ವಿಜಯ ದರ್ಪಣ ನ್ಯೂಸ್….
ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಆಚರಣೆ

ಶಿಡ್ಲಘಟ್ಟ : ಓದುಗರಲ್ಲಿ ಓದುವ ಹವ್ಯಾಸ ಬೆಳೆಸುವ ಪ್ರಮುಖ ಕೇಂದ್ರಗಳಾಗಿವೆ ಪ್ರತಿಯೊಬ್ಬರೂ ಗ್ರಂಥಾಲಯದ ಸದುಪಯೋಗ ಪಡೆದು ಜ್ಞಾನಾರ್ಜನೆಗೆ ಮುಂದಾಗಬೇಕು ಎಂದು ಗ್ರಂಥಪಾಲಕಿ ರಾಮಲೀಲಾ
ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಪುಸ್ತಕ ಪ್ರದರ್ಶನ ಆಯೋಜಿಸಿ ಅವರು ಮಾತನಾಡಿದರು.
ಪುಸ್ತಕಗಳು ಜ್ಞಾನವನ್ನು ವಿಸ್ತರಿಸುವುದರ ಜತೆಗೆ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿಯಾಗುತ್ತವೆ ಗ್ರಂಥಾಲಯಗಳು ವಿದ್ಯಾರ್ಥಿಗಳಿಗೆ ಜ್ಞಾನ ಭಂಡಾರ ಎಂದರು.
ಈ ವೇಳೆ ಸಾಹಿತ್ಯ, ವಿಜ್ಞಾನ, ಇತಿಹಾಸ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ವಿಷಯಗಳ ಪುಸ್ತಕಗಳನ್ನು ಪ್ರದರ್ಶಿಸಲಾಗಿತ್ತು,
ಪ್ರದರ್ಶನದಲ್ಲಿ ಓದುಗರು ಹಾಗೂ ವಿದ್ಯಾರ್ಥಿಗಳು ಪುಸ್ತಕಗಳನ್ನು ವೀಕ್ಷಿಸಿ, ತಮ್ಮ ಆಸಕ್ತಿಯ ಕೃತಿಗಳ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಗ್ರಂಥಾಲಯ ಸಹಾಯಕಿ ಬಾಂಧವ್ಯ, ಓದುಗರಾದ ಎನ್.ಸುಂದರ್, ಕ.ರಾ.ಖಂಡೇರಾವ್, ಬಾಬುಕುಮಾರ್, ವೃಷಭೇಂದ್ರಪ್ಪ, ನಯಾಜ್, ನಾರಾಯಣಸ್ವಾಮಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.










