--Ads--

ಜಲಕ್ಷಾಮ ತಡೆಯಲು ಕಲ್ಯಾಣಿಗಳ ನೈರ್ಮಲ್ಯಕರಣಗೊಳಿಸಲು ಅಭಿಯಾನ : ತಾ. ಪಂ. ಇಒ ಆರ್.ಹೇಮಾವತಿ

On: March 25, 2026 2:23 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಜಲಕ್ಷಾಮ ತಡೆಯಲು ಕಲ್ಯಾಣಿಗಳ ನೈರ್ಮಲ್ಯಕರಣಗೊಳಿಸಲು ಅಭಿಯಾನ : ತಾ. ಪಂ. ಇಒ ಆರ್.ಹೇಮಾವತಿ

ಶಿಡ್ಲಘಟ್ಟ : ಅಂತರ್ಜಲ ವೃದ್ಧಿ ಹಾಗು ಗ್ರಾಮಗಳಲ್ಲಿನ ಜಲಕ್ಷಾಮ ತಡೆಯಲು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಕಲ್ಯಾಣಿಗಳ ನೈರ್ಮಲ್ಯಕರಣಗೊಳಿಸಲು ಅಭಿಯಾನ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ತಿಳಿಸಿದರು.

ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ “ದಾಸಪ್ಪನಬಾವಿ ಕಲ್ಯಾಣಿಯ”ನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛಗೊಳಿಸಿ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿರಿಯರು ನಮಗೆ ವರದಾನವಾಗಿ ನೀಡಿದ ಕೆರೆ,ಕುಂಟೆ ಹಾಗು ಕಲ್ಯಾಣಿಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ ಗ್ರಾಮದ ಕಲ್ಯಾಣಿಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛಗೊಳಿಸಿ ಉತ್ತಮವಾಗಿ ನಿರ್ವಹಣೆ ಮಾಡಿದ್ದಲ್ಲಿ, ಮುಂದಿನ ಪೀಳಿಗೆಗೆ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ಉದ್ಭವಿಸದು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾ.ಪಂ.ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಯೋಜನಾಧಿಕಾರಿ ಅನಿಲ್‌ಕುಮಾ‌ರ್, ನೋಡಲ್ ಇಇ ರಘುನಾಥಮೂರ್ತಿ, ಪಿಡಿಒ ವಜ್ರೇಶ್ ಕುಮಾರ್, ವಿವಿಧ ಗ್ರಾಮ ಪಂಚಾಯತಿ ಪಿಡಿಒಗಳು ,ನರೇಗಾ ಸಿಬ್ಬಂದಿ,ತಾ.ಪಂ.ಸಿಬ್ಬಂದಿ, ಜಲಗಾರರು, ಸ್ವಚ್ಛತಾಗಾರರು, ಗ್ರಾ.ಪಂ‌.ಸಿಬ್ಬಂದಿ ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ