--Ads--

ನಾಳೆ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ

On: March 23, 2026 5:30 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನಾಳೆ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ

ಬೆಂಗಳೂರು, ಮಾ.23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆ  ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಸಂಕೇತವಾಗಿರುವ ಬೆಂಗಳೂರು ಕರಗ ಶತ್ಕೋತ್ಸವ ಈ ಬಾರಿ ಭಕ್ತರ ಭಕ್ತಿ-ಭಾವನೆಗೆ ಸಾಕ್ಷಿಯಾಗಲು ಸಜ್ಜಾಗಿದೆ.ನಾಳೆ ಸಂಜೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಮಾರ್ಚ್24ರಿಂದ ಆರಂಭವಾಗುವ ಈ ಮಹೋತ್ಸವವು ಒಟ್ಟು 11 ದಿನಗಳ ಕಾಲ ನಡೆಯಲಿದ್ದು, ಏಪ್ರಿಲ್ 1ರಂದು ಮಧ್ಯರಾತ್ರಿ ನಡೆಯುವ ಕರಗ ಉತ್ಸವವೇ ಪ್ರಮುಖ ಆಕರ್ಷಣೆಯಾಗಲಿದೆ. ಆ ದಿನ ಬ್ರೌಪದಿ ದೇವಿಯ ಹೂವಿನ ಕರಗವು ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಪೇಟೆಗಳ ಮೂಲಕ ಸಂಚರಿಸಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಲಿದೆ.

ಈ ಬಾರಿಯೂ ಕರಗವನ್ನು ಹೊರುವ ಗೌರವವನ್ನು ಎ ಜ್ಞಾನೇಂದ್ರಸ್ವಾಮಿ ಅವರಿಗೆ ಸಿಕ್ಕಿದ್ದು, ಇದು ಅವರ 16ನೇ ಬಾರಿ ಕರಗ ಹೊರುವ ವಿಶೇಷ ಸಂದರ್ಭವಾಗಿದೆ. ಕಳೆದ ವರ್ಷ ಅವರು 15ನೇ ಬಾರಿ ಕರಗ ಹೊತ್ತಿದ್ದರು.

ಮಾರ್ಚ್ 30ರಂದು ‘ಹಸಿಕರಗ’ ನಡೆಯಲಿದ್ದು, ಇದಕ್ಕೂಭಕ್ತರಿಂದ ಅಪಾರ ಸ್ಪಂದನೆ ನಿರೀಕ್ಷಿಸಲಾಗಿದೆ ತಿಗಳರಪೇಟೆಯ ಶ್ರೀಧರ್ಮರಾಯ ಸ್ವಾಮಿ ದೇವಾಲಯ ಈ ಉತ್ಸವದ ಕೇಂದ್ರಬಿಂದುವಾಗಿದ್ದು, ಸಕಲ ಸಿದ್ದತೆಗಳು ಜೋರಾಗಿದೆ..

ಈ ಬಾರಿ ಮೈಸೂರು ದಸರಾ ಮಾದರಿಯಲ್ಲಿ ಭವ್ಯ ವಿದ್ಯುತ್ ದೀಪಾಲಂಕಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಹಡ್ಲನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್ ಸೇರಿದಂತೆ ಪೇಟೆಗಳಾದ್ಯಂತ ಬೆಳಕಿನ ಕಂಗೊಳಿರಲಿದೆ.ಕರಗಹಾದಿಯುದ್ದಕ್ಕೂ ಸ್ವಚ್ಛತೆ, ಅಗಲೀಕರಣ, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ.

ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲಾ ಧರ್ಮದವರಿಗೂ ವ್ಯಾಪಾರ ಅವಕಾಶ ಕಲ್ಪಿಸುವುದಾಗಿಅಧಿಕಾರಿಗಳು ತಿಳಿಸಿದ್ದಾರೆ.

ಭಕ್ತಿ, ಪರಂಪರೆ ಮತ್ತು ವೈಭವದ ಸಂಗಮವಾಗಿರುವ ಬೆಂಗಳೂರುಕರಗ ಶಕ್ಕೋತ್ಸವವನ್ನು ಕಣ್ಣುಂಬಿಕೊಳ್ಳಲು ನಗರದ ಜನ ಕಾತರದಿಂದ ಕಾಯುತ್ತಿದ್ದಾರೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

Samsung ತನ್ನ ಪ್ರಮುಖ ಹೊಸತನ ಮತ್ತು ಶಿಕ್ಷಣ ಕಾರ್ಯಕ್ರಮವಾದ Samsung Solve for Tomorrow ಐದನೇ ಆವೃತ್ತಿಯನ್ನು ಘೋಷಿಸಿದೆ. 

ಬಿಟ್‌ಡೆಲ್ಟಾ ಇಂಡಿಯಾ ವಿಶ್ವದ ಅತಿದೊಡ್ಡ ಕ್ರಿಪ್ಟೋ ಮಾರುಕಟ್ಟೆಗಾಗಿ ಸಾಂಸ್ಥಿಕ ದರ್ಜೆಯ ವರ್ಚುವಲ್ ಡಿಜಿಟಲ್ ಅಸೆಟ್ (VDA) ಮೂಲಸೌಕರ್ಯವನ್ನು ಪ್ರಾರಂಭಿಸಿದೆ.

ಭಾರತದಲ್ಲಿನ ಸ್ಯಾಮ್ಸಂಗ್ ಆರ್ & ಡಿ ಸಂಸ್ಥೆಗಳು ಮೊಬೈಲ್ ನಾವೀನ್ಯತೆಯ ಭವಿಷ್ಯವನ್ನು ಸಹ-ಸೃಷ್ಟಿಸಲು ಸ್ಟಾರ್ಟ್ಅಪ್ಗಳನ್ನು ಆಹ್ವಾನಿಸುತ್ತವೆ.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ         ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ

ಸಂಗೊಳ್ಳಿ ರಾಯಣ್ಣ  ಪ್ರಶಸ್ತಿಗೆ ಭಾಜನರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರಿಗೆ ಕೆಯುಡಬ್ಲೂಜೆ ಯಿಂದ ಅಭಿನಂದನೆ 

ತಂದೆ, ತಾಯಿ, ಗುರು, ಸ್ನೇಹಿತರ ಆಶೀರ್ವಾದ ಸಾಧನೆಗೆ ದಾರಿ : ಕವಿ, ಗಾಯಕ ವೀರೇಶ್ ಯರಬಾಳು ಅಭಿಪ್ರಾಯ