--Ads--

ಮೊದಲನೇ ಆಶಾಡ ಶುಕ್ರವಾರ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ: ಸಮಯ ಪಾಲನೆ ಮಾಡಿದ  ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

On: July 17, 2026 4:39 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮೊದಲನೇ ಆಶಾಡ ಶುಕ್ರವಾರ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ: ಸಮಯ ಪಾಲನೆ ಮಾಡಿದ  ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

ತಾಂಡವಪರ ಜುಲೈ 17 ಆಶಾಡಶುಕ್ರವಾರದ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಹಾಗೂ ವಿಶೇಷ ಪೂಜೆಗೆ ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತ ಸಾಗರ ಇಂದು ಮೊದಲನೇ ಆಶಾಡ ಶುಕ್ರವಾರ ಪ್ರಯುಕ್ತ ಚಾಮುಂಡೇಶ್ವರಿ ಬೆಟ್ಟದಲ್ಲಿ ದೇವಿಯ ದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ಸರದಿ ಸಾಲು ಮತ್ತು ಸಮಯವನ್ನು ನಿಗದಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ನಾನು ತಡವಾಗಿ ಬೆಟ್ಟಕ್ಕೆ ಹೋಗಿದ್ದರೆ ಈಗ ಸಮಯ ಆಗಿದೆ ನಾವು ಸಮಯವನ್ನು ಮುರಿಯಬಾರದು ಎಂದು ಭಾವಿಸಿ ಬೆಟ್ಟದಲ್ಲಿ ಯಾವ ರೀತಿ ಸಿದ್ಧತೆ ನಡೆದಿದೆ ಮತ್ತು ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯ ವೈಖರಿ ಬಗ್ಕ್ತ ಕುದ್ದು ಪರಿಶೀಲನೆ ಮಾಡಿದ್ದೇನೆ ಎಲ್ಲಿಯೂ ಭಕ್ತಾದಿಗಳಿಗೆ ತೊಂದರೆಯಾಗಿಲ್ಲ ನಾನು ಕೂಡ ಸಮಯ ಪಾಲನೆ ಮಾಡಿ ದೇವಿಯ ದರ್ಶನ ಪಡೆಯದೆ ಹೋಗುತ್ತಿದ್ದೆನೆ ಅದೇ ರೀತಿ ನಮ್ಮ ಜೊತೆ ಇರುವವರು ಸಹ ಬೇರೆ ಸರದಿ ಸಾಲಲ್ಲಿ ನಿಂತು ದಿವ್ಯ ದರ್ಶನ ಪಡೆಯುತ್ತಾರೆ ಎಂದು ಸಮಯಪ್ರಜ್ಞೆ ಮೆರೆದರು.

ಅಲ್ಲದೆ ದೇವಾಲಯದ ವತಿಯಿಂದ ಭಕ್ತಾದಿಗಳಿಗೆ ಕುಡಿಯಲು ಬಾದಾಮಿ ಹಾಲು ಸಿಹಿ ಪ್ರಸಾದಗಳನ್ನು ಸರದಿಸಾಲಲ್ಲಿ ಬರುವಂತಹ ಭಕ್ತಾದಿಗಳಿಗೆ ಸಚಿವ ಡಾ ಯತೀಂದ್ರ ಸಿದ್ರಾಮಯ್ಯನವರು ವಿತರಿಸಿದರು

ಈ ಸಂದರ್ಭದಲ್ಲಿ ಭಕ್ತರ ಸುಗಮ ದರ್ಶನ, ಸಂಚಾರ ವ್ಯವಸ್ಥೆ, ಕುಡಿಯುವ ನೀರು, ಸ್ವಚ್ಛತೆ, ವೈದ್ಯಕೀಯ ನೆರವು, ಭದ್ರತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ಎಲ್ಲ ಸೇವೆಗಳು ಸಮರ್ಪಕವಾಗಿ ಲಭ್ಯವಾಗುವಂತೆ ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ ಅವರು
ಇದೇ ವೇಳೆ ಕೆಲವು ಮಹಿಳಾ ಭಕ್ತಾದಿಗಳು ದೇವಿಯ ದರ್ಶನ ಪಡೆಯಲು 2000 ರೂಪಾಯಿ ಟಿಕೆಟ್ ನಿಗದಿ ಮಾಡಿರುವುದು ಸರಿ ಇಲ್ಲ ಇದನ್ನ ಮತ್ತೊಮ್ಮೆ ಪರಿಶೀಲನೆ ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು .

ಈ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದು ಮಹಿಳಾ ಭಕ್ತಾದಿಗಳಿಗೆ ಸಚಿವರು ಭರವಸೆ ನೀಡಿದರು

ಆಷಾಢ ಶುಕ್ರವಾರದ ಈ ಪವಿತ್ರ ಸಂದರ್ಭದಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿಯ ಕೃಪಾಶೀರ್ವಾದ ನಾಡಿನ ಸಮಸ್ತ ಜನರ ಮೇಲಿದ್ದು, ನಾಡಿಗೆ ಸಮೃದ್ಧಿ ಕಾಲಕಾಲಕ್ಕೆ ಮಳೆ ಬೆಳೆಯಾಗಿ ಕೆರೆಕಟ್ಟೆಗಳು ತುಂಬಿ ರೈತಾಪಿ ವರ್ಗಕ್ಕೆ ಒಳ್ಳೆಯದಾಗಲಿ ಎಂದು ಆದಿಶಕ್ತಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

ದೇವಿಯ ದರ್ಶನಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪತ್ನಿ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾಜಿ ಸಚಿವ ರೇವಣ್ಣ ಚಾಮರಾಜನಗರ ಲೋಕಸಭಾ ಸದಸ್ಯ ಸುನಿಲ್ ಬೋಸ್ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇನ್ನೂ ಅನೇಕ ರಾಜಕೀಯ ಗಣ್ಯ ವ್ಯಕ್ತಿಗಳು ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆದರು

WhatsApp

Join Now

Telegram

Join Now

Instagram

Join Now