--Ads--

ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಯ ದೇವಾಲಯಕ್ಕೆ ಮಹಾಶಿವರಾತ್ರಿ ಪ್ರಯುಕ್ತ ಹರಿದು ಬಂದ ಭಕ್ತ ಸಾಗರ

On: February 16, 2026 3:52 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಯ ದೇವಾಲಯಕ್ಕೆ ಮಹಾಶಿವರಾತ್ರಿ ಪ್ರಯುಕ್ತ ಹರಿದು ಬಂದ ಭಕ್ತ ಸಾಗರ

ತಾಂಡವಪುರ ಫೆಬ್ರವರಿ 16 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಚಿಕ್ಕಯ್ಯನ ಛತ್ರ ಗ್ರಾಮದ ಬಳಿ ಇರುವ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಯ ದೇವಾಲಯಕ್ಕೆ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಭಕ್ತ ಸಾಗರ ಹರಿದುಬಂದು ದೇವರಿಗೆ ವಿಶೇಷ ಪೂರಿ ಸಲ್ಲಿಸಿ. ರಾತ್ರಿಯಲ್ಲ ಜಾಗರಣೆ ಮಾಡಿ ಪ್ರಸಾದ ಸ್ವೀಕರಿಸಿದರು.

ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಯ ದೇವಾಲಯದಲ್ಲಿ ಮುಖ್ಯ ಅರ್ಚಕರಾದ ಎಸ್ ವೆಂಕಟೇಶ್ವರ ಅವರು ದೇವರಿಗೆ ವಿಶೇಷ ಪೂಜೆ ಅಭಿಷೇಕ ಸೇರದಂತೆ ವಿವಿಧ ದೇವತಾ ಕಾರ್ಯಕ್ರಮವನ್ನು ನೆರವೇರಿಸಿ ಬಂದಂತ ಭಕ್ತರಿಂದ ಪೂಜೆ ಸ್ವೀಕರಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು ಇದೇ ವೇಳೆ ಸುದ್ದಿಗರೊಂದಿಗೆ ಮಾತನಾಡಿದ ವೆಂಕಟೇಶ್ ರವರು ದೇವಾಲಯಕ್ಕೆ ಬೆಳಿಗ್ಗೆಯಿಂದಲೇ ಸುತ್ತಮುತ್ತಲ ಗ್ರಾಮಗಳ ಭಕ್ತ ಸಾಗರವೇ ಹರಿದು ಬಂದು ದೇವರಿಗೆ ಪೂಜಿಸಲಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಬಂದಂತ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತ ದೇವಾಲಯದ ಅಧಿಕಾರಿ ಕೃಷ್ಣರವರು ಮುಂಜಾಗ್ರ ಕ್ರಮವಾಗಿ ಭಕ್ತಾದಿಗಳು ಸಾಲಾಗಿ ಬರುವಂತೆ ದಾರಿಗೇಟ್ ಅಳವಡಿಸಿ ಸಾಲಾಗಿ ಭಕ್ತರು ಬಂದು ದೇವರ ದರ್ಶನ ಮಾಡಲು ಅನುಕೂಲವಾಯಿತು ಅದೇ ರೀತಿ ಬಂಚಳ್ಳಿ ಹುಂಡಿ ಚಿಕ್ಕಯನ ಛತ್ರ ತಾಂಡವಪುರ ಸೇರದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಸಹ ಹೆಚ್ಚಿನ ಸಹಕಾರ ನೀಡಿದ್ದಾರೆ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಇಡೀ ರಾತ್ರಿ ಭಕ್ತ ಸಮೂಹವೇ ಹರಿದು ಬಂದು ದೇವರ ದಸರವನ್ನ ಪಡೆದಿದ್ದಾರೆ ಆ ದೇವರು ಅವರಿಗೆ ಆಯಸ್ಸು ಆರೋಗ್ಯ ಸುಖ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ ಎಂದರು

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸುತ್ತಮುತ್ತಲ ಗ್ರಾಮಗಳಾದ ಹಳ್ಳಿದಿಡ್ಡಿ ಏಚಗಳ್ಳಿ ಬಂಚಳ್ಳಿ ಹುಂಡಿ ಚಿಕ್ಕಯನ ಛತ್ರ ತಾಂಡವಪುರ ಬಸವನಪುರ ಕೆಂಪಿಸಿದ್ದನ ಹುಂಡಿ ಅಡಕನಹಳ್ಳಿ ಹುಂಡಿ ಕನಕ ನಗರ ಕತ್ತವಾಡಿಪುರ ಕಡಕೋಳ ಸಿಂದಳ್ಳಿ ಬ್ಯಾಚಳ್ಳಿ ಕೂಡನಹಳ್ಳಿ ಸೇದಂತಿ ಇನ್ನು ಮುಂತಾದ ಗ್ರಾಮಗಳ ಸಾವಿರಾರು ಭಕ್ತರು ದೇವಾಲಯಕ್ಕೆ ಬಂದು ಪೂಜಿಸಿ ದೇವರ ಕೃಪೆಗೆ ಪಾತ್ರರಾದರು

WhatsApp

Join Now

Telegram

Join Now

Instagram

Join Now