--Ads--

ಶ್ರೀಲಕ್ಷ್ಮೀನರಸಿಂಹಸ್ವಾಮಿ ಹಾಗೂ ಶ್ರೀ ಅಭಯಾಂಜನೇಯಸ್ವಾಮಿ ದೇವರುಗಳಿಗೆ ತಂಬಿಟ್ಟು ದೀಪೋತ್ಸವ 

On: April 6, 2026 2:35 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶ್ರೀಲಕ್ಷ್ಮೀನರಸಿಂಹಸ್ವಾಮಿ ಹಾಗೂ ಶ್ರೀ ಅಭಯಾಂಜನೇಯಸ್ವಾಮಿ ದೇವರುಗಳಿಗೆ ತಂಬಿಟ್ಟು ದೀಪೋತ್ಸವ 

ಶಿಡ್ಲಘಟ್ಟ : ಗಂಜಿಗುಂಟೆ ಪಂಚಾಯಿತಿಯ ಪೂಲಕುಂಟ್ಲಹಳ್ಳಿಯಲ್ಲಿ ಗ್ರಾಮಸ್ಥರು ತಂಬಿಟ್ಟು ದೀಪೋತ್ಸವದ ಮೆರವಣಿಗೆಯನ್ನು ಮಾಡಿ, ಗ್ರಾಮದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಹಾಗೂ ಶ್ರೀ ಅಭಯಾಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ದೀಪಗಳನ್ನು ಬೆಳಗಿದರು.

ಬೆಳಿಗ್ಗೆ ದೇವರುಗಳಿಗೆ ಪಂಚಾಮೃತಾಭಿಷೇಕ, ವಿವಿಧ ಹೂವಿನ ಅಲಂಕಾರ ಮಾಡಲಾಗಿತ್ತು. ಅಕ್ಕಿ ಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಿದ ‘ತಂಬಿಟ್ಟು’ ಪ್ರಸಾದದ ಉಂಡೆಗಳನ್ನು ಮಾಡಿ, ಅವುಗಳ ಮಧ್ಯದಲ್ಲಿ ಗುಂಡಿಯನ್ನು ಮಾಡಿ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ.

ಗ್ರಾಮದ ದೇವರುಗಳಿಗೆ ಭಕ್ತಿಯಿಂದ ತಂಬಿಟ್ಟು ದೀಪಗಳನ್ನು ಸಮರ್ಪಿಸುವುದರಿಂದ ಗ್ರಾಮಕ್ಕೆ ಸುಖ, ಶಾಂತಿ ಮತ್ತು ಸಮೃದ್ಧಿ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿದೆ ,ಮಹಿಳೆಯರು ಈ ತಂಬಿಟ್ಟು ದೀಪದ ತಟ್ಟೆಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ನಮ್ಮ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ತಂಬಿಟ್ಟು ದೀಪೋತ್ಸವವನ್ನು ಆಚರಿಸುತ್ತಿದ್ದೇವೆ, ಗ್ರಾಮದ ಮಹಿಳೆಯರು ಮೊದಲು ಗ್ರಾಮದ ಶ್ರೀಲಕ್ಷ್ಮೀನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿ, ನಂತರ ಗ್ರಾಮದ ಬಸ್‌ ನಿಲ್ದಾಣದ ಬಳಿಯ ಶ್ರೀ ಅಭಯಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ.,ಪೂಜೆಯ ನಂತರ ಹೆಸರುಬೇಳೆ , ಪಾನಕ ವಿತರಿಸಲಾಗುತ್ತದೆ.

ಅನ್ನಸಂತರ್ಪಣೆ ಕೂಡ ಆಯೋಜಿಸಿದ್ದು ಗ್ರಾಮಸ್ಥರಲ್ಲದೆ, ರಸ್ತೆಯಲ್ಲಿ ಪ್ರಯಾಣಿಸುವವರಿಗೂ ಪ್ರಸಾದ, ಹೆಸರುಬೇಳೆ, ಪಾನಕ ವಿತರಿಸಲಾಗುತ್ತದೆ ಎಂದು ಗ್ರಾಮದ ಮುಖಂಡರಾದ ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ತಿಳಿಸಿದರು.

WhatsApp

Join Now

Telegram

Join Now

Instagram

Join Now