊರಮಡಗು ಸರ್ಕಾರಿ ಶಾಲೆಯಲ್ಲಿ ಮೂರನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳು ಈ ಮಟ್ಟಕ್ಕೆ ಬೆಳೆಯುವುದು ತುಂಬಾ ಸಂತೋಷ ತಂದಿದೆ ಎಂದರು.
ಈ ವೇಳೆ ವಿದ್ಯಾರ್ಥಿಗಳು ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಡೆದರು,ಅಂಗನವಾಡಿ ಪುಟಾಣಿ ಮಕ್ಕಳ ನೃತ್ಯ, ಪೋಷಕರು ಹಾಗೂ ಗ್ರಾಮಸ್ಥರ ಮನಸೆಳೆಯಿತು, ಹಳೆಯ ವಿದ್ಯಾರ್ಥಿಗಳು ಪ್ರೋತ್ಸಾಹ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು,ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕಿಯರಾದ ಸುಜಾತಾ ಮತ್ತು ಶ್ವೇತಾ ಅವರಿಗೆ ಕನ್ನಡ ಪರ ಹೋರಾಟಗಾರ ಗೀತಾ ಮಂಜುನಾಥ್ (ಡಿಶ್) ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರಮೇಶ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮಶ್ರೀನಿವಾಸ್, ಎಂಪಿಸಿಎಸ್‌ ಅಧ್ಯಕ್ಷ ಮುನಿವೀರಪ್ಪ,ದೇವರಾಜ್, ಮುನಿ ನಾರಾಯಣಸ್ವಾಮಿ,ಗೋಪಾಲಗೌಡ, ನಾಗರಾಜಪ್ಪ,ಮಂಜುನಾಥ್(ಡಿಶ್) ಮುನಿರೆಡ್ಡಿ, ಜಿ.ಕೆ. ಮಂಜುನಾಥ್,ಮುನಿವೆಂಕಟಪ್ಪ,ಕೇಶವರೆಡ್ಡಿ, ಪಿಳ್ಳಾಂಜಿನಪ್ಪ, ಮುನಿಕೃಷ್ಣ,ಶಿಕ್ಷಕರಾದ ಸುಜಾತಮ್ಮ ಶ್ವೇತಾ, ಕೆಂಪಮ್ಮ, ಮಾಲಾ,ರವಿಕಿರಣ್, ಗ್ರಾಮಸ್ಥರು ಹಾಗು ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.

WhatsApp

Join Now

Telegram

Join Now

Instagram

Join Now