ವಿಜಯ ದರ್ಪಣ ನ್ಯೂಸ್…..
ಕಳಪೆ ಕಾಮಗಾರಿ ಬಗ್ಗೆ ದೂರುಗಳು ಬಂದಲ್ಲಿ ಅಧಿಕಾರಿಗಳನ್ನೇ ನೇರಹೊಣೆ ಮಾಡಬೇಕಾಗುತ್ತದೆ:
ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಕಳಪೆ ಕಾಮಗಾರಿ ಕುರಿತಂತೆ ಗ್ರಾಮಸ್ಥರಿಂದ ದೂರುಗಳು ಬಂದಲ್ಲಿ ಅಧಿಕಾರಿಗಳನ್ನೇ ನೇರಹೊಣೆ ಮಾಡಬೇಕಾಗುತ್ತದೆ ಎಂದು ಸ್ಥಳದಲ್ಲಿದ್ದ
ಅಧಿಕಾರಿಗಳನ್ನು ಶಾಸಕ ಬಿ.ಎನ್.ರವಿಕುಮಾರ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಸಾದಲಿ ಹೋಬಳಿಯ ದಿಬ್ಬೂರಹಳ್ಳಿಯಿಂದ ಈ.ತಿಮ್ಮಸಂದ್ರಕ್ಕೆ ಹೋಗುವ 8 ಕಿ.ಮೀ.
ರಸ್ತೆ ಸುಮಾರು 10 ಕೋಟಿ ರೂ. ವೆಚ್ಚದ ಕಾಮಗಾರಿ ಡಾಂಬರೀಕರಣ ಪರಿಶೀಲಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆಗಳ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ದಿನಕ್ಕೆ ಒಂದರೆಡು ಭಾರಿ ಪ್ರಗತಿ ಕಾಮಗಾರಿಗಳ ಕುರಿತು ಪರಿಶೀಲನೆ ಮಾಡುವ ಕೆಲಸ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.

ಕಚೇರಿ ಕೆಲಸ ಕಾರ್ಯಗಳ ಜತೆ ಪ್ರಗತಿಯಲ್ಲಿರುವ ಕಾಮಗಾರಿ ಕುರಿತು ಪರಿಶೀಲನೆ ಮಾಡಬೇಕು,ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡು ಹೊಣೆ ಅಧಿಕಾರಿಗಳಿಗೆ ಮಾತ್ರವಲ್ಲ ಗುತ್ತಿಗೆದಾರರಿಗೂ ಜವಾಬ್ದಾರಿ ಇದೆ ಗುಣಮಟ್ಟದಲ್ಲಿ ನಾನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದರು.
ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣದಿಂದ ದೀರ್ಘಕಾಲ ಬಾಳಿಕೆ ಬರಲಿದೆ ಎಂದು ಅವರು ಸ್ಥಳೀಯ ನಿವಾಸಿಗಳು ಕೂಡ ಕಾಮಗಾರಿಯ ವೇಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ಉತ್ತಮ ರಸ್ತೆ ನಿರ್ಮಾಣ ಆಗುತ್ತಿರುವುದರಿಂದ ಸಂಚಾರ ಸುಗಮವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಈ.ತಿಮ್ಮಸಂದ್ರ ಶಿವಾರೆಡ್ಡಿ,ಬೈರಾರೆಡ್ಡಿ, ಕುಂದಲಗುರ್ಕಿ ಚಂದ್ರಣ್ಣ, ಗ್ರಾಮಸ್ಥರು ಹಾಗೂ ಅಧಿಕಾರಿಗಳು ಹಾಜರಿದ್ದರು.










