--Ads--

ನಂಜನಗೂಡಿನಲ್ಲಿ  ವಿಜೃಂಭಣೆಯಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್  ಜಯಂತಿ ಆಚರಣೆ 

On: April 14, 2026 5:04 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನಂಜನಗೂಡಿನಲ್ಲಿ  ವಿಜೃಂಭಣೆಯಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್  ಜಯಂತಿ ಆಚರಣೆ 

ತಾಂಡವಪುರ ಏಪ್ರಿಲ್ 14 ಮೈಸೂರು ಜಿಲ್ಲೆ, ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಾಗೂ ಋಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ನಂಜನಗೂಡಿನಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಅರ್ ಅಂಬೇಡ್ಕರ್ ರವರ 135 ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ,ಯತೀಂದ್ರ ಸಿದ್ದರಾಮಯ್ಯ ಅವರು ಪಾಲ್ಗೊಂಡು ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು
ನಾನು ಇಲ್ಲಿ ಶಾಸಕನಾಗಿ, ಒಬ್ಬ ವಕೀಲನಾಗಿ ಮಾತನಾಡುತ್ತಿರುವುದಕ್ಕೆ ಮೂಲ ಸ್ಫೂರ್ತಿಯೇ ಬಾಬಾ ಸಾಹೇಬರು. ಅವರ ಚಿಂತನೆಗಳು ಮತ್ತು ಹೋರಾಟಗಳು ನನಗೆ ದಾರಿದೀಪವಾಗಿದೆ. ಬಾಬಾ ಸಾಹೇಬರು ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮಹತ್ವವನ್ನು ದೇಶಕ್ಕೆ ಬೋಧಿಸಿದ ಮಹಾನ್ ದಾರ್ಶನಿಕರು. ಸಮಾಜದಲ್ಲಿನ ಅಸಮಾನತೆಗಳ ವಿರುದ್ಧ ಅಚಲ ಹೋರಾಟ ನಡೆಸಿ, ಬಡವರ ಹಾಗೂ ಶೋಷಿತರ ಧ್ವನಿಯಾಗಿ ನಿಂತವರು. ಮಹಿಳೆಯರ ಹಕ್ಕುಗಳಿಗಾಗಿ ಸಹ ನಿರಂತರವಾಗಿ ಹೋರಾಡಿದ ಅವರ ಜೀವನವು ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಅವರ ತತ್ವಗಳು ಇಂದಿಗೂ ದಿಕ್ಕು ತೋರಿಸುತ್ತಿದ್ದು, ಅವರ ಆದರ್ಶಗಳನ್ನು ಅನುಸರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ರವರು ಮಾತನಾಡಿ ಡಾ ಬಿಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂಬೇಡ್ಕರ್ ತತ್ವಗಳಾದ ಶಿಕ್ಷಣ ಸಂಘಟನೆ ಹೋರಾಟ ಈ ಮೂರು ಅಂಶಗಳನ್ನು ತಮ್ಮ ಶಕ್ತಿಯಾಗಿ ಪರಿಗಣಿಸಿದಂತಹ ಮಹಾನ್ ನಾಯಕ ಡಾ ಬಿ ಆರ್ ಅಂಬೇಡ್ಕರ್ ಅವರು ಅವರ ಆಸೆಯಂತೆ ನಾವೆಲ್ಲರೂ ನಡೆದುಕೊಳ್ಳೋಣ ಅವರ ಸಿದ್ದಾಂತದಂತೆ ಶಿಕ್ಷಣ ಸಂಘಟನೆ ಹೋರಾಟಕ್ಕೆ ಹೆಚ್ಚು ಒತ್ತು ನೀಡೋಣ ಎಂದು ತಿಳಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮೃಗಲಾಯ ಪ್ರಾಧಿಕಾರ ಅಧ್ಯಕ್ಷ ರಂಗಸ್ವಾಮಿ ತಹಸೀಲ್ದಾರ್ ಸ್ಮಿತಾ ರಾಮ್ , DYSP ರಘು ನಗರಸಭಾ ಪೌರಯುಕ್ತ ಬಸವರಾಜ್ EO ಜೆರಾಲ್ಡ್ ರಾಜೇಶ್ , ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ ಮುಖ್ಯ ಭಾಷಣಕಾರರಾದ ಸೋಮಶೇಖರ್ ರವರು, ನಗರ ಬ್ಲಾಕ್ ಅಧ್ಯಕ್ಷ ಸಿ. ಎಂ ಶಂಕರ್ , ಕ್ಷೇತ್ರ ಶಿಕ್ಷಣ ನಾಗೇಶ್ ರಾಜ್ ಶಶಿ ರೇಖಾ ಪುಷ್ಪ ನಾಗೇಶ್ ರಾಜ್ ರವರು, ರವಿ , ಬಸವರಾಜ್ , ಜೈ ರಾಮ್ , ಶಿವಣ್ಣ ಹಲ್ಲರೆ ಮಹದೇವು ರಾಜೇಶ್ ಮಲ್ಲಹಳ್ಳಿ ನಾರಾಯಣ ಬಗರ್ ಉಕುಂ ಸಮಿತಿಯ ಸದಸ್ಯ ರಾಜಣ್ಣ ಗ್ರಾಮ ಪಂಚಾಯತಿಗಳ ತಾಲೂಕ ಅಧ್ಯಕ್ಷ ತೊರೆಮಾವು ಟಿ ಡಿ ಗಿರೀಶ್ ಸೇರಿದಂತೆ ಮುಖಂಡರುಗಳು, ವಿವಿಧ ಸಂಘ – ಸಂಸ್ಥೆ ಮತ್ತು ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now