ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಪೌರಾಯುಕ್ತ ಬಸವರಾಜ್
ತಾಂಡವಪುರ ಜೂನ್ ಐದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದಕ್ಷಿಣ ಕಾಶಿ, ನಂಜನಗೂಡುನಗರಸಭೆ ವತಿಯಿಂದ ಚಾಮಲಾಪುರ ಹುಂಡಿ ಬಡಾವಣೆಯಲ್ಲಿ ಐವತ್ತಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು
ನಗರಸಭೆ ಪೌರವಯುಕ್ತ ಬಸವರಾಜು ಮಾತನಾಡಿ ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಗಿಡಗಳನ್ನು ನೆಡುವುದು ಮುಖ್ಯವಲ್ಲ ಅದರ ಪೋಷಣೆ ಬಹಳ ಮುಖ್ಯ ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಾಮಲಾಪುರ ಬಡಾವಣೆಯ ಪ್ರತಿ ಮನೆಗಳ ಮುಂದೆ ಒಂದೊಂದು ಗಿಡವನ್ನು ನೆಟ್ಟಿದ್ದೇವೆ . ಮನೆಯವರು ಕೂಡ ಪ್ರತಿದಿನ ತಮ್ಮ ಮಕ್ಕಳಂತೆ ನೀರನ್ನು ಹಾಕಿ ಪೋಷಣೆ ಮಾಡಬೇಕು ಇದರಿಂದ ಪರಿಸರ ಇನ್ನೂ ವೃದ್ಧಿಯಾಗುತ್ತದೆ ಮುಂದಿನ ದಿನಗಳಲ್ಲಿ ಪಟ್ಟಣದ ಪ್ರತಿ ವಾರ್ಡಗಳಲ್ಲಿ ಗಿಡಗಳನ್ನು ಹಾಕಿ ಅವುಗಳನ್ನು ಸಂರಕ್ಷಣೆ ಮಾಡಿ ಪರಿಸರ ಉಳಿಸಲು ನಗರ ಸಭೆ ವತಿಯಿಂದ ಮಾಡಲಾಗುತ್ತದೆ ಎಂದರು
ಇದಕ್ಕೆ ಬಡಾವಣೆಯ ನಿವಾಸಿಗಳು ಕೂಡ ಕೈಜೋಡಿಸಿ ಪ್ರತಿದಿನ ಗಿಡಗಳಿಗೆ ನೀರನ್ನು ಹಾಕಿ ರಕ್ಷಿಸಬೇಕು ಎಂದರು ಒಂದು ವರ್ಷಗಳ ಕಾಲ ಇದನ್ನು ರಕ್ಷಿಸಿದರೆ ಅದರಿಂದ ನಮಗೆ ಉಪಯೋಗ ನಮ್ಮಿಂದ ಅದಕ್ಕೆ ಉಪಯೋಗವಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಮನೆಗಳ ಮುಂದೆ ಒಂದೊಂದು ಗಿಡಗಳನ್ನು ಹಾಕಿ ಪರಿಸರ ಉಳಿಸಬೇಕೆಂದು ಮನವಿ ಮಾಡಿದರು.
ಸಹಾಯಕ ಪರಿಸರ ಅಧಿಕಾರಿ ನೇತ್ರಾವತಿ ಮೇಡಂ ಮಾತನಾಡಿ ಪರಿಸರ ಉಳಿಸಿ ಬೆಳೆಸುವ ಕೆಲಸಗಳು ಹೆಚ್ಚು ಹೆಚ್ಚು ಆಗಬೇಕು ಎಂದರು ಇದರ ಜೊತೆಗೆ ಕಸ ವಿಂಗಡಣೆಯ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿ ಮೊದಲು ಎರಡು ಭಾಗವಾಗಿ ಕಸವನ್ನು ವಿಂಗಡನೆ ಮಾಡುತ್ತಿದ್ದೆವು . ಹಸಿ ಕಸ ಒಣ ಕಸ ಎಂದು ಆದರೆ ಈಗ ನಾಲ್ಕು ಭಾಗವಾಗಿ ವಿಂಗಡಣೆ ಮಾಡಬೇಕೆಂದು ಆದೇಶ ಬಂದಿದೆ ಹಸಿ ಕಸ ಒಣ ಕಸ ಮತ್ತು ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಎಂದು ನಾಲ್ಕು ಭಾಗವಾಗಿ ಮನೆಯಲ್ಲೇ ವಿಂಗಡಣೆ ಮಾಡಿ ಮನೆ ಹತ್ತಿರ ಬರುವ ವಾಹನಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.
ಇದರ ಬಗ್ಗೆ ನಗರಸಭೆ ವತಿಯಿಂದ ಪ್ರತಿ ದಿನ ಮನೆ ಹತ್ತಿರವೇ ಮಾಹಿತಿ ನೀಡುತ್ತಿದ್ದಾರೆ ಆದ್ದರಿಂದ ಮನೆಯವರು ಕೂಡ ನಗರಸಭೆ ಜೊತೆಗೆ ಕೈಜೋಡಿಸಿ ಕಸವನ್ನು ನಾಲ್ಕು ಭಾಗವಾಗಿ ವಿಂಗಡನೆ ಮಾಡಿ ನೀಡಬೇಕು ನಿಮ್ಮಗಳ ಜೊತೆ ನಗರಸಭೆ ಇದೆ ನಗರಸಭೆ ಜೊತೆ ನೀವು ಇರಬೇಕು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿAEE ಮಹೇಶ್ ವಸಂತ ಮಹೇಶ್ ದಮಯಂತಿ ನಾರಾಯಣ ರಾಜೇಶ್ ನಗರಸಭೆ ಮಾಜಿ ಸದಸ್ಯ ಸಿದ್ದರಾಜು ಶಂಕ್ರಪ್ಪ ಗೀತಾ ಸರಿತಾ ಪಲ್ಲವಿ ಕುಮಾರಿ ಧನಲಕ್ಷ್ಮಿ ಚಂದ್ರಿಕಾ ಭಾಗ್ಯ ಪೂರ್ಣಿಮಾ ಜ್ಯೋತಿ ನಂಜುಂಡ ಶಂಕರ ಸೇರಿದಂತೆ ಇತರರು ಇದ್ದರು