--Ads--

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ

On: March 25, 2026 5:48 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ

ತಿ.ನರಸೀಪುರ : ಹಿರಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾದಾಪುರ ಎಂ.ಗುರುಸ್ವಾಮಿ, ಉಪಾಧ್ಯಕ್ಷರಾಗಿ ಚೌಹಳ್ಳಿ ಗಿರೀಶಎಂ.(ಗಿರಿಮಲ್ಲಯ್ಯ) ಅವಿರೋಧ ವಾಗಿ ಆಯ್ಕೆಯಾದರು.

ತಾಲ್ಲೂಕಿನ ಹಿರಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನ ಬಯಸಿ ಮಾದಾಪುರ ಗುರುಸ್ವಾಮಿ, ಹಾಗೂ ಉಪಾಧ್ಯಕ್ಷ ಸ್ಥಾನ ಬಯಸಿ ಚೌಹಳ್ಳಿ ಗಿರೀಶ ಗಿರಿ ಮಲ್ಲಯ್ಯ ನಾಮಪತ್ರ ಸಲ್ಲಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಎಂ.ಗುರುಸ್ವಾಮಿ, ಉಪಾಧ್ಯಕ್ಷರಾಗಿ ಎಂ.ಗಿರಿಮಲ್ಲಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹಸೀನಾ ಘೋಷಿಸಿದರು.

ನಂತರ ನೂತನ ಅಧ್ಯಕ್ಷ ಎಂ.ಗುರುಸ್ವಾಮಿ ಮಾತನಾಡಿ, ಸಂಘವನ್ನು ಅಭಿವೃದ್ಧಿ ಪಥದತ್ತ ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಸಂಘದ ವ್ಯಾಪ್ತಿಯಲ್ಲಿರುವ ಗ್ರಾಮಗಳ ಮಹಿಳ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು, ನಮ್ಮ ಸಹಕಾರ ಸಂಘದಿಂದ ಸಿಗುವ ಸೌಲಭ್ಯವನ್ನು ರೈತರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಯಾವುದೇ ಸಹಕಾರ ಸಂಘ ಅಭಿವೃದ್ಧಿ ಹೊಂದಲು ಸರ್ವ ಸದಸ್ಯರ ಸಹಕಾರ ಮುಖ್ಯ ಸರ್ವ ಸದಸ್ಯರ ಮತ್ತು ಸಂಘದ ಸದಸ್ಯರ ವಿಶ್ವಾಸದೊಂದಿಗೆ ಸಂಘವನ್ನು ಅಭಿ ವೃದ್ಧಿ ಪಡಿಸುವ ಗುರಿ ಹೊಂದಿದ್ದೇವೆ ಎಂದರು.

ಉಪಾಧ್ಯಕ್ಷ ಎಂ.ಗಿರಿಮಲ್ಲಯ್ಯ ಮಾತನಾಡಿ ಎಲ್ಲ ನಿರ್ದೇಶಕರುಗಳ ಸಹಕಾರದಿಂದ ಸಂಘ ವನ್ನು ಮುನ್ನಡಿಸುತ್ತೇವೆ ಆರ್ಥಿಕವಾಗಿ ಹಿಂದುಳಿ ದಿದ್ದು ನಮ್ಮ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇವೆ. ಮತ್ತು ಸರ್ಕಾರಿದಿಂದ ಬರುವ ಎಲ್ಲಾ ಅನುದಾನಗಳನ್ನು ತಂದು ಸಂಘವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ.

ನಮ್ಮ ಸಂಘದಲ್ಲಿ ರೈತರ ಬೇಸಾಯಕ್ಕೆ ರಸಗೊಬ್ಬರ ಬಿತ್ತನೆ ಬೀಜ ರಿಯಾತಿದರದಲ್ಲಿ, ವಿತರಿಸಲಾಗುವುದು ಹಾಗೂ ಆರೋಗ್ಯಕ್ಕಾಗಿ ಯಶಸ್ವಿನಿ ಯೋಜನೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ನಿರ್ದೇಶಕರಾದ ಸಿ.ಎಸ್ ನಂಜುಂಡಸ್ವಾಮಿ, ಸಿ.ಎಸ್.ಪ್ರಭುಸ್ವಾಮಿ, ಎಸ್.ವೀರೇಶ್, ಸಹಜಾನಂದಸ್ವಾಮಿ, ರಾಜೇ ಶ್ವರಿ, ಎಚ್.ಎಂ. ಕೋಮಲಾ, ಎಂ.ಎಸ್. ರಾಜಶೇಖರಮೂರ್ತಿ, ಎಚ್.ಎಂ.ಮನೋಜ್ ಕುಮಾರ್. ಎಂ.ರವಿಕುಮಾರ್, ಗುರುಸ್ವಾಮಿ, ಕಾರ್ಯದರ್ಶಿ ಉಮೇಶ್, ಕಾಂಗ್ರೆಸ್ ಮುಖಂಡ ನವೀನ್‌, ಆಲಗೂಡು ಪಿ.ಎ.ಸಿ.ಸಿ.ಅಧ್ಯಕ್ಷ ನಟರಾಜ, ಮಾದಾಪುರ ಗ್ರಾಪಂ ಮಾಜಿ ಅಧ್ಯಕ್ಷ ತ್ರಿರಪು, ಎಸ್.ಎಂ. ನಾಗರಾಜಪ್ಪ, ಕುಮಾರ್, ಗೌಡರ, ಬಸವರಾಜಪ್ಪ, ಸರ್ವೇಶ್, ಮರುಡೇಶ್. ಗೌಡರ ನಂಜಪ್ಪ, ಮಂಜುನಾಥ್, ಎಸ್. ಗುರುಮಲ್ಲಪ್ಪ, ಎಂ.ನಾಗರಾಜಪ್ಪ, ಡಿಎಂಕೆ ನಾಗರಾಜಪ್ಪ, ಗುರುಮಲ್ಲೇಗೌಡ, ಮರಿಸ್ವಾಮಿ,ನಾಗರಾಜು, Aಲಿಂಗರಾಜು, ಯ.ಕರಗಯ್ಯ,ನಾಗರಾಜ ವಿ. ರಾಚಯ್ಯ, ಮಹೇಶ್ ಚಾರ್, ಸೋಮು, ರುಕ್ಕಿಣಿ ಸೇರಿದಂತೆ ಇತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ