--Ads--

ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಿಸಿಕೊಡಬೇಕು 

On: February 26, 2026 3:58 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಿಸಿಕೊಡಬೇಕು

ಶಿಡ್ಲಘಟ್ಟ : ಇಂದಿನ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯಿಸಿ ಕೊಡಬೇಕಾದ ಅಗತ್ಯತೆ ಇದೆ ಪ್ರಪಂಚದ ಎಲ್ಲಾ ಭಾಗದಿಂದಲೂ ಇಲ್ಲಿನ ಕಲೆಗಳ ತೊಟ್ಟಿಲುಗಳನ್ನು ನೋಡಲು ಬರುವಾಗ ನಮ್ಮ ನಾಡಿನವರೇ ಆದ ನಮಗೆ ಇಲ್ಲಿನ ಕಲೆ ಸಾಹಿತ್ಯದ ಬಗ್ಗೆ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.

ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ದರ್ಶನ ನಾಲ್ಕು ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ನಾಡಿನ ಪ್ರತಿಯೊಂದು ದೇವಾಲಯವು ಕಲೆ ಮತ್ತು ಸಂಸ್ಕೃತಿಯ ತೊಟ್ಟಿಲುಗಳಾಗಿದ್ದು ಇಲ್ಲಿನ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸಿ ಕೊಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಇತಿಹಾಸ, ಪೌರನೀತಿ ಹಾಗು ವಿಜ್ಞಾನ ಮತ್ತಿತರ ವಿಷಯಗಳನ್ನು ಕೇವಲ ತರಗತಿ ಕೋಣೆಯಲ್ಲಿ ಬೋಧಿಸುವುದಕ್ಕಿಂತ ಪ್ರವಾಸಗಳ ಮೂಲಕ, ಸ್ಥಳ ವೀಕ್ಷಣೆ ಮೂಲಕ ಕಲಿಯುವುದರಿಂದ ಮಕ್ಕಳಲ್ಲಿ ಶಾಶ್ವತ ಕಲಿಕೆಯಾಗುತ್ತದೆ, ಮೌಲ್ಯಗಳನ್ನು ಪ್ರವಾಸಗಳಿಂದ ರೂಢಿಸಬಹುದಾಗಿದೆ ಎಂದರು.

ತಾಲ್ಲೂಕಿನ ವಿವಿಧ ಶಾಲೆಗಳ ಸುಮಾರು 120 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವಾಸ ಕೈಗೊಂಡಿದ್ದು, ಬಡ , ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮತ್ತು ಕಲಿಕೆಯಲ್ಲಿ ಉತ್ತಮ ಪ್ರಗತಿ ತೋರಿದ ವಿದ್ಯಾರ್ಥಿಗಳಿಗೆ ಈ ಪ್ರವಾಸದಿಂದ ಅನುಕೂಲವಾಗಲಿದೆ ಎಂದರು.

ಶಿಕ್ಷಣ ಸಂಯೋಜಕ ಯು.ವೈ.ಮಂಜುನಾಥ ಮಾತನಾಡಿ,
ಐತಿಹಾಸಿಕ ಸ್ಥಳಗಳು, ವಸ್ತುಸಂಗ್ರಹಾಲಯಗಳು ಮತ್ತು ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡುವುದರಿಂದ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ , ಪಠ್ಯಪುಸ್ತಕದಲ್ಲಿ ಓದಿದ ವಿಷಯಗಳನ್ನು ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ನೋಡಿ ಕಲಿಯಲು ಪ್ರವಾಸಗಳು ಸಹಕಾರಿಯಾಗಿವೆ ಎಂದರು.

ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ, ಪ್ರವಾಸದ ಸಮಯದಲ್ಲಿ ವಿದ್ಯಾರ್ಥಿಗಳು ಇತರರೊಂದಿಗೆ ಬೆರೆಯುವುದರಿಂದ ಸಂವಹನ ಕೌಶಲ್ಯ ಮತ್ತು ತಂಡದ ಮನೋಭಾವ ಬೆಳೆಯುತ್ತದೆ, ಶೈಕ್ಷಣಿಕ ಪ್ರವಾಸಗಳು ಜೀವನಪರ್ಯಂತ ನೆನಪಿನಲ್ಲಿ ಉಳಿಯುವ ಸುಂದರ ಕ್ಷಣಗಳನ್ನು ಉಳಿಸುತ್ತವೆ ಎಂದರು‌.

ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಹಾಗು ಪ್ರವಾಸದ ಮಾರ್ಗದರ್ಶಿ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ,ಪ್ರವಾಸವು ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ ದಿನನಿತ್ಯದ ಶೈಕ್ಷಣಿಕ ಒತ್ತಡದಿಂದ ಹೊರಬರಲು ಮತ್ತು ಮನಸ್ಸಿಗೆ ಆಹ್ಲಾದ ನೀಡಲು ಪ್ರವಾಸಗಳು ಅಗತ್ಯ ಎಂದು ಹೇಳಿದರು.

ಶಾಲೆಯ ನಾಲ್ಕು ಗೋಡೆಗಳ ನಡುವೆ ಇರುವ ಕಲಿಕೆಗಿಂತ ಹೊರಗಿನ ಪ್ರಪಂಚದ ಅನುಭವವು ಹೊಸ ಚೈತನ್ಯ ನೀಡುತ್ತದೆ ವಿವಿಧ ಪ್ರದೇಶಗಳ ಆಹಾರ, ಉಡುಗೆ-ತೊಡುಗೆ ಮತ್ತು ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿಯಲು ಇದು ಉತ್ತಮ ಅವಕಾಶ ಎಂದರು.

ಶಿಕ್ಷಣ ಸಂಯೋಜಕ ಎಚ್.ವಿ. ವೆಂಕಟರೆಡ್ಡಿ ಮಾತನಾಡಿ,
ವಿದ್ಯಾರ್ಥಿಗಳು ಮನೆಯಿಂದ ದೂರವಿದ್ದಾಗ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಮೂಡುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸರಸ್ವತಮ್ಮ, ನಿರ್ದೇಶಕ ಸುದರ್ಶನ್, ಪ್ರವಾಸೋದ್ಯಮ ಇಲಾಖೆಯ ಸಂಯೋಜಕ ವೆಂಕಟೇಶ್, ಪ್ರಭು, ಪ್ರವೀಣ್ ಕುಮಾರ್ , ಮಾರ್ಗದರ್ಶಿ ಶಿಕ್ಷಕರಾದ ಮಂಜುನಾಥ್,ನೇತ್ರ, ರೇಖಾ,ನಿರ್ಮಲಾ ಮತ್ತಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರೋಗಿಗಳಿಗೆ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಣೆ ಮಾಡಿದ  ಪೂಲಕುಂಟಲಹಳ್ಳಿ ರಘುನಾಥರೆಡ್ಡಿ 

ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ: ಪಾಳುಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಣೆ

ರಾಜ್ಯದಲ್ಲಿ ಕರವೇ ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ : ಕರವೇ ಅಧ್ಯಕ್ಷ ಮುನಿರಾಜ್(ಕುಟ್ಟಿ)

ಬೆಸ್ಕಾಂ ಖಾಸಗೀಕರಣಕ್ಕೆ ನೌಕರರು ,ಗುತ್ತಿಗೆದಾರರಿಂದ ವಿರೋಧ !

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು 3 ವರ್ಷ ಮುಗಿದಿದೆ ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡರ ಕೊಡುಗೆ ಏನು :  ಪೂಲಕುಂಟಲಹಳ್ಳಿ ರಘುನಾಥ್ ರೆಡ್ಡಿ

ರೈತರಿಗೆ ಹನಿ ನೀರಾವರಿ ಹಾಗು ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡಬೇಕು :  ಹಿತ್ತಲಹಳ್ಳಿ ಗೋಪಾಲಗೌಡ ಒತ್ತಾಯ