ವಿಜಯ ದರ್ಪಣ ನ್ಯೂಸ್…..
ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ: ಕೃಷಿ ನಿರ್ದೇಶಕಿ ಕಲಾವತಿ

ದೇವನಹಳ್ಳಿ ಬೆಂ.ಗ್ರಾ ಜಿಲ್ಲೆ ಏ.15:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ಇನ್ನು ಮುಂದೆ ಫಾರ್ಮರ್ ಐಡಿ (ಎಫ್ಐಡಿ) ಸಂಖ್ಯೆ ಹೊಂದಿರುವುದು ಕಡ್ಡಾಯ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಕಲಾವತಿ ರವರು ತಿಳಿಸಿದ್ದಾರೆ.
ದೇವನಹಳ್ಳಿಯ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ, ಸಭಾಂಗಣದಲ್ಲಿ ನಡೆದ ರಸಗೊಬ್ಬರ ತಯಾರಕರು, ಸರಬರಾಜುದಾರರು ಮತ್ತು ಮಾರಾಟಗಾರರ ಸಭೆಯಲ್ಲಿ ಮಾತನಾಡಿ
2026-27ನೇ ಸಾಲಿನ ಮುಂಗಾರು ಹಂಗಾಮಿನಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.
ಕೆ-ಕಿಸಾನ್ ತಂತ್ರಾಂಶದ ಬಳಕ ರೈತರು ತಮ್ಮ ಜಮೀನಿನ ವಿಸ್ತೀರ್ಣ ಮತ್ತು ಬೆಳೆದ ಬೆಳೆಗೆ ಅನುಗುಣವಾಗಿ ಅಗತ್ಯ ಇರುವಷ್ಟು ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೆ ಕಿಸಾನ್ ತಂತ್ರಾಂಶದ ಮೂಲಕ ವಿತರಿಸಲಾಗುವುದು ಎಂದರು.
ಹೊಸ ಎಫ್ಐಡಿ ನೋಂದಣಿ: ಈವರೆಗೆ ಫಾರ್ಮರ್ ಐಡಿ ಹೊಂದಿರದ ರೈತರು ಕೂಡಲೇ ತಮ್ಮ ಪಹಣಿ, ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ನೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕಾ ಇಲಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಬೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೆ ಎಫ್.ಐಡಿ ಹೊಂದಿರುವ ರೈತರು ತಮ್ಮ ಎಲ್ಲಾ ಸರ್ವೆನಂಬರ್ ಗಳನ್ನು ಅದಕ್ಕೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಮಾರಾಟಗಾರರಿಗೆ ಎಚ್ಚರಿಕೆ: ಅಧಿಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರ ಎಫ್ಐಡಿ ನಮೂದಿಸಿ ಗೊಬ್ಬರ ಮಾರಾಟಮಾಡಬೇಕು ಇದಕ್ಕೆ ಸಂಬಂಧಿಸಿದಂತೆ ಇಲಾಖೆ ತರಬೇತಿ ಹಾಗೂ ಮಾಹಿತಿ ನೀಡಲಾಗಿದೆ ಚಿಲ್ಲರೆ ರಸಗೊಬ್ಬರ ಮಾರಾಟ ಗಾರರು ತಮ್ಮ ಎಲ್ಲ “ಓ“ ಫಾರಂಗಳನ್ನು ನವೀಕರಣಗೊಳಿಸಿಕೊಳ್ಳಬೇಕು. ಒಂದು ವೇಳೆ ಮಾರಾಟಗಾರರು ‘ಓ’ ಫಾರಂಗಳ ನೋಂದಣಿ ಇಲ್ಲದೆ ಮಾರಾಟ ಮಾಡಿದರೆ, ನಿಯಮ ಮೀರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಥವಾ ಕೃಷಿಯೇತರ ಉದ್ದೇಶಕ್ಕೆ ರಸಗೊಬ್ಬರ ನೀಡಿದರೆ ಅಂತಹ ಮಾರಾಟಗಾರರ ಪರವಾನಾಗಿಯನ್ನು ರದ್ದುಗೊಳಿಸಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕ್ಲಸ್ಟರ್ ಡೆವಲಪ್ ಮೆಂಟ್ ಪ್ರೋಗ್ರಾಂ (ಸಿ.ಡಿ.ಪಿ) ಯೋಜನೆ: ಆಸಕ್ತ ರೈತರಿಂದ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏ. 15:
ಭಾರತ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು (ಎನ್.ಹೆಚ್.ಬಿ) ಹಣ್ಣು, ತರಕಾರಿ, ಪುಷ್ಪ, ತೋಟದ ಬೆಳೆ ಮತ್ತು ಸಾಂಬಾರು ಬೆಳೆಗಳ ಸಮಗ್ರ ಅಭಿವೃದ್ಧಿ ಗುರಿ ಹೊಂದಿದ್ದು, ಕ್ಲಸ್ಟರ್ ಡೆವಲಪ್ ಮೆಂಟ್ ಪ್ರೋಗ್ರಾಂ (ಸಿ.ಡಿ.ಪಿ) ಎಂಬ ಹೊಸ ಯೋಜನೆಯನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನ ಮಾಡಲಿದ್ದು, ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯೋಜನೆಯ ಮುಖ್ಯ ಉದ್ದೇಶ ಒಂದು ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಯಬಹುದಾದ ಬೆಳೆಯನ್ನು ಕ್ಲಸ್ಟರ್ ರೂಪದಲ್ಲಿ ಒಗ್ಗೂಡಿಸಿ ಉತ್ಪಾದನೆ-ಸಂಸ್ಕರಣೆ- ಸಂಗ್ರಹಣೆ-ಮಾರುಕಟ್ಟೆ- ರಫ್ತು ಸರಪಳಿಯನ್ನು ಬಲಪಡಿಸುವುದಾಗಿದೆ.
ಈ ಕ್ಲಸ್ಟರ್ ಗಳಿಗೆ ಎನ್.ಹೆಚ್.ಬಿ ಯಿಂದ ಹಣಕಾಸು ನೆರವು ನೀಡಲಾಗುವುದು. ರಾಷ್ಟ್ರೀಯ ತೋಟಗಾರಿಕೆ ಮಂಡಳಿ (ಎನ್.ಹೆಚ್.ಬಿ) ಸಿ.ಡಿ.ಪಿ ಅನ್ನು ಜಾರಿಗೆ ತರಲು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ರಾಜ್ಯ ತೋಟಗಾರಿಕೆ ಮಿಷನ್ ಏಜೆನ್ಸಿಯು ಸಿ.ಡಿ.ಪಿ ಯೋಜನೆಯ ಅನುಷ್ಟಾನಕ್ಕೆ ಅನುಕೂಲವಾಗುವ ಜವಾಬ್ದಾರಿಯುತ ಸಂಸ್ಥೆಯಾಗಿದ್ದು, ಇದರ ಪಾತ್ರವು ಬೆಳೆಯ ಕ್ಲಸ್ಟರ್ ಆಯ್ಕೆ, ಕಾರ್ಯಗತಗೊಳಿಸುವ ಸಂಸ್ಥೆ ಗುರುತಿಸುವುದು (ಐ.ಎ), ಯೋಜನೆಯ ಮೇಲ್ವಿಚಾರಣೆ ಮತ್ತು ತಳಮಟ್ಟದ ಪರಿಶೀಲನೆಯಾಗಿರುತ್ತದೆ.
ತೋಟಗಾರಿಕೆ ಇಲಾಖೆಯಿಂದ ಈಗಾಗಲೇ ನೀಡುತ್ತಿರುವ (ಹನಿ ನೀರಾವರಿ), ಪಾಲಿಮನೆ ಮತ್ತು ಬೆಳೆಪದ್ದತಿ, ಟ್ರಾಕ್ಟರ್, ಟಿಲ್ಲರ್, INM-IPM, ಕೃಷಿಹೊಂಡ, ಪ್ಯಾಕ್ ಹೌಸ್, ಪ್ಲಾಸ್ಟಿಕ್ ಮಲ್ಚಿಂಗ್, ನೆರಳು ಮನೆ, Cold room Stagging, ಶೀಥಲ ವಾಹನ, ಎರೆಹುಳು ಗೊಬ್ಬರ ಘಟಕ, Sensor based automation unit in poly house) ಘಟಕಗಳಿಗೆ ಆಸಕ್ತ ರೈತರು ಹತ್ತಿರದ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ರವರುಗಳ ಕಛೇರಿಯಲ್ಲಿ ಹೆಸರುಗಳನ್ನು ಏ. 17 ರ ಒಳಗಾಗಿ ನೋಂದಾಯಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 15:
2026-27ನೇ ಸಾಲಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ(ಆಂಗ್ಲ ಮಾಧ್ಯಮ) ಸೇರ ಬಯಸುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆನ್ಲೈನ್ www.sw.kar.nic.in ವೈಬ್ಸೈಟ್ ಮೂಲಕ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನ. ಪ್ರವೇಶ ಪರೀಕ್ಷೆಯನ್ನು ಮೇ 12 ರಂದು ಮಂಗಳವಾರ ಬೆಳಗ್ಗೆ 10.30 ರಿಂದ 1ಗಂಟೆಯವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಡಶಾಲೆ ವಿಭಾಗ), ಹೊಸ ಬಸ್ ನಿಲ್ದಾಣ ಎದರು, ದೇವನಹಳ್ಳಿ ಟೌನ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೂ.ಸಂ.: 080-29787447, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ದೇವನಹಳ್ಳಿ ದೂ.ಸಂ: 080- 27681784, ದೊಡ್ಡಬಳ್ಳಾಪುರ ದೂ.ಸಂ.: 080- 27623681, ನೆಲಮಂಗಲ ದೂ.ಸಂ.: 080- 27723172 ಹಾಗೂ ಹೊಸಕೋಟೆ ದೂ.ಸಂ.: 080- 27931528 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.