--Ads--

ಸರ್ಕಾರ ಯೋಜನೆ ರೂಪಿಸಲು ಜನಗಣತಿ ಸಹಕಾರಿ ಜಿಲ್ಲಾಧಿಕಾರಿ: ಲಕ್ಷ್ಮೀಕಾಂತ ರೆಡ್ಡಿ

On: April 2, 2026 1:45 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸರ್ಕಾರ ಯೋಜನೆ ರೂಪಿಸಲು ಜನಗಣತಿ ಸಹಕಾರಿ ಜಿಲ್ಲಾಧಿಕಾರಿ: ಲಕ್ಷ್ಮೀಕಾಂತ ರೆಡ್ಡಿ

ತಾಂಡವಪುರ ಏಪ್ರಿಲ್ ಒಂದು: ಜನಗಣತಿಯಿಂದ ಜನರ ಜೀವನದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದ್ದು, ಇದರಿಂದ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಸಾರ್ವಜನಿಕರು ಜನಗಣತಿಯ ಗಣತಿದಾರರಿಗೆ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ‌ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದರು. ಜನಗಣತಿಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಮನೆ ಪಟ್ಟಿ ಅಥವಾ ಮನೆ ಸರ್ವೆ ಏಪ್ರಿಲ್ 1 ರಿಂದ ಮೇ 15 ರವರೆಗೆ ನಡೆಯಲಿದೆ. ಎರಡನೇ ಹಂತದ ವ್ಯಕ್ತಿವಾರು ಸರ್ವೆ ಫೆಬ್ರವರಿ ಮಾಹೆಯಲ್ಲಿ ನಡೆಯಲಿದೆ ಎಂದರು.

ಏ.1 ರಿಂದ 15 ರವರೆಗೆ ಸಾರ್ವಜನಿಕರು ಸ್ವಯಂ ಗಣತಿಗಾಗಿ ವೆಬ್ ಸೈಟ್ ವಿಳಾಸ www.se.census.gov.in ಬಳಸಿಕೊಂಡು ಲಾಗ್ ಇನ್ ಆಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಸಂಬಂಧ ಕೇಳಲಾಗುವ 33 ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ. ಸಾರ್ವಜನಿಕರು‌ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಯಂಗಣತಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು..

ಮನೆ ಮನೆ ಜನಗಣತಿಗಾಗಿ ಜಿಲ್ಲೆಯಲ್ಲಿ 6013 ಬ್ಲಾಕ್ ರಚಿಸಲಾಗಿದ್ದು, 6540 ಗಣತಿದಾರರು ಹಾಗೂ 1207 ಮೇಲ್ವಿಚರಕರು ಸೇರಿದಂತೆ ಒಟ್ಟು 7748 ಸಿಬ್ಬಂದಿಗಳನ್ನು ನಿಯೋಜಿಸಿ ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಜನರ ಆರ್ಥಿಕ ಚಟುವಟಿಕೆ, ಸಾಕ್ಷರತೆ, ಶಿಕದಷಣ, ವಸತಿ,ಗೃಹ ಸೌಲಭ್ಯ, ನಗರೀಕರಣ, ಫಲವತ್ತತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಭಾಷೆ, ಧರ್ಮ, ವಲಸೆ, ಅಂಗವಕಲ್ಯ ಮತ್ತು ಇತರೆ ಹಲವು ಸಾಮಾಜಿಕ ಸಾಂಸ್ಕೃತಿಕ ದತ್ತಾಂಶ ಪಡೆಯುವುದು ಜನಗಣತಿಯ ಉದ್ದೇಶವಾಗಿದ್ದು, ಜನಗಣತಿಯಲ್ಲಿ ಗಣತಿದಾರರು ನಿಗದಿಪಡಿಸಿರುವ 33 ಪ್ರಶ್ನೆಗಳನ್ನು ಜನರಿಗೆ ಕೇಳಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.
ಜಿಲ್ಲೆಯ ಸಾರ್ವಜನಿಕರು ಜನಗಣತಿ ಕಾರ್ಯದಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಜನಗಣತಿಯನ್ನು ಯಶಸ್ವಿಗೊಳಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು‌, ಮೈಸೂರು ಮಹಾನಗರಪಾಲಿಕೆ ಉಪ ಆಯುಕ್ತ ಹಾಗೂ ಮೈಸೂರು ನಗರ ಜನಗಣತಿ ಅಧಿಕಾರಿ ಜಿ.ಎಸ್‌.ಸೋಮಶೇಖರ್ ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now