--Ads--

ವಿಜೃಂಭಣೆಯಿಂದ ನಡೆದ ಬಸವ ಪಂಚಮಿ ಪೂಜಾ ಕಾರ್ಯಕ್ರಮ

On: August 17, 2026 1:44 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ವಿಜೃಂಭಣೆಯಿಂದ ನಡೆದ ಬಸವ ಪಂಚಮಿ ಪೂಜಾ ಕಾರ್ಯಕ್ರಮ

ವಿಜಯಪುರ ಪಟ್ಟಣದಲ್ಲಿ ರಾಷ್ಟ್ರೀಯ ಬಸವದಳ ನಗರ್ತ ಯುವಕ ಸಂಘ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ನಗರ್ತ ಮಹಿಳಾ ಸಂಘ ಶ್ರೀ ಸರೋವರ ಗಣಪತಿ ಪತಾಂಜಲಿ ಯೋಗ ಶಿಕ್ಷಣ ಕೋರಮಂಗಲ ರುದ್ರಪ್ಪನವರ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀ ನಗರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕ್ರಾಂತಿಯೋಗಿ ಬಸವಣ್ಣನವರ 831ನೆಯ ಲಿಂಗೈಕ್ಯ ಸಂಸ್ಕರಣೆಯ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ನಿರಂಜನ ಪ್ರಣವ ಸ್ವರೂಪಿ ಪ್ರಭುಲಿಂಗ ಸ್ವಾಮಿಗಳು ಗುರು ಬಸವಣ್ಣನವರು ಬಯಲಾದ ದಿನವೇ ಬಸವ ಪಂಚಮಿ. ಮರ್ತ್ಯದ ಮಣಿಹ ಪೂರೈಸಿದ ದಿನ. ಅವರ ನೆನಹ ಸುಖ ಸಮುದ್ರ. ‘ಬಸವ’ ಎಂಬುದು ಕೇವಲ ಹೆಸರಲ್ಲ. ಅರಿವು, ಆಚಾರ, ಭಕ್ತಿ ಅನಿಮಿತ್ಯ. ಪ್ರೇಮ, ಭರವಸೆ, ಆಸರೆ ಮುಂತಾದ ಅರ್ಥಗಳುಂಟು. ಮಗುವಿಗೆ ತಾಯಿಯೇ ಸರ್ವಸ್ವವಾಗುವಂತೆ, ಮರ್ತ್ಯಲೋಕಕ್ಕೆ ಗುರು ಬಸವಣ್ಣನವರೆ ಸರ್ವಸ್ವ.ಮೌಡ್ಯದ ಭಕ್ತಿ, ಬೇಡುವ ಭಕ್ತಿಯನ್ನು ತಿರಸ್ಕರಿಸಿ, ಅರಿವಿನಿಂದ ಕೂಡಿದ ಭಕ್ತಿ ಬಸವ ಕಲಿಸಿದರು. ಕಾಯಕ ಮಾಡಬೇಕು ದಾಸೋಹ ನೀಡಬೇಕೆಂಬುದು ಅವರ ನಿಲುವಾಗಿತ್ತು.

ಬಸವ ಪಂಚಮಿಯ ದಿನದಂದು ಹುತ್ತಕ್ಕೆ ಹಾಲು ಸುರಿದು ಹಾಳು ಮಾಡುವದು ಬಸವ ಸಂಸ್ಕೃತಿಯಲ್ಲ. ಉಂಬ ಉಡುವ ಕೂಡಲಸಂಗಮದೇವ ಜಂಗಮ ಮುಖದಲ್ಲಿ ಎಂಬ ಗುರು ವಾಣಿಯಂತೆ ರೋಗಿಗಳಿಗೆ, ಅನಾಥರಿಗೆ, ಬಡಮಕ್ಕಳಿಗೆ ಹಾಲು ಕುಡಿಸಿ ಸಂಭ್ರಮಿಸಬೇಕೆ ವಿನಹ ಹಾಳು ಮಾಡಬಾರದೆಂದು ಆಶೀರ್ವಚನ ನೀಡಿದರು.

ಕ್ರಾಂತಿಯೋಗಿ ಬಸವಣ್ಣ ಮೂರ್ತಿಯ ಮೆರವಣಿಗೆಯನ್ನು ಊರಿನ ರಾಜ ಬೀದಿಗಳಲ್ಲಿ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿಗಳಾದ ಬೇಕರಿ ಶಿವಣ್ಣ ಮ. ಜಯದೇವ ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷ ಎಸ್ ಭಾಸ್ಕರ್ ನಗರ್ತ ಯುವಕ ಸಂಘದ ಪದಾಧಿಕಾರಿಗಳಾದ ಸಿ ಸುರೇಶ್ ಬಾಬು ಎನ್ ಬಸವರಾಜು ಮತ್ತು ನಗ,ರ್ತ ಜನಾಂಗದ ಅಂಗ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now