--Ads--

ಮತದಾರರ ಪಟ್ಟಿಪರಿಷ್ಕರಣೆ ಜನರಲ್ಲಿ ಜಾಗೃತಿ ಮೂಡಿಸಿ: ಎನ್ ಎಲ್ ಅಂಬರೀಶ್ ಗೌಡ

On: June 3, 2026 2:31 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮತದಾರರ ಪಟ್ಟಿಪರಿಷ್ಕರಣೆ ಜನರಲ್ಲಿ ಜಾಗೃತಿ ಮೂಡಿಸಿ: ಎನ್ ಎಲ್ ಅಂಬರೀಶ್ ಗೌಡ

ವಿಜಯಪುರ ದೇವನಹಳ್ಳಿ ತಾಲ್ಲೂಕು: ದೇಶದಲ್ಲಿ ಮತದಾರರ ಸಮಗ್ರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಇದರ ಬಗ್ಗೆ ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಒದಗಿಸಬೇಕು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಎನ್.ಎಲ್. ಅಂಬರೀಶ್ ಗೌಡ ತಿಳಿಸಿದರು.

ಇಲ್ಲಿನ ಗಂಗಮ್ಮನ ದೇವಾಲಯದಲ್ಲಿ, 6ನೇವಾರ್ಡನ ಶಿಲ್ಪ ಅಜಿತ್ ನಿವಾಸ, ಹಾಗೂ ಪ್ರವಾಸಿ ಮಂದಿರದಲ್ಲಿ  ಹಮ್ಮಿಕೊಳ್ಳಲಾಗಿದ್ದ ಬಿಎಲ್‌ಎ-2 ಮತ್ತು ಬೂತ್ ಅಧ್ಯಕ್ಷರ ವಿಶೇಷ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಪರಿಷ್ಕರಣೆಯಿಂದ ಅಕ್ರಮ ಮತದಾರರಿಗೆ ಬ್ರೇಕ್: ಈಗಾಗಲೇ ಎಸ್‌ಐಆರ್ ಪ್ರಕ್ರಿಯೆಯ ಪರಿಣಾಮವಾಗಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ 92 ಲಕ್ಷ ಹಾಗೂ ಬಿಹಾರದಲ್ಲಿ 60 ಲಕ್ಷಕ್ಕೂ ಹೆಚ್ಚು ಅಕ್ರಮ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ನಮ್ಮ ರಾಜ್ಯದಲ್ಲಿಯೂ ಬಾಂಗ್ಲಾದೇಶ ಸೇರಿದಂತೆ ಅನ್ಯ ದೇಶಗಳ ನಾಗರಿಕರು ಅಕ್ರಮವಾಗಿ ನೆಲೆಸಿದ್ದು, ಇಲ್ಲೂ ಸಹ ಸದ್ಯ ಎಸ್‌ಐಆರ್ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿದೆ ಎಂದು ಅಂಬರೀಶ್ ಗೌಡ ಹೇಳಿದರು.

ಮುಂದುವರಿದು ಮಾತನಾಡಿದ ಅವರು, ವಿಜಯಪುರ ಪಟ್ಟಣದಲ್ಲಿ ಒಟ್ಟು 33 ಬೂತ್ ಗಳಿದ್ದು, ಎಲ್ಲ ಬೂತ್ ಅಧ್ಯಕ್ಷರು ಹಾಗೂ ಬಿಎಲ್‌ಎ-2 ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಎಸ್ ಐ ಆರ್  ಕುರಿತು ಜಾಗೃತಿ ಮೂಡಿಸಬೇಕು. ಬಿಎಲ್‌ಎ-2 ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರಿಗೆ ನೀಡಿರುವ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ಸೂಚಿಸಿದರು.

ಕೇಂದ್ರದ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯ ಜನರಿಗೆ ತಲುಪಿಸಿ ಬಿಜೆಪಿ ಟೌನ್ ಅಧ್ಯಕ್ಷ ವೆಂಕಟೇಶ್ ಪ್ರಭು ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರು ತಮಗೆ ನೀಡಿರುವ ಜವಾಬ್ದಾರಿಯನ್ನು ಅರಿತು ನಿಷ್ಠೆಯಿಂದ ಕೆಲಸ ಮಾಡಬೇಕು. ಮನೆ ಮನೆಗೆ ತೆರಳಿದಾಗ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಹಾಗೂ ಕೇಂದ್ರದ ಮೋದಿಯವರ ಜನಪರ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಪಕ್ಷದ ಪ್ರಮುಖ ಮುಖಂಡರಾದ  ಅನಿಲ್, ಬುಲೆಟ್ ರಾಮಚಂದ್ರಪ್ಪ, ರಾಮಕೃಷ್ಣ ಹೆಗಡೆ, ಭಗವಾನ್, ಬಲಮುರಿ ಶ್ರೀನಿವಾಸ್, ಶಾಮಣ್ಣ, ನಾಗವೇಣಿ, ಚಂದು, ಶಾಮಣ್ಣ, ವಿಜಯ ರಾಘವೇಂದ್ರ, ತಾಯಮ್ಮ, ಪ್ರೇಮ, ಭಾಗ್ಯಮ್ಮ, ಹಾಗೂ ಶಿವಣ್ಣ ಸೇರಿದಂತೆ ಹಲವು ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರು ಉಪಸಿತರಿದರು.

WhatsApp

Join Now

Telegram

Join Now

Instagram

Join Now