--Ads--

ಧಾರ್ಮಿಕತೆಯಲ್ಲಿ ಭಾರತ ವಿಶ್ವಕ್ಕೆ ಮಾದರಿ : ಸಚಿವ ಈಶ್ವರ್‌ ಖಂಡ್ರೆ

On: March 1, 2026 5:22 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಶ್ರೀ ಬಸವೇಶ್ವರ ಯುವಕ ಸಮಿತಿಯಿಂದ ಧರ್ಮಜಾಗೃತಿ ಪಂಚಾಚಾರ್ಯರ ಯುಗಮನೋತ್ಸವ

ಧಾರ್ಮಿಕತೆಯಲ್ಲಿ ಭಾರತ ವಿಶ್ವಕ್ಕೆ ಮಾದರಿ : ಸಚಿವ ಈಶ್ವರ್‌ ಖಂಡ್ರೆ

ನೆಲಮಂಗಲ : ಧಾರ್ಮಿಕತೆಯಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದ್ದು ವೀರಶೈವಲಿಂಗಾಯಿತ ಪರಂಪರೆ ಶ್ರೀಮಂತವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.

ನಗರದ ಶ್ರೀ ಜಯದೇವವೀರಶೈವ ಭವನದಲ್ಲಿ ಶ್ರೀ ಬಸವೇಶ್ವರ ಯುವಕ ಸಮಿತಿವತಿಯಿಂದ ಆಯೋಜಿಸಲಾಗಿದ್ದ ಶ್ರೀರೇಣುಕಾಚಾರ್ಯರ ಜಯಂತ್ಯೋತ್ಸವ, ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ನಾಡಿನ ಮಠಗಳು ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡು ಧಾರ್ಮಿಕ ಕೆಲಸ ಮಾಡುತ್ತಿದ್ದು ಶ್ರೀ ಶಿವಕುಮಾರಮಹಾಸ್ವಾಮೀಜಿಗಳು ನೀಡಿದ ಸಂದೇಶದಂತೆ ವೀರಶೈವಲಿಂಗಾಯಿತರು ಒಂದೇ ಎಂಬುದನ್ನು ಎಂದಿಗೂ ಮರೆಯುವಂತಿಲ್ಲ. ಶ್ರೀಮಂತವಾದ ವೀರಶೈವಲಿಂಗಾಯಿತ ಪರಂಪರೆ ಕವಲು ದಾರಿಯಲಿದ್ದು ಯಾವ ಶಕ್ತಿಗಳು ಪ್ರಯತ್ನ ಮಾಡಿದರು ವೀರಶೈವ ಹಾಗೂ ಲಿಂಗಾಯಿತರು ಒಂದೇ ವಿನಃ ಬೇರೆ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಧರ್ಮ ಮಾರ್ಗದಲ್ಲಿ ನಡೆಯುವವರು ಕಡಿಮೆಯಾಗುತ್ತಿದ್ದಾರೆ, ಏನಾದರು ಮಾಡಿ ಅಲ್ಪಾವಧಿಯಲ್ಲಿ ಹಣ, ಅಧಿಕಾರ, ಕೀರ್ತಿ ಪಡೆಯಬೇಕು ಎಂಬ ಆತುರದಲ್ಲಿ ತಪ್ಪು ದಾರಿಯಲ್ಲಿ ಸಾಗುವುದು ಒಳ್ಳೆಯದಲ್ಲ. ಯುವ ಪೀಳಿಗೆ ನಶೆ ಪ್ರಪಂಚದಲ್ಲಿ ಬಿದಿದ್ದು ಪೋಷಕರು ತಮ್ಮ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಜತೆಗೆ ಸಂಸ್ಕಾರಯುತವಾಗಿ ಬೆಳೆಸಬೇಕಾದ ಅನಿವಾರ್ಯತೆ ಪ್ರಸ್ತುತದಿನಗಳಲ್ಲಿ ಎದುರಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗುವ ರೀತಿ ಮಕ್ಕಳನ್ನು ಬೆಳೆಸಿ ಎಂದರು.

ನೆಲಮಂಗಲ ಶಾಸಕ ಎನ್‌.ಶ್ರೀನಿವಾಸ್‌ ಮಾತನಾಡಿ ನೆಲಮಂಗಲದಲ್ಲಿ ಅದ್ದೂರಿ ರೇಣುಕಾಚಾರ್ಯರ ಜಯಂತಿ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ, ಅವರ ಸಂದೇಶಗಳು ಸಮಾಜವನ್ನು ಎಚ್ಚರಿಸುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಶಕ್ತಿಯಾಗಿದೆ. ನೆಲಮಂಗಲದಲ್ಲಿ ಉಜ್ಜಯಿನಿ ಶ್ರೀಗಳನ್ನು ಕರೆಸಿ ಅದ್ದೂರಿ ಸಮಾರಂಭ ಮಾಡಿರುವುದು ಸಂತೋಷದ ಸಂಗತಿ. ನೆಲಮಂಗಲದಲ್ಲಿನ ಎಲ್ಲಾ ಮಠಗಳಿಗೆ ಸೇವೆ ಮಾಡುವ ಕೆಲಸ ಮಾಡುತ್ತಿದ್ದೇನೆ, ಮಠಗಳ ಅಭಿವೃದ್ಧಿಯಾದರೆ ಬಡವರು ಬದುಕು ಕಟ್ಟಿಕೊಳ್ಳುತ್ತಾರೆ, ಸಮಾಜ ಸಂಸ್ಕಾರಯುತವಾಗಿ ನಡೆಯುತ್ತದೆ. ವೀರಶೈವಲಿಂಗಾಯಿತ ಸಮಾಜದ ಕೊಡುಗೆಯನ್ನು ನಾನು ಎಂದಿಗೂ ಮರೆಯುವುದಿಲ್ಲ

ಅದ್ದೂರಿ ಮೆರವಣಿಗೆ :

ಶ್ರೀಮದ್‌ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಸಮ್ಮುಖದಲ್ಲಿ ಮಹಾ ಶಿವಪೂಜೆ, ಕ್ಷೇತ್ರ ನಾಥ ಶ್ರೀ ಬಸವೇಶ್ವರ ಶ್ರೀ ರೇಣುಕಾಚಾರ್ಯರ ಹಾಗೂ ಮಹಾಗಣಪತಿಗೆ ರುದ್ರಾಭಿಷೇಕದ ನಂತರ ವೀರಗಾಸೆ, ನಂದಿಧ್ವಜ, ಡೊಳ್ಳುಕುಣಿತ,ಪೂಜಾ ಕುಣಿತದ ಸಮೇತ ನಗರದ ರಾಜಬೀದಿಗಳಲ್ಲಿ ರೇಣುಕಾಚಾರ್ಯರ ಉತ್ಸವಮೂರ್ತಿಯನ್ನು ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

ಮಹಾಸಭಾ ರಾಷ್ಟ್ರೀಯುಪಾಧ್ಯಕ್ಷ ಬಿ.ಎಸ್‌.ಸಚ್ಚಿದಾನಂದ ಮೂರ್ತಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮುಕ್ತಾಂಬ, ರಾಜ್ಯ ನಿರ್ದೇಶಕ ವಿರೂಪಾಕ್ಷ,ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ,ಎನ್‌ಪಿಎ ಅಧ್ಯಕ್ಷ ಎಂ.ಕೆ ನಾಗರಾಜು, ನಗರಸಭೆ ಅಧ್ಯಕ್ಷ ಎನ್‌.ಗಣೇಶ್‌, ಸದಸ್ಯರಾದ ಸಿ.ಪ್ರದೀಪ್‌, ಪೂರ್ಣಿಮಾ, ಸುಧಾಕೃಷ್ಣಪ್ಪ, ಹಿರಿಯ ಪತ್ರಕರ್ತ ರಾಜಣ್ಣ, ಪಂಚಾಚಾರ್ಯರ ಯುಗಮಾನೋತ್ಸವ ಸಮಿತಿ ಅಧ್ಯಕ್ಷ ಎನ್‌.ಎಸ್‌.ನಟರಾಜು, ಕವಾಡಿಮಠ ದತ್ತಿ ಸಮಿತಿ ಅಧ್ಯಕ್ಷ ಎನ್‌.ಆರ್‌.ಜಗದೀಶ್‌, ಶ್ರೀರುದ್ರೇಶ್ವರ ಸೊಸೈಟಿ ಅಧ್ಯಕ್ಷ ಎನ್‌.ಬಿ,ದಯಾಶಂಕರ್‌, ಟೌನ್‌ ಸೊಸೈಟಿ ಅಧ್ಯಕ್ಷ ಚನ್ನಬಸವರಾಜು, ಬಸವೇಶ್ವರ ಯುವಕಸಮಿತಿ ಅಧ್ಯಕ್ಷ ಎನ್‌.ಎಸ್‌.ಗಣೇಶ್‌, ಸದಸ್ಯರುಗಳಾದ ಎನ್‌.ಎಸ್‌.ರಾಜು, ಉಮಾಶಂಕರ್,ಎನ್‌.ಜಿ.ರುದ್ರಮೂರ್ತಿ, ಕಾರ್ತಿಕ್‌, ಚಂದ್ರಶೇಖರ್‌,ಕೆ.ಸಿ.ಅಣ್ಣಪ್ಪ, ಎನ್‌.ಜಿ.ಶಿವಶಂಕರ್‌, ಎನ್‌.ಜೆ.ದೀಪಕ್‌, ರಾಜಮ್ಮಪ್ರಕಾಶ್‌, ಮಂಜುನಾಥ್‌, ಮಂಜುಳಾಸುರೇಶ್‌, ಎನ್‌.ರಾಜಶೇಖರ್‌, ಕೊಟ್ರೇಶ್‌.ಆರ್‌ ಮತ್ತಿತರರಿದ್ದರು.

WhatsApp

Join Now

Telegram

Join Now

Instagram

Join Now