--Ads--

ಬೀದಿನಾಯಿಗಳಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ…

On: February 18, 2026 3:41 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಬೀದಿನಾಯಿಗಳಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ…

ಬೆಂಗಳೂರು.ಫೆ18: ಬೀದಿನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಉತ್ತರ ನಗರಪಾಲಿಕೆಯ ಪಶು ಪಾಲನೆ ಇಲಾಖೆಯಿಂದ 461 ಬೀದಿ ನಾಯಿಗಳಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಸಿ.ಬೀದಿನಾಯಿಗಳ ನಿಯಂತ್ರಣಕ್ಕೆ ಮುಂದಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಮೇಡಿ ಅಗ್ರಹಾರದ ಪ್ರಾಣಿ ಸಂತಾನ ನಿಯಂತ್ರಣ ಕೇಂದ್ರದಲ್ಲಿ  ಬೀದಿ ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯನ್ನು ಸರ್ಕಾರದ ಮಾರ್ಗಸೂಚಿಗಳು ಹಾಗೂ ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದ ನಿಯಮಾವಳಿಗಳ ಪ್ರಕಾರಕ್ರಮಬದ್ಧವಾಗಿ ಮತ್ತು ವೈಜ್ಞಾನಿಕ ವಿಧಾನದಲ್ಲಿ ನಡೆಸಲಾಗುತ್ತಿದೆ ಅಂತ ಉತ್ತರ ನಗರಪಾಲಿಕೆ ಅಯುಕ್ತ ಪೊಮ್ಮಲ್ ಸುನೀಲ್ ಕುಮಾರ್ ತಿಳಿಸಿದರು..

ಶಸ್ತ್ರಚಿಕಿತ್ಸೆ ನಂತರ ವೈದ್ಯಕೀಯ ಅಗತ್ಯದಂತೆ ತೆಗೆದು ಹಾಕಲಾಗುವ ಅಂಗಾಂಗಗಳನ್ನು ಬಯೋ-ಮೆಡಿಕಲ್ ತ್ಯಾಜ್ಯನಿರ್ವಹಣಾನಿಯಮಾವಳಿಗಳು ಮತ್ತು ಸಾರ್ವಜನಿಕ ರ್ವಜನಿಕ ಆರೋಗ್ಯದ ಸುರಕ್ಷತೆಯನ್ನುಗಮನದಲ್ಲಿಟ್ಟುಕೊಂಡು, ನಿಗದಿತ ವೈಜ್ಞಾನಿಕ ವಿಧಾನಗಳ ಮೂಲಕ ಸಮರ್ಪಕವಾಗಿ ನಾಶ ಮಾಡಲಾಗಿದೆ.

ಈ ನಾಶೀಕರಣ ಪ್ರಕ್ರಿಯೆಯನ್ನು ಪಾಲಿಕೆಯಿಂದರಚಿಸಲಾದ ಸಮಿತಿಯ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು ಈ ಸಮಿತಿಯಲ್ಲಿ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿಗಳು, ಪಶುಪಾಲನಾ ಇಲಾಖೆಯಸ್ಥಳೀಯ ಪಶುವೈದ್ಯರು, ಖಕಅಂನಾಮನಿರ್ದೇಶಿತ ಸದಸ್ಯರು ಹಾಗೂ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಒಳಗೊಂಡಿದ್ದಾರೆ..

ಇನ್ನೂ ಉತ್ತರ ನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಈ ಬಗ್ಗೆ ಸಾರ್ವಜನಿಕರಿಂದಹಲವು ದೂರುಗಳು ಬಂದಿದವು..ಪ್ರಮುಖವಾಗಿ ಶಾಲ ಮಕ್ಕಳು ಹಾಗೂ ವೃದ್ಧರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದವು. ಬೀದಿನಾಯಿಗಳ ದಾಳಿಯಿಂದ ರಸ್ತೆಯಲ್ಲಿ ಮಕ್ಕಳು ಓಡಾಟಕ್ಕೂ ರಸ್ತೆಯಲ್ಲಿ ಒಡಾಟಕ್ಕು ತೊಂದರೆ ಉಂಟಾಗಿತ್ತು ಅಂತ ದೂರುಗಳು ಬಂದಿದವು.ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಅಂತ ಅಯುಕ್ತರು ತಿಳಿಸಿದರು.

ಜನವರಿ 2026ರ ಅವಧಿಯಲ್ಲಿ ಒಟ್ಟು 461 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆನಡೆಸಲಾಗಿದೆ ಇದರಲ್ಲಿ 190 ಗಂಡು ನಾಯಿಗಳು ಹಾಗೂ 271 ಹೆಣ್ಣು ನಾಯಿಗಳು ಸೇರಿವೆ ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಪಶುಪಾಲನಾ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ ಹೆಚ್.ಕೆ. ಗಂಗಾಧರಯ್ಯ, ಡಾ. ಎಸ್.ಪಿ. ಲೋಕೇಶ್, ১. ಆರ್. ಮನೋಹರ್, ಸ್ಥಳೀಯ ಪಶುವೈದ್ಯಾಧಿಕಾರಿ ಡಾ. ಕೆ.ಎಸ್. ಶ್ವೇತ , ನಾಮನಿರ್ದೇಶಿತ ಸದಸ್ಯೆ ನಿರ್ಮಲಾ ಜೀತ್ ಕೌರ್ ಉಪಸ್ಥಿತರಿದ್ದರು..

WhatsApp

Join Now

Telegram

Join Now

Instagram

Join Now