--Ads--

ಮಹಿಳಾ ಮೀಸಲು ಅಂಬೇಡ್ಕರ್‌ ಹೋರಾಟದ ಫಲ: ಪ್ರೊ.ಎಂ.ಕೆ.ಸವಿತಾ

On: April 9, 2026 4:27 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮಹಿಳಾ ಮೀಸಲು ಅಂಬೇಡ್ಕರ್‌ ಹೋರಾಟದ ಫಲ: ಪ್ರೊ.ಎಂ.ಕೆ.ಸವಿತಾ

ತಾಂಡವಪುರ ಏಪ್ರಿಲ್ 9 ಡಾ.ಬಿ.ಆರ್.ಅಂಬೇಡ್ಕರ್ ಹೋರಾಟದ ಫಲವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲು ಕಾಯ್ದೆ ಮತ್ತು ಋತುಚಕ್ರದ ರಜೆ ಕಾಯ್ದೆ ಜಾರಿಗೆ ಬಂದಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವೆ ಪ್ರೊ.ಎಂ.ಕೆ.ಸವಿತಾ ಹೇಳಿದರು.

ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ಮೈಸೂರ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಗುರುವಾರ ನಡೆದ `ಅಂಬೇಡ್ಕರ್ ಮತ್ತು ಮಹಿಳಾ ಪ್ರಗತಿ’ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಎಂಎ ಪದವಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕ್ರೂರ ಜಾತಿ ಪದ್ಧತಿಯಿಂದ ಶೋಷಿತ ಸಮುದಾಯಗಳ ಅನು`Àವಿಸುವ ಅಸಮಾನತೆ ತೊಲಗಿಸುವ ಜೊತೆಗೆ ಮಹಿಳಾ ಸಬಲೀಕರಣ ಪ್ರಬಂಧಗಳನ್ನು ಮಂಡಿಸುತ್ತಿದ್ದರು. ಮಹಿಳೆಯ ಸ್ವಾತಂತ್ರ‍್ಯ, ಪ್ರಾತಿನಿ`À್ಯ, ದೌರ್ಜನ್ಯಗಳ ವಿರುದ್ಧ, ಆಸ್ತಿ ಹಂಚಿಕೆಯ ಹಕ್ಕುಗಳನ್ನು ಖಾತರಿಗೊಳಿಸಲು ಜೀವನ ಪೂರ್ತಿ ಹೋರಾಡಿದರು ಎಂದರು.

ಮಹಿಳೆಯರಿಗೆ ಮತದಾನ, ಸ್ವಾತಂತ್ರ‍್ಯ, ಪ್ರಾತಿನಿಧ್ಯ ಹಾಗೂ ಮಹಿಳಾ ಸಮಾನತೆಯ ಹಕ್ಕುಗಳಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಹೋರಾಡಿದ ಫಲವಾಗಿಯೇ ಇಂದು ಲೋಕಸ`ೆಯಲ್ಲಿ ಮಹಿಳಾ ಮೀಸಲು ಕಾಯ್ದೆ ಜಾರಿಗೆ ಬಂದಿದೆ. ಮಹಿಳೆಯರಿಗೆ ಹೆರಿಗೆ ರಜೆ ನೀಡಬೇಕು ಎಂದು ಅಂಬೇಡ್ಕರ್ ಪ್ರತಿಪಾದಿಸಿದರು. ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಉದ್ಯೋಗಸ್ಥ ಮಹಿಳೆಗೆ ಋತುಚಕ್ರದ ರಜೆ ಘೋಷಣೆ ಮಾಡಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ, ಶಕ್ತಿ ಯೋಜನೆ, ವಿದ್ಯಾ ನಿಧಿ ಯೋಜನೆಗಳು, ಕಡಿಮೆ ಬೆಲೆಯಲ್ಲಿ ದವಸ, ಧಾನ್ಯಗಳನ್ನು ಕೊಡುವ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಮಹತ್ವ ನೀಡಿವೆ. ಈ ಯೋಜನೆಯ ಜಾರಿಯ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವು ಇದೆ ಎಂದರು.

ಮಹಿಳಾ ಟ್ರಾಫಿಕಿಂಗ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲಿಯೂ ಚಿಕ್ಕ ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕುವ ಕ್ರೂರ ಪ್ರಕರಣಗಳು ಪ್ರಪಂಚವನ್ನು ಬೆಚ್ಚಿ ಬೀಳಿಸಿದೆ. ಜೆಫ್ರಿ ಎಪ್‌ಸ್ಟೀನ್ ಪ್ರಕರಣದಲ್ಲಿ ವಿಶ್ವದ ನಾಯಕರು, ಸೆಲೆಬ್ರಿಟಿಗಳು, ಶ್ರೀಮಂತರು, ದೇಶಗಳಿಗೆ ಶಾಸನಗಳನ್ನು ರೂಪಿಸಿರುವ ಜನಪ್ರತಿನಿಽಗಳು ಹೆಸರು ಕೇಳಿಬಂದಿದೆ. ಇಂತಹವರಿಂದ ಮಹಿಳಾ ಸಬಲೀಕರಣ ಸಾಧ್ಯವೇ. ಇಂತಹ ಕೆಟ್ಟ ಪ್ರಪಂಚದಲ್ಲಿ ಮಹಿಳೆಯ ಸ್ವಾತಂತ್ರ‍್ಯವನ್ನು ಪ್ರತಿಪಾದಿಸಿದ ಅಂಬೇಡ್ಕರ್ ಮುಖ್ಯವೆನ್ನಿಸುತ್ತಾರೆ ಎಂದು ಹೇಳಿದರು.

ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣ ಕೇಂದ್ರ ನಿರ್ದೇಶಕ ಡಾ.ಸಾಬೀರ ಅಹ್ಮದ್ ಮುಲ್ಲಾ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಿ.ಎಸ್.ಪ್ರತಿಮಾ, ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಸವಿತಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

WhatsApp

Join Now

Telegram

Join Now

Instagram

Join Now