--Ads--

ಜೆಡಿಎಸ್‌ ಜಿಲ್ಲಾಧ್ಯಕ್ಷ ಮುಧೋಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

On: April 23, 2026 7:13 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜೆಡಿಎಸ್‌ ಜಿಲ್ಲಾಧ್ಯಕ್ಷ ಮುಧೋಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಗದಗ: ಜೆಡಿಎಸ್ ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇಕಡ 33% ಮೀಸಲಾತಿ ಕಲ್ಪಿಸುವ ವಿಧೇಯಕಕ್ಕೆ ಲೋಕಸಭೆಯ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಮೈತ್ರಿ ಹಿಂಡಿ ಕೂಟ ವಿರುದ್ಧ ಮತ ಚಲಾಯಿಸಿ ವಿದೇಯಕೆ ಹಿನ್ನಡೆಯಾದ ಕಾರಣಕ್ಕೆ ಮಹಿಳೆಯರಿಗೆ ಆದಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನಗರದ ಗಾಂಧಿ ವೃತದಲ್ಲಿ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಗದಗ ಜಿಲ್ಲಾಧ್ಯಕ್ಷ ಶ್ರೀ ಎಂ ವೈ ಮುಧೋಳ ವಹಿಸಿಕೊಂಡಿದ್ದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ ಹೆಚ್ ಕೊಪ್ಪಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಈರಣ್ಣ ಬಾಳಿಕಾಯಿ, ಜಿಲ್ಲಾ ಪದಾಧಿಕಾರಿಗಳಾದ ಗಿರೀಶ ಸಂಶಿ, ದೇವಪ್ಪ ಮಲ್ಲಸಮುದ್ರ, ವೀರೇಶ್ ಜಿರ್ಲ್, ತಾಲೂಕುಗಳ ಅಧ್ಯಕ್ಷರುಗಳಾದ ಶ್ರೀ ಮಂಜುನಾಥ ದೊಡ್ಡನಿ, ಶರಣಪ್ಪ ಹೂಗಾರ, ಸಂಗಪ್ಪ ಎಲಗುಣಿಸಿ ಮಹಿಳಾ ಘಟಕದ ತಾಲೂಕ ಅಧ್ಯಕ್ಷನೀಯರಾದ ಶ್ರೀಮತಿ ಲಲಿತಾ ಹಾಗೂ ಮಹಿಳಾ ಸಂಘಟನೆಯ ಅನೇಕ ಜನ ಕಾರ್ಯಕರ್ತರು ಪಕ್ಷದ ಮುಖಂಡರಾದ ಎಂ ಎಸ್ ಪತೌಡ್ರು, ಸಂತೋಷ್ ಪಾಟೀಲ, ರಮೇಶ್ ಹುಣಸಿಮರ, ಖುರ್ಷಿದ್ ಢಾಲಾಯತ ತಾಲೂಕ ಪದಾಧಿಕಾರಿಗಳಾದ ಮುನಾ ಢಾಲಾಯತ ಹಾಗೂ ಶಿರಹಟ್ಟಿ ಮುಂಡರಗಿ, ಗಜೇಂದ್ರಗಡ, ಗದಗ ತಾಲೂಕಿನ ಅನೇಕ ಜನ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ