ವಿಜಯ ದರ್ಪಣ ನ್ಯೂಸ್…
ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೊಡಗಿಗೆ ಕೆಟ್ಟ ಹೆಸರು: ಶಾಸಕ ಪೊನ್ನಣ್ಣ
ಬೆಂಗಳೂರು:ಕೊಡಗಿನ ಹೋಂಸ್ಟೇವೊಂದರಲ್ಲಿ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣದಲ್ಲಿ ಈಗಾಗಲೇ ಇಬ್ಬರ ಬಂಧನ ಆಗಿದೆ. ಕೊಡಗಿನಲ್ಲಿ ಇಂತಹ ಘಟನೆ ನಡೆದಿರುವುದು ನೋವುಂಟು ಮಾಡಿದೆ. ಜಿಲ್ಲೆಯಲ್ಲಿ ಯಾವತ್ತೂ ಹೀಗೆ ಆಗಿಲ್ಲ. ಹೊರರಾಜ್ಯದ ವ್ಯಕ್ತಿಗಳಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಹೋಂಸ್ಟೇ ಬಗ್ಗೆಯೂ ಸಮಗ್ರ ತನಿಖೆ ಆಗಬೇಕೆಂದು ಸ್ಥಳೀಯ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿದೇಶಿ ಮಹಿಳಾ ಪ್ರಜೆ ಪ್ರವಾಸಕ್ಕೆ ಬಂದಿದ್ದರು.
ಹೋಂಸ್ಟೇನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಕೃತ್ಯ ಎಸಗಿರುವ ಬಗ್ಗೆ ದೂರು ಕೊಡಲಾಗಿದೆ. ಹೋಂ ಸ್ಟೇ ಮಾಲೀಕರು ಸರಿಯಾಗಿ ಸ್ಪಂದನೆ ನೀಡಿಲ್ಲ. ಬಳಿಕ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲೆ ಮಾಡಿ ಅವರ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮತ್ತಷ್ಟು ಚುರುಕಾಗಬೇಕು. ರಾಯಭಾರಿ ಕಚೇರಿಗೆ ಅವರು ಹೋಗಿಲ್ಲ. ರಾಯಭಾರಿ ಕಚೇರಿಯಿಂದ ಪ್ರವಾಸಿಗರಿಗೆ ಕೊಡುವ ಅಧಿಕಾರಿಗಳಿಗೆ ಆಕೆ ಮಾಹಿತಿ ನೀಡಿದ್ದಾರೆ. ಅದರ ಮೇಲೆ ದೂರು ನೀಡಿದ್ದಾರೆ. ದೂರಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಎಸ್ಪಿ ಮಾಹಿತಿ ಕೊಟ್ಟಿದ್ದಾರೆ. ಮುಂದೆ ತನಿಖೆ ಆಗಲಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಲಿದೆ ಎಂದು ತಿಳಿಸಿದರು.












