--Ads--

4 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನಿಮ್ಮ ಸೇವೆಗೆ ನಾನು ಸದಾ ಬದ ಶಾಸಕ ದರ್ಶನ್

On: July 17, 2026 2:57 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

4 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನಿಮ್ಮ ಸೇವೆಗೆ ನಾನು ಸದಾ ಬದ ಶಾಸಕ ದರ್ಶನ್ ಧ್ರುವನಾರಾಯಣ್

ತಾಂಡವಪುರ ಜುಲೈ 17- ಗ್ರಾಮೀಣ ಭಾಗದ ಅಭಿವೃದ್ಧಿ ಪಡಿಸಲು ಹಾಗೂ ಗ್ರಾಮೀಣ ಭಾಗದ ಜನರ ಸೇವೆಗೆ ನಾನುಸದಾ ಬದ್ದನಾಗಿರುತ್ತೆನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ದೇಪೆಗೌಡನಪುರ ಗ್ರಾಮದಿಂದ ಚಿಕ್ಕಚನ್ನಪ್ಪ ದೇವಸ್ಥಾನದ ವರಗೆ 4 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಹೆಡಿಯಾಲ ಗ್ರಾಮದಲ್ಲಿ 4 ಕೋಟಿ ರೂ ವೆಚ್ಚದ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನನ್ನ 3 ವರ್ಷಗಳ ಅವಧಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆನೆ.ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.

ಅದೇ ರೀತಿ ಈಗೀನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಗ್ರಾಮೀಣ ಭಾಗದಲ್ಲಿ ಇನ್ನೂ ಉಳಿದಿರುವ ಕಾಮಗಾರಿಗಳನ್ನು 2 ವರ್ಷ ಅವಧಿಯಲ್ಲಿ ಕೈಗೆತ್ತಿಕೊಂಡು ಅಭಿವೃದ್ಧಿ ಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ.ದೇಪೇಗೌಡನಪುರ ಗ್ರಾಮದಿಂದ ಹುರ ಹಾಗೂ ಬೇಗೂರಿಗೆ ಹೋಗುವ ರಸ್ತೆ ಹಲವು ವರ್ಷಗಳಿಂದ ತುಂಬಾ ಹದ್ದಗೆಟ್ಟು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು ಇದು ಬಹುದಿನದ ಕನಸ್ಸಾಗಿತ್ತು ಇದರ ಬಗ್ಗೆ ಈ ಭಾಗದ ಜನತೆ ಹಲವು ಬಾರಿ ನನ್ನ ಗಮನಕ್ಕೆ ತಂದಿದ್ದರಿಂದ ರೂ ಅನುದಾನ ನೀಡಿ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಈ ವೇಳೆ ಮಾಜಿ ಶಾಸಕ ಕೇಶವಮೂರ್ತಿ ,ಹುಲ್ಲಹಳ್ಳಿ ಬ್ಲಾಕ್ ಅದ್ಯಕ್ಷ ಶ್ರೀಕಂಠನಾಯಕ, ಗ್ಯಾರಂಟಿ ಯೋಜನೆಗಳ ಸಮಿತಿಯ ತಾಲೂಕ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ ಮಾರುತಿ, ಕಗ್ಗಲಿಹುಂಡಿ ಮಹದೇವು,ಜಯರಾಂ,ಕೆ ಮಾದಪ್ಪ, ಅಭಿನಂದನ್ ಪಾಟೀಲ್, ಚನ್ನಪ್ಪ, ಗುರುಸ್ವಾಮಿ, ನಾಗರಾಜು, ಗೋವಿಂದರಾಜು,ಸುಬ್ರಹ್ಮಣ್ಯ, ಲೋಕೋಪಯೋಗಿ ಇಂಜಿನಿಯರ್ ಬಸವರಾಜ್ ಸೇರಿದಂತೆ ಪ್ರಮುಖರು ಹಾಜರಿದ್ದರು

WhatsApp

Join Now

Telegram

Join Now

Instagram

Join Now