--Ads--

ಶಿಕ್ಷಕನಿಂದ ” ಬ್ಯಾಡ್ ಟಚ್ ” : ಶಿಕ್ಷಕನ ವಿರುದ್ಧ  ಮಕ್ಕಳ ಸಹಾಯವಾಣಿಗೆ ವಿದ್ಯಾರ್ಥಿನಿಯಿಂದ ದೂರು

On: February 15, 2026 2:55 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶಿಕ್ಷಕನಿಂದ ” ಬ್ಯಾಡ್ ಟಚ್ ” : ಶಿಕ್ಷಕನ ವಿರುದ್ಧ  ಮಕ್ಕಳ ಸಹಾಯವಾಣಿಗೆ ವಿದ್ಯಾರ್ಥಿನಿಯಿಂದ ದೂರು

ಶಿಡ್ಲಘಟ್ಟ : ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಶಿಕ್ಷಕನಿಂದಾಗುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ.

ನನ್ನೊಂದಿಗೆ ‘ಬ್ಯಾಡ್ ಟಚ್’ ಮಾಡಿ ಅನುಚಿತವಾಗಿ ವರ್ತಿಸಿದ್ದಾರೆಂದು ಶಿಕ್ಷಕನ ವಿರುದ್ಧ ಅಪ್ರಾಪ್ತಯೊಬ್ಬಳು ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಳಿ ದೂರಿದ್ದಾಳೆ.

ಶಾಲೆಗೆ ಭೇಟಿ ನೀಡಿದ ಸಹಾಯವಾಣಿ ಹಾಗೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಬಳಿ ಶಿಕ್ಷಕ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಬಗ್ಗೆ ವಿದ್ಯಾರ್ಥಿನಿ ವಿವರಿಸಿದ್ದಾಳೆ.

ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ವಿದ್ಯಾರ್ಥಿನಿಯ ಹೇಳಿಕೆ ದಾಖಲು ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಶಾಲೆಗೆ ಭೇಟಿ ನೀಡಿದಾಗ ಶಾಲೆಯ ದೂರು ಪೆಟ್ಟಿಗೆ ಪರಿಶೀಲಿಸಿದ್ದು, 9 ಮಂದಿ ವಿದ್ಯಾರ್ಥಿನಿಯರು ಶಿಕ್ಷಕನ ಬ್ಯಾಡ್ ಟಚ್ ವಿರುದ್ಧ ಪತ್ರ ಬರೆದು ಹಾಕಿದ್ದು, ಅವೆಲ್ಲವನ್ನೂ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

ಈ ವೇಳೆ ಕೇವಲ ಒಬ್ಬ ವಿದ್ಯಾರ್ಥಿಯಲ್ಲ, ಬರೋಬ್ಬರಿ 9 ವಿದ್ಯಾರ್ಥಿನಿಯರು ಕೂಡ ಶಿಕ್ಷಕನ ವಿರುದ್ಧ ‘ಬ್ಯಾಡ್ ಟಚ್’ ಆರೋಪ ಮಾಡಿರುವುದಾಗಿ ತಿಳಿದು ಬಂದಿದ್ದು, ಇದು ಪೋಷಕರಲ್ಲಿ ತಲ್ಲಣ ಮೂಡಿಸಿದೆ,ಆದರೆ ಪೋಷಕರು ಮಾತ್ರ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ದೂರು ನೀಡಲು ಹಿಂದೇಟು ಹಾಕಿದ್ದು, ಆರೋಪಿ ಸ್ಥಾನದಲ್ಲಿರುವ ಶಿಕ್ಷಕನನ್ನು ಮಾತ್ರ ಶಾಲೆಗೆ ಕಳುಹಿಸಿದರೆ ಕೈಕಾಲು ಮರಿಯುತ್ತೇವೆ ,ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ಕಾರಣ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಶಾಲೆಗೆ ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಸಿಬ್ಬಂದಿಯೊಂದಿಗೆ ಶಿಕ್ಷಣ ಇಲಾಖೆಯ ನಾವು ಕೂಡ ಭೇಟಿ ನೀಡಿದ್ದೆವು, ಮಗುವೊಂದರ ಹೇಳಿಕೆಯನ್ನು ಸಹಾಯವಾಣಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಖಲಿಸಿಕೊಂಡರು.

9 ಮಕ್ಕಳ ವಿಚಾರ ನನಗೆ ಗೊತ್ತಿಲ್ಲ, ಪೋಷಕರು ದೂರು ನೀಡಲು ನಿರಾಕರಿಸಿದರು,ಮಕ್ಕಳ ಹೇಳಿಕೆ ಆಧಾರದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಮುಂದಿನ ಕ್ರಮ ಆಗಲಿದೆ.

— ನರೇಂದ್ರ ಕುಮಾರ್ ,ಬಿಇಒ.

WhatsApp

Join Now

Telegram

Join Now

Instagram

Join Now