--Ads--

ಗುಡುಗು, ಸಿಡಿಲು ಮತ್ತು ಗಾಳಿಯೊಂದಿಗೆ ಮಳೆಯ ಆರ್ಭಟ :ರೈತರ ಬೆಳೆಗಳಿಗೆ ಭಾರೀ ಹಾನಿ

On: March 21, 2026 12:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಗುಡುಗು, ಸಿಡಿಲು ಮತ್ತು ಗಾಳಿಯೊಂದಿಗೆ ಮಳೆಯ ಆರ್ಭಟ :ರೈತರ ಬೆಳೆಗಳಿಗೆ ಭಾರೀ ಹಾನಿ

ಶಿಡ್ಲಘಟ್ಟ : ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಗುಡುಗು, ಸಿಡಿಲು ಮತ್ತು ಗಾಳಿಯೊಂದಿಗೆ ಸುರಿದ ಮಳೆಯ ಪರಿಣಾಮವಾಗಿ ರೈತರ ಹಲವಾರು ಬೆಳೆಗಳಿಗೆ ಭಾರೀ ಹಾನಿಯಾಗಿದೆ.

ಬೇಸಿಗೆ ಅವಧಿಯಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆ ಹಾಗೂ ಗುಡುಗು ,ಸಿಡಿಲು, ಬಿರುಗಾಳಿಯಿಂದಾಗಿ ಹಲವು ಗ್ರಾಮಗಳಲ್ಲಿ ಬೆಳೆಗಳು ನೆಲಕಚ್ಚಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಗಂಗಾಪುರ, ಎಸ್.ದೇವಗಾನಹಳ್ಳಿ, ಯರ್ರ ನಾಗೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿ ಕಂಡುಬಂದಿದ್ದು, ರೈತರು ಬೆಳೆದಿದ್ದ ಕಲ್ಲಂಗಡಿ, ತರಕಾರಿ, ಬಾಳೆ ಹಾಗೂ ಹೂವಿನ ಬೆಳೆಗಳು ಸಂಪೂರ್ಣ ಅಥವಾ ಭಾಗಶಃ ನಾಶವಾಗಿವೆ,

ಕೆಲವೆಡೆ ಗಾಳಿಯ ವೇಗ ಹೆಚ್ಚಿದ್ದರಿಂದ ಬೆಳೆಗಳ ಮೇಲೆ ಬಿದ್ದ ಆಲಿಕಲ್ಲುಗಳು ಬೆಳೆಗಳನ್ನು ಚೂರಾಗಿ ಮಾಡಿ ಹಾನಿಗೊಳಪಡಿಸಿದ್ದವೆಂದು ರೈತರು ತಿಳಿಸಿದ್ದಾರೆ.

ಎಸ್.ದೇವಗಾನಹಳ್ಳಿಯ ರೈತ ಡಿ.ಎನ್.ಚಂದ್ರಶೇಖರ್ 3 ಎಕರೆ ಬಾಳೆ ತೋಟ ಮಳೆ ಗಾಳಿಗೆ ಬಿದ್ದುಹೋಗಿ ಸುಮಾರು 6 ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ. ಮಳೆಯ ನೀರಿನ ಜೋರು ಹಾಗೂ ಗಾಳಿಯ ತೀವ್ರತೆಗೆ ಬೆಳೆಗಳು ನೆಲಕ್ಕುರುಳಿದ್ದು,ರೈತರಿಗೆ ನಾಶವಾಗಿದೆ.

ಈ ಅಕಾಲಿಕ ಮಳೆಯಿಂದಾಗಿ ರೈತರಿಗೆ ಭಾರೀ ನಷ್ಟ ಉಂಟಾಗಿದ್ದು, ಸಾಲಬಾಧೆ ಹೆಚ್ಚುವ ಭೀತಿ ಎದುರಾಗಿದೆ,
ಸರ್ಕಾರ ತಕ್ಷಣವೇ ಹಾನಿ ಪ್ರದೇಶಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ, ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

WhatsApp

Join Now

Telegram

Join Now

Instagram

Join Now