--Ads--

ಮೈಸೂರು ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : 2 ಕೋಟಿ ಮೌಲ್ಯದ ವಸ್ತು ವಶ

On: June 8, 2026 3:20 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಮೈಸೂರು ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : 2 ಕೋಟಿ ಮೌಲ್ಯದ ವಸ್ತು ವಶ

ತಾಂಡವಪುರ ಜೂನ್ 8ಮೈಸೂರು ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಮೈಸೂರು ನಗರ ಪೊಲೀಸರು ಮೂರು ತಿಂಗಳಲ್ಲಿ ಮೈಸೂರು ನಗರದಲ್ಲಿ ನಡೆದಿರುವ 44 ವಂಚನೆ ಮತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು, 2.12 ಕೋಟಿ ರೂ. ವೌಲ್ಯದ ನಗದು, ಚಿನ್ನಾಭರಣ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಮಾತನಾಡಿ, 44 ಪ್ರಕರಣಗಳಲ್ಲಿ ಭಾಗಿಯಾಗಿದ್ದ 55 ಮಂದಿಯನ್ನು ಬಂಧಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ನಡೆದಿದ್ದ ದರೋಡೆ-1, ಸುಲಿಗೆ-2, ಕನ್ನ ಕಳವು-10, ಮನೆ ಕಳ್ಳತನ-9, ಮನೆ ಕೆಲಸದವರಿಂದ ಕಳ್ಳತನ-4, ವಾಹನ ಕಳ್ಳತನ-10, ಸಾಮಾನ್ಯ ಕಳ್ಳತನ-5, ವಂಚನೆ-3 ಸೇರಿ 44 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
41 ಕಳವು ಪ್ರಕರಣದಲ್ಲಿ 2.09 ಕೋಟಿ ರೂ. ವೌಲ್ಯದ 1 ಕೆಜಿ 578 ಗ್ರಾಂ ಚಿನ್ನಾಭರಣ, 3 ಕೆಜಿ 578 ಗ್ರಾಂ. ಬೆಳ್ಳಿ ಪದಾರ್ಥ, 10 ವಾಹನಗಳು ಮತ್ತು 2.76 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ಕಳ್ಳತನ ಸೇರಿದಂತೆ ನಾನಾ ಪ್ರಕರಣಗಳಲ್ಲಿ ನಗದು ಸೇರಿದಂತೆ ಚಿನ್ನಾಭರಣ ಕಳೆದುಕೊಂಡ ಮಾಲೀಕರಿಗೆ ನಗರ ಪೊಲೀಸ್‌ ಆಯುಕ್ತರು ಕಳವಾಗಿದ್ದ ವಸ್ತುಗಳನ್ನು ಹಿಂದಿರುಗಿಸಿದರು.
234 ಮೊಬೈಲ್‌ ಪತ್ತೆ:                                 ಕಳೆದ ಮೂರು ತಿಂಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಸಿಇಐಆರ್‌ ಪೋರ್ಟಲ್‌ನಲ್ಲಿ ಪತ್ತೆ ಹಚ್ಚಲಾಗಿದ್ದು, 26.08 ಲಕ್ಷ ರೂ. ವೌಲ್ಯದ 234 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲಾಗಿದೆ,” ಎಂದರು.
ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಡಾ. ಹರ್ಷ ಪ್ರಿಯಂ ವದಾ, ಕೆ.ಎಸ್‌.ಸುಂದರ್‌ ರಾಜ್‌ ಇದ್ದರು.
ಎಲ್ಲೆಲ್ಲೆ ಎಷ್ಟೆಷ್ಟು:                                   ಮಂಡಿ ಠಾಣೆ: ಇಬ್ಬರ ಬಂಧನ, 90 ಲಕ್ಷ ರೂ. ವೌಲ್ಯದ 660 ಗ್ರಾಂ ಚಿನ್ನಾಭರಣ ವಶ,
ವಿಜಯ ನಗರ ಠಾಣೆ: ಇಬ್ಬರ ಬಂಧನ,23.5 ಲಕ್ಷ ರೂ, ವೌಲ್ಯದ 170 ಗ್ರಾಂ ಚಿನ್ನಾಭರಣ, ಬಟ್ಟೆ ವಶ.
ಸಿಸಿಬಿ: ಆರು ಮಂದಿ ಬಂಧನ, 5 ಪ್ರಕರಣ ಪತ್ತೆ, 23.74 ಲಕ್ಷ ರೂ. ನಗದು, ಚಿನ್ನಾಭರಣ ವಶ.
ಸರಸ್ವತಿಪುರಂ ಠಾಣೆ: ಇಬ್ಬರ ಬಂಧನ, 4 ಕಳ್ಳತನ ಪತ್ತೆ, 18.4 ಲಕ್ಷ ರೂ. ಚಿನ್ನಾಭರಣ ವಶ.
ನಜರ್‌ಬಾದ್‌ ಠಾಣೆ: ಇಬ್ಬರ ಬಂಧನ, 2 ಪ್ರಕರಣ ಪತ್ತೆ, 9.25 ಲಕ್ಷ ರೂ. ವೌಲ್ಯದ ನಗದು, ಚಿನ್ನಾಭರಣ ವಶ,
ಮೇಟಗಳ್ಳಿ ಠಾಣೆ: 13 ಮಂದಿ ಬಂಧನ, 10 ಪ್ರಕರಣ ಪತ್ತೆ, 8.22 ಲಕ್ಷ ರೂ. ವೌಲ್ಯದ ನಗದು, ಚಿನ್ನಾಭರಣ, ಪದಾರ್ಥ ವಶಕ್ಕೆ ಪಡೆದಿದ್ದಾರೆ.
ಉದಯಗಿರಿ ಠಾಣೆ: 5 ಮಂದಿ ಬಂಧನ, 3 ಪ್ರಕರಣ ಪತ್ತೆ,5.45 ಲಕ್ಷ ರೂ. ವೌಲ್ಯದ ಚಿನ್ನಾಭರಣ, ವಾಹನ ವಶ.,
ಕೃಷ್ಣರಾಜ ಠಾಣೆ: ಒರ್ವನ ಬಂಧನ, 1 ಪ್ರಕರಣ ಪತ್ತೆ, 4.65 ಲಕ್ಷ ರೂ. ಚಿನ್ನಾಭರಣ ವಶ.
ಕುವೆಂಪು ನಗರ ಠಾಣೆ: 6 ಮಂದಿ ಬಂಧನ, 3 ಪ್ರಕರಣ ಪತ್ತೆ,4.10 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಸ್ತು ವಶ.
ಲಕ್ಷ್ಮೀಪುರಂ ಠಾಣೆ: ಒಬ್ಬನ ಬಂಧನ, 1 ಪ್ರಕರಣ ಪತ್ತೆ,3.55 ಲಕ್ಷ ರೂ. ವೌಲ್ಯದ ನಗದು,ಚಿನ್ನಾಭರಣ ವಶ.
ವಿದ್ಯಾರಣ್ಯಪುರಂ ಠಾಣೆ: ಒರ್ವನ ಬಂಧನ, 1 ಪ್ರಕರಣ ಪತ್ತೆ, 3 ಲಕ್ಷ ರೂ. ವೌಲ್ಯದ ಬೆಳ್ಳಿ ಪದಾರ್ಥ ವಶ.
ಹೆಬ್ಬಾಳು ಠಾಣೆ:8 ಮಂದಿ ಬಂಧನ, 4 ಪ್ರಕರಣ ಪತ್ತೆ,1.43 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶ.
ವಿವಿ ಪುರಂ ಠಾಣೆ: ಒರ್ವನ ಬಂಧನ, 1 ಪ್ರಕರಣ ಪತ್ತೆ, 90 ಸಾವಿರ ರೂ. ವೌಲ್ಯದ ಚಿನ್ನಾಭರಣ ವಶ.
ದೇವರಾಜ ಠಾಣೆ: 3 ಬಂಧನ, 3 ಪ್ರಕರಣ ಪತ್ತೆ,1.48 ಲಕ್ಷ ರೂ. ವೌಲ್ಯದ ವಾಹನ ವಶ.
ಎನ್‌.ಆರ್‌.ಠಾಣೆ: ಇಬ್ಬರ ಬಂಧನ, 1 ಪ್ರಕರಣ ಪತ್ತೆ, 25 ಸಾವಿರ ರೂ. ವೌಲ್ಯದ ವಾಹನ ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದರು

WhatsApp

Join Now

Telegram

Join Now

Instagram

Join Now