ವಿಜಯ ದರ್ಪಣ ನ್ಯೂಸ್…
ಹಾರೋಹಳ್ಳಿ ಗ್ರಾಮದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣ: ಶಾಸಕ ಜಿಟಿ ದೇವೇಗೌಡ
ತಾಂಡವಪುರ ಏಪ್ರಿಲ್ 15 ಡಾಕ್ಟರ್.ಬಿ.ಆರ್.ಅಂಬೇಡ್ಕರ್‌ರವರ ಆಶಯದಂತೆ ಸಮುದಾಯ ಭವನಗಳನ್ನು ಗ್ರಾಂಥಾಲಯಗಳಾಗಿ ಪರಿವರ್ತನೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿರುವ ಸಮುದಾಯ ಭವನಗಳನ್ನು ಗ್ರಂಥಾಲಯಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.











