ವಿಜಯ ದರ್ಪಣ ನ್ಯೂಸ್…
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ನಾಯಂಡಹಳ್ಳಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ
ಹಿರಿಯ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ನೇರ ಚುನಾವಣೆ ಎದುರಿಸಿಲ್ಲ, ಹಿಂಬಾಗಿಲ ರಾಜಕಾರಣಿ: ಕೆ.ಉಮೇಶ್ ಶೆಟ್ಟಿ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಪಕ್ಷದ ಮುಖಂಡರು, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಉಮೇಶ್ ಶೆಟ್ಟಿರವರ ನೇತೃತ್ವದಲ್ಲಿ ನಾಯಂಡಹಳ್ಳಿ ವಾರ್ಡಿನ ರಮೇಶ್ ಮತ್ತು ಶ್ರೀನಿವಾಸ್ ರವರು ಅಪಾರ ಬೆಂಬಲಿಗರ ಜೊತೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು, ಪಕ್ಷದ ಧ್ವಜ ನೀಡಿ, ಶಾಲು ಹಾಕಿ ಬರಮಾಡಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಕೆ.ಉಮೇಶ್ ಶೆಟ್ಟಿ ಮಾತನಾಡಿ ಬಿಜೆಪಿ ಪಕ್ಷಕ್ಕೆ ವಿಶ್ವದಲ್ಲಿ ಅತಿಹೆಚ್ಚು ಸದಸ್ಯರು ಹೊಂದಿರುವ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ದೇಶದ ಎಲ್ಲ ಕಡೆಗಳಲ್ಲಿ ಬಿಜೆಪಿ ಪಕ್ಷದ ಕಮಲ ಆರಳಿದೆ .ಬಿಜೆಪಿ ಪಕ್ಷ. ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಕಳೆದ 12ವರ್ಷದಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಆರ್ಥಿಕ ಸ್ಥಿತಿಯಲ್ಲಿ ವಿಶ್ವದಲ್ಲಿ ನಾಲ್ಕನೇಯ ಸ್ಥಾನದಲ್ಲಿ ಇದೆ.
ಹಲವಾರು ಕಾರ್ಯಕರ್ತರು ಪಕ್ಷ ಬಿಟ್ಟು ಹೋಗಿದ್ದರು, ಇಂದು ಮೋದಿರವರ ಆಡಳಿತ ಮತ್ತು ಪಕ್ಷ ಸಂಘಟನೆ ನೋಡಿ ಮತ್ತೇ ಪಕ್ಷಕ್ಕೆ ಮರಳಿ ಬಂದಿದ್ದಾರೆ.
ಇರಾನ್-ಇಸ್ರೇಲ್, ಅಮೇರಿಕಾ ಯುದ್ದದಿಂದ ಬೆಲೆ ಏರಿಕೆ ಹೆಚ್ಚಾಗಿದೆ ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರ್ಕಾರ ಕಾರಣ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಹಾಲು, ನೀರಿನ ಬಿಲ್ಲು , ಮನೆ ನೋಂದಾಣಿ ಮಾಡಲು ಬೆಲೆ ಏರಿಕೆ ಮಾಡಿದ್ದಾರೆ ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ನಾಡಿನ ಜನತೆಗೆ ಉತ್ತರಿಸಬೇಕು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಗಂಗೊಂಡನಹಳ್ಳಿ ಮತ್ತು ಗೋರಿ ಪಾಳ್ಯ ಎರಡು ಕಡೆ ಮತಗಳು ಇರುತ್ತದೆ ಈ ರೀತಿಯಿಂದ ಕಳ್ಳ ಮತದಾನವಾಗುತ್ತಿದೆ ಎಸ್.ಐ.ಆರ್.ನಿಂದ ಒಂದೇ ಕಡೆ ಮತದಾನಕ್ಕೆ ಅವಕಾಶವಿರಲಿದೆ.

ಬಿ.ಕೆ.ಹರಿಪ್ರಸಾದ್ ಹಿರಿಯ ರಾಜಕಾರಣಿಯ ನಾಲಿಗೆಯಲ್ಲಿ ಪ್ರಧಾನಿ ಕುರಿತು ಇಂತಹ ಮಾತು ಆಡಬಾರದಾಗಿತ್ತು. ಬಿ.ಕೆ.ಹರಿಪ್ರಸಾದ್ ಎಂದು ನೇರ ಚುನಾವಣೆಯಲ್ಲಿ ಇಡಿ ಜೀವಮಾನದಲ್ಲಿ ಗೆದ್ದಿಲ್ಲ, ಹಿಂಬಾಗಿಲಿನಿಂದ ರಾಜಕಾರಣ ಮಾಡಿದ್ದಾರೆ . ಪ್ರಧಾನಿರವರ ವಯಸ್ಸು ಮುಖ್ಯವಲ್ಲ ಅವರಲ್ಲಿರುವ ಜ್ಞಾನರ್ಜನೆ ಮುಖ್ಯ.
ಪ್ರಧಾನಿ ನರೇಂದ್ರಮೋದಿರವರು ವಿಶ್ವ ಮೆಚ್ಚಿದ ನಾಯಕ . ಬಿಜೆಪಿ ಪಕ್ಷದಲ್ಲಿ 18ಕೋಟಿ ಸದಸ್ಯರು ಇದ್ದಾರೆ. ಯುವ ನೇತಾರ ನಿತಿನ್ ನಬೀನ್ ರವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮಾಡಿ ಯುವ ಜನತೆಗೆ ಉತ್ತಮ ಸಂದೇಶ ನೀಡಿದ್ದಾರೆ. ಪಕ್ಷ ತಾಯಿ ಇದ್ದಂತೆ. ದೇಶ ಮೊದಲು, ನಂತರ ಪಕ್ಷ , ವ್ಯಕ್ತಿ ಅಮೇಲೆ ಹಾಗೂ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಿದ್ದಾಂತವಿರುವ ಪಕ್ಷ.
ಪಾಲಿಕೆ ಚುನಾವಣೆ ಯಾವಗಾಲಾದರು ಬರಬಹುದು. ಉತ್ತಮ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ ಅವರನ್ನು ಗೆಲ್ಲಿಸಲು ಹಗಲಿರುಳು ಶ್ರಮಿಸಬೇಕು.
ಎಸ್.ಐ.ಆರ್. ಕುರಿತು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು. ನಗರದಲ್ಲಿ ಕಡಿಮೆ ಮತದಾನವಾಗುತ್ತಿದೆ ಇದಕ್ಕೆ ಕಾರಣ ಎರಡು ಕಡೆಗಳಲ್ಲಿ ಮತದಾನ ಹಕ್ಕು ಪಡೆದಿರುತ್ತಾರೆ ಇದಕ್ಕೆ ಕಡಿವಾಣ ಹಾಕಲು ಎಸ್.ಐ.ಆರ್.ಬಂದಿದೆ ಎಂದು ಹೇಳಿದರು.
ಮಾಜಿ ಬಿಬಿಎಂಪಿ ಸದಸ್ಯೆ ರಾಜೇಶ್ವರಿ ಬೆಳಗೊಡ್, ಮಂಡಲ ಅಧ್ಯಕ್ಷ ಮಂಜುನಾಥ್, ವಾರ್ಡ್ ಅಧ್ಯಕ್ಷ ಜಗದೀಶ್, ಕ್ರಾಂತಿರಾಜು, ದೊಡ್ಡವೀರಯ್ಯ, ಎಸ್.ರಾಜು, ಬಾಲಾಜಿ, ಜಯರಾಮ್, ಹೇಮಂತ್ ರವರು ಉಪಸ್ಥಿತರಿದ್ದರು.











