--Ads--

ಸುತ್ತೂರು ಶ್ರೀಗಳಿಂದ ಶೇಷಾದ್ರಿಪುರಂ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ

On: March 23, 2026 5:11 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸುತ್ತೂರು ಶ್ರೀಗಳಿಂದ ಶೇಷಾದ್ರಿಪುರಂ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ

ಮೈಸೂರು: ಶೇಷಾದ್ರಿಪುರಂ ಎಜುಕೇಶನಲ್ ಟ್ರಸ್ಟ್ ಅಡಿಯಲ್ಲಿ ಸ್ಥಾಪಿತವಾದ ಮೈಸೂರು ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನ ನೂತನ ಕಟ್ಟಡಗಳನ್ನು ಕಡಕೋಳ ಕೈಗಾರಿಕಾ ಪ್ರದೇಶದಲ್ಲಿ ಉದ್ಘಾಟಿಸಲಾಯಿತು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶೇಷಾದ್ರಿಪುರಂ ಟ್ರಸ್ಟ್‌ ನ ಸಂಸ್ಥಾಪಕರಾದ ಆನಂದಮ್ಮ ಮತ್ತು ಸೀತಮ್ಮ ಅವರ ದೂರದೃಷ್ಟಿಯನ್ನೂ ಪ್ರಶಂಸಿಸಿದರು. ಶಿಕ್ಷಣವು ಬೆಳಕಿನಂತೆ ಹರಡಬೇಕು. ಕಂಪ್ಯೂಟರ್ ಸಂಬಂಧಿತ ಶಾಖೆಗಳತ್ತ ಹೆಚ್ಚುತ್ತಿರುವ ಒಲವು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳು ಸ್ವತಂತ್ರವಾಗಿ ಹಾಗೂ ಸಮರ್ಪಕವಾಗಿ ವಿಷಯ ಆಯ್ಕೆ ಮಾಡಿಕೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ, ಸೌಹಾರ್ದತೆ ಮತ್ತು ಆರ್ಥಿಕ ಜ್ಞಾನದ ಮಹತ್ವವನ್ನು ವಿವರಿಸಿದರು. ಕಡಿಮೆ ವೆಚ್ಚದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಟ್ರಸ್ಟ್‌ನ್ನು ಶ್ಲಾಘಿಸಿ, ತಾಂತ್ರಿಕ ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳೂ ಅಗತ್ಯವೆಂದು ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ವಿದ್ಯಾಶಂಕರ್ ಮಾತನಾಡಿ, ಇಂಟರ್ನ್‌ಶಿಪ್‌ಗಳು, ಕೈಗಾರಿಕಾ ಸಹಭಾಗಿತ್ವ ಹಾಗೂ ನವೀನ ಅಧ್ಯಯನ ವಿಧಾನಗಳ ಮಹತ್ವವನ್ನು ಒತ್ತಿಹೇಳಿದರು.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡಿಸೈನ್ ಥಿಂಕಿಂಗ್ ಹಾಗೂ ಕ್ರಿಟಿಕಲ್ ಥಿಂಕಿಂಗ್ ಅತ್ಯಗತ್ಯವಾಗಿದ್ದು, ಎಐ ಎಲ್ಲಾ ಶಾಖೆಗಳಲ್ಲೂ ಅನ್ವಯಿಸಬಹುದು. ವಿದ್ಯಾರ್ಥಿಗಳು ವಿಷಯ ಆಯ್ಕೆಯಲ್ಲಿ ಒತ್ತಡಕ್ಕೆ ಒಳಗಾಗಬಾರದು. ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಸಿವಿಲ್ ಶಾಖೆಗಳ ಭವಿಷ್ಯದ ಮಹತ್ವವನ್ನೂ ಪ್ರಸ್ತಾಪಿಸಿದರು. ಎಸ್‌ಐಟಿ ಗೌರವ ಕಾರ್ಯದರ್ಶಿ ನಾಡೋಜ ವೂಡೆ ಪಿ.ಕೃಷ್ಣ ಎಲ್ಲರ ಸ್ವಾಗತಿಸಿದರು.

10 ಏಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಕ್ಯಾಂಪಸ್, ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಸೂಕ್ತವಾದ ಆಧುನಿಕ ಹಾಗೂ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಎಸ್‌ ಐಟಿ ಮೈಸೂರು ತಂತ್ರಜ್ಞಾನಾಧಾರಿತ, ಕೌಶಲ್ಯಾಭಿವೃದ್ಧಿ ಹಾಗೂ ಸಮಗ್ರ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಿದೆ.

ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ಮಷೀನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ಮಷೀನ್ ಲರ್ನಿಂಗ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ನೀಡಲಾಗುತ್ತಿದೆ.

ಕ್ಯಾಂಪಸ್‌ನಲ್ಲಿ ಸುಸಜ್ಜಿತ ಕೇಂದ್ರ ಗ್ರಂಥಾಲಯ, ಆಧುನಿಕ ಪ್ರಯೋಗಾಲಯಗಳು, 800 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಹೊಂದಿರುವ ಹಾಸ್ಟೆಲ್‌ಗಳು, ಹಾಗೂ ಕ್ರೀಡೆ ಮತ್ತು ಫಿಟ್ನೆಸ್ ಸೌಲಭ್ಯಗಳು ಲಭ್ಯವಿವೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಎನ್.ಆರ್.ಪಂಡಿತ್ ಆರಾಧ್ಯ, ಗೌರವ ಸಹ ಕಾರ್ಯದರ್ಶಿ ಎಂ. ಎಸ್.ನಟರಾಜ್ ಇತರರು ಇದ್ದರು.

WhatsApp

Join Now

Telegram

Join Now

Instagram

Join Now