ವಿಜಯ ದರ್ಪಣ ನ್ಯೂಸ್….
ಬಿಜೆಪಿ ಕೇಂದ್ರ ಸರ್ಕಾರ 12ಪೂರೈಸಿದ ಹಿನ್ನಲೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಪೂಜೆ, ಸಿಹಿ ಹಂಚಿ ಸಂಭ್ರಮಾಚರಣೆ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಗೋವಿಂದರಾಜನನಗರ ಮಂಡಲ ಬಿಜೆಪಿ ವತಿಯಿಂದ ಮಾರುತಿ ಮಂದಿರ ವಾರ್ಡ್ , ನಾಗರಬಾವಿ ಮುಖ್ಯರಸ್ತೆ, ಕೆನರಾ ಬ್ಯಾಂಕ್ ಕಾಲೋನಿಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿರವರು ದೇಶದ ಪ್ರಧಾನಿಯಾಗಿ 12ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಶೇಷ ಪೂಜೆ ಮತ್ತು ಸಂಭ್ರಮಾಚರಣೆ ಕಾರ್ಯಕ್ರಮ.
ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ , ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.
ಇದೇ ಸಂದರ್ಭದಲ್ಲಿ *ಕೆ.ಉಮೇಶ್ ಶೆಟ್ಟಿರವರು* ರವರು ಮಾತನಾಡಿ ದೇಶ ಮೊದಲು, ನಂತರ ಪಕ್ಷ ಎಂಬ ರಾಷ್ಟ್ರ ಭಕ್ತಿ ಕಲಿಸಿದ ಪಕ್ಷ ಬಿಜೆಪಿ ಪಕ್ಷ, ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಪಕ್ಷ ಬಿಜೆಪಿ ಪಕ್ಷ ಎಂಬ ಖ್ಯಾತಿ ಪಡೆದಿದೆ.
ಟೀ ಮಾರುವ ವ್ಯಕ್ತಿಯು, ಸಾಮಾನ್ಯ ಕಾರ್ಯಕರ್ತನು ದೇಶದ ಉನ್ನತ ಪದವಿ ಪ್ರಧಾನಿಯಾಗುವ ಅವಕಾಶ ಬಿಜೆಪಿ ಪಕ್ಷದಲ್ಲಿ ಇದೆ ನಿಷ್ಟಾವಂತ ಕಾರ್ಯಕರ್ತನಿಗೆ ಉಜ್ವಲ ಅವಕಾಶವಿದೆ.
ವಿಶ್ವದ ಬಲಿಷ್ಠ ಪ್ರಧಾನಿ ಎಂಬ ಹೆಗ್ಗಳಿಕೆ ಇರುವ ಪ್ರಧಾನಿ ನರೇಂದ್ರಮೋದಿರವರು ಮೂರು ಬಾರಿ ಬಹುಮತದಿಂದ ಚುನಾಯಿತರಾದರು ಇದೀಗ ಅವರ ಆಡಳಿತ 12ವರ್ಷ ಪೂರೈಸಿದೆ.
ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಆರ್ಥಿಕವಾಗಿ 4ನೇ ಸ್ಥಾನದಲ್ಲಿ ಭಾರತವಿದೆ. ಮುದ್ರ ಯೋಜನೆ, ಉಜ್ವಲ, ಜನಧನ್, ಜಲಶಕ್ತಿ, ಆಯುಷ್ಮಾನ್,ರಾಷ್ಟ್ರೀಯ ರಸ್ತೆ ಸುಧಾರಣೆ ರೈಲ್ವೆ , ನೀರಾವರಿ ಯೋಜನೆ , ಮಾಹಿತಿ ಮತ್ತು ತಂತ್ರಜ್ಞಾನ, ಸೈನ್ಯ ಎಲ್ಲ ವಿಭಾಗಗಳಲ್ಲಿ ಭಾರತ ದೇಶ ಮುಂದಿದೆ.

ಕೊರೋನಾ ಸಂಕಷ್ಟ ಕಾಲ, ಇಸ್ರೇಲ್ -ಅಮೇರಿಕಾ ಮತ್ತು ಇರಾನ್ ಯುದ್ದ ಸಂದರ್ಭದಲ್ಲಿ ದೇಶದ 145ಕೋಟಿ ಜನರ ಜೀವ ಕಾಪಾಡಿದ ಮಹಾನ್ ಶಕ್ತಿ ಇರುವ ಪ್ರಧಾನಿ ನರೇಂದ್ರಮೋದಿರವರು ನಮಗೆಲ್ಲರಿಗೂ ಸ್ಪೂರ್ತಿ, ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಮಂಡಲ ಅಧ್ಯಕ್ಷರಾದ ಎನ್.ಬಿ.ಮಂಜುನಾಥ್, ಬಿಜೆಪಿ ಮುಖಂಡರುಗಳಾದ ಕ್ರಾಂತಿ ರಾಜು,ದೊಡ್ಡವೀರಯ್ಯ, ಗೋವಿಂದರಾಜನಗರ ಪ್ರಭಾರಿಗಳಾದ ವಸಂತ್ ಕುಮಾರ್ ಭವಾನಿ,ಎಸ್.ರಾಜು, ನಂಜಪ್ಪ, ನರಸಿಂಹಮೂರ್ತಿ, ನೀರಜ್ ಕಾಮತ್, ಜಗದೀಶ್.ಪಿ, ಪ್ರಸಿದ್ದ್ ಉಮೇಶ್ ಶೆಟ್ಟಿ, ಅಭಿಷೇಕ್, ಗಿರೀಶ್ ಕಾಮತ್, ರಮೇಶ್ ಕಿಣಿ, ನಾರಾಯಣ್, ಹೇಮಂತ್, ರಾಘವೇಂದ್ರ, ಕನ್ನಡ ಮಂಜು, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.











