--Ads--

ಲೀಲಮ್ಮ ನಿನ್ನ ಗಂಡ ಯಾರಮ್ಮ….? ಪುಸ್ತಕ ಲೋಕರ್ಪಣೆ

On: July 26, 2026 4:57 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಲೀಲಮ್ಮ ನಿನ್ನ ಗಂಡ ಯಾರಮ್ಮ….?  ಪುಸ್ತಕ ಲೋಕರ್ಪಣೆ

ಡಾ.ರಾಜ್ ಕುಮಾರ್ ಹಾಲಿನಂತಹ ಶುದ್ದ ಮನಸ್ಸುವುಳ್ಳವರು, ಅವರ ಏಳಿಗೆಯನ್ನ ಸಹಿಸದ ಕೆಲವು ವ್ಯಕ್ತಿಗಳು ಅಪಪ್ರಚಾರ, ಸುಳ್ಳು ಸುದ್ದಿ ಹಬ್ಬಿಸಿದರು-ಕೃತಿಯ ಲೇಖಕ ಎನ್.ಆರ್.ರಮೇಶ್

ಯಡಿಯೂರು: ಕರ್ನಾಟಕ ರತ್ನ ಡಾ||ಪುನೀತ್ ರಾಜ್ ಕುಮಾರ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಡಾ||ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ ಗೌರವಾಧ್ಯಕ್ಷರು, ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಅವರು ಬರೆದಿರುವ ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ *ಲೀಲಮ್ಮ ನಿನ್ನ ಗಂಡ ಯಾರಮ್ಮ* ಪುಸ್ತಕ ಲೋಕರ್ಪಣೆ ಸಮಾರಂಭ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಕೃತಿಯ ಲೇಖಕ ಎನ್.ಆರ್.ರಮೇಶ್ , ಲೇಖಕರುಗಳಾದ ದೊಡ್ಡ ಹುಲ್ಲೂರು ರುಕ್ಕೋಜಿ, ಬಿ.ಗಣಪತಿ, ಪ್ರವೀಣ್ ನಾಯಕ್, ಜಗನ್ನಾಥ್ ಬಹುಳೆ , ನಟರಾಜ್, ಸ್ನೇಹ ಬುಕ್ ಹೌಸ್ ಕೆ.ಬಿ.ಪರಶಿವಪ್ಪ ರವರು ದೀಪ ಬೆಳಗಿಸಿ, ಪುಸ್ತಕ ಲೋಕರ್ಪಣೆ ಮಾಡಿದರು.

ಡಾ.ಸಿ.ಸೋಮಶೇಖರ್ ಅವರು ಮಾತನಾಡಿ ಸತ್ಯವನ್ನು ಹೊರತೆಗೆಯಬೇಕಾದರೆ ತಂತ್ರಜ್ಞಾನವು ಬೇಕು, ಸತತ ಸಾಧನೆಯು ಮಾಡಬೇಕು.
ಸಾಹಸಮಯ ಪುಸ್ತಕವಿದು.
ಇತಿಹಾಸಕ್ಕೆ ಲೋಪವಾಗಬಾರದು. ಮೇರುನಟನ ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಕಾರ್ಯವಾಗಿತ್ತು.

ಡಾ.ರಾಜ್ ಕುಮಾರ್ ಮಹಾನ್ ವ್ಯಕ್ತಿ ಅವರ ಮೇಲೆ ಇದ್ದ ಸುಳ್ಳು ಸುದ್ದಿ , ಗೊಂದಲಮಯವಾದ ವಿಷಯದಲ್ಲಿ ಇಂದು ತೆರೆ ಬಿದ್ದಿದೇ. ಡಾ.ರಾಜ್ ಕುಮಾರ್ ಅವರ ಮೇಲೆ ಕಪ್ಪು ಚುಕ್ಕೆ ಇಂದು ಕೊನೆಯಾಗಿದೆ.

ಎನ್.ಆರ್.ರಮೇಶ್ ಅವರು ಮಾತನಾಡಿ ಕೆಳಸ್ಥರ, ಬಡನದಿಂದ ಬಂದ ವ್ಯಕ್ತಿ ಮೇರು ನಟ ಡಾ.ರಾಜ್ ಕುಮಾರ್ ರವರು ಕೆಲವು ವ್ಯಕ್ತಿಗಳು ಡಾ.ರಾಜ್ ರವರ ಏಳಿಗೆಯನ್ನು ಸಹಿಸದೇ ಅಪಪ್ರಚಾರ ಮಾಡುತ್ತಾ ಬಂದರು.

ಸರಳ ಸಜ್ಜನಿಕೆಯಿಂದ ವಿಶ್ವದ ಜನ, ಮನ ಗೆದ್ದರು ಸಾಂಸ್ಕೃತಿಕ ನಾಯಕ, ರಾಜಕಾರಣದಲ್ಲಿ ಮುಖ್ಯಮಂತ್ರಿ ಮಾಡುತ್ತೇವೆ ಬನ್ನಿ ಎಂದು ಮನೆ ಬಳಿಗೆ ಬಂದರು ಡಾ.ರಾಜ್ ರವರು ತಿರಸ್ಕಾರ ಮಾಡಿದರು.

ಹಲವಾರು ಸೂಪರ್ ಸ್ಟಾರ್ ಗಳು ಅಭಿಮಾನಿಗಳನ್ನ ದುರ್ಬಳಕೆ ಮಾಡಿಕೊಂಡರು ಅದರೆ ಡಾ.ರಾಜ್ ಕುಮಾರ್ ರವರು ಅಭಿಮಾನಿಗಳ ಮನದಲ್ಲಿ ನಿಂತರು.

ಅಡಂಬರ, ಅಬ್ಬರವಿಲ್ಲದೇ ಸರಳತೆಯಿಂದ ಜೀವನ ಸಾಗಿಸಿದರು. ಕನ್ನಡ ನಾಡಿನ ಆರಾದ್ಯದೈವವಾದರು.
485 ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ಕೇಂದ್ರಡಾಳಿತ ಪ್ರದೇಶವಾಗಲು ಪ್ರಯುತ್ನ ನಡೆದಿತ್ತು ಡಾ.ರಾಜ್ ಕುಮಾರ್ ರವರು ಇದರ ವಿರುದ್ದ ಒಂದು ಕೂಗಿಗೆ ಕೇಂದ್ರಡಾಳಿತ ಪ್ರದೇಶ ವಾಗವುದು ತಪ್ಪಿತು.

3 ಮತ್ತು 4 ದರ್ಜೆ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ನೇಮಕವಾಗಲು ಡಾ.ರಾಜ್ ಕುಮಾರ್ ರವರು ನೀಡಿದ ಕೊಡುಗೆ ಇದರಿಂದ ರಾಜ್ಯದ 37ಸರ್ಕಾರಿ ಇಲಾಖೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಸಿಕ್ಕಿತು.

ಲೀಲಾವತಿರವರ ಪತಿ ಮಹಾಲಿಂಗಾ ಭಾಗವತರ್ ಎಂಬದು ಸಾಕ್ಷೀ ಸಮೇತ ಸಾಬೀತು ಪಡಿಸಲು ಸರ್ಕಾರಿ ದಾಖಲೆಗಳು ಇದೆ. ಮಹಾಲಿಂಗಾ ಭಾಗವತರ್, ಲೀಲಾವತಿ, ವಿನೋಧ್ ರಾಜ್ ರವರ ಸಮಗ್ರ ದಾಖಲೆಗಳ ಮೂಲಕ ವಿವರಣೆ ನೀಡಲಾಗಿದೆ.

ಲೀಲಾವತಿರವರು ಮಹಾಲಿಂಗಾ ಭಾಗವತರ್ 1962ರಲ್ಲಿ ಚನೈನಲ್ಲಿ ಮದುವೆಯಾದರು, ನಂತರ ವಿನೋದ್ ರಾಜ್  ಜನನವಾಯಿತು.

ಲೀಲಾವತಿಯವರ ಪತಿ ಮಹಾಲಿಂಗಾ ಭಾಗವತರ್ ಡಾ.ರಾಜ್ ಕುಮಾರ್  ಮೇಲೆ ಸುಳ್ಳು ಸುದ್ದಿಗೆ ತೆರೆ ಏಳೆಯುವ ಕಾರ್ಯ ಮಾಡಲಾಗಿದೆ. ಡಾ.ರಾಜ್ ಕುಮಾರ್ ರವರು ಹಾಲಿನಂತಹ ಶುದ್ದವಾಗಿ ಬದುಕಿ ಬಾಳಿದರು ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಟಿಟಿಕೆ ಹೆಲ್ತ್‌ಕೇರ್‌ನಿಂದ ‘ಗುಡ್-ಹೋಮ್’ ಮತ್ತು ‘ಇವಾ’ ಬ್ರ್ಯಾಂಡ್‌ಗಳನ್ನು ಖರೀದಿಸಿದ ವಿಪ್ರೋ ಕನ್ಸ್ಯೂಮರ್ ಕೇರ್

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಹೊಸದುರ್ಗ ಶಾಖಾ ಮಠದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ

ಸ್ಯಾಮ್‌ಸಂಗ್ ‘ಸಾಲ್ವ್ ಫಾರ್ ಟುಮಾರೋ’ ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಭಾರತದ 135 ನಗರಗಳಿಗೆ ಡಿಸೈನ್ ಥಿಂಕಿಂಗ್ ತಲುಪಿಸಿದೆ

ಜಾಗತಿಕ ‘ಎಲ್ ನಿನೋ’ ಹವಾಮಾನ ವೈಪರೀತ್ಯ ಹಾಗೂ ಬರದ ಭೀತಿ: ಎದುರಿಸಲು ಕರ್ನಾಟಕ ಸರ್ಕಾರದಿಂದ ಬೃಹತ್ ಮುನ್ನೆಚ್ಚರಿಕೆ ಕಾರ್ಯತಂತ್ರ

ಶಾರ್ಪ್‌ನಿಂದ ಮುಂದಿನ ಪೀಳಿಗೆಯ A3 ಕಲರ್ ಮತ್ತು ಮೊನೊ ಮಲ್ಟಿಫಂಕ್ಷನಲ್ ಪ್ರಿಂಟರ್‌ಗಳ ಬಿಡುಗಡೆ:

ಎಸ್ ಬ್ರಾಂಡ್ಸ್’ ಸ್ವಾಧೀನದೊಂದಿಗೆ ಆಗ್ನೇಯ ಏಷ್ಯಾದಲ್ಲಿ ವಿಪ್ರೊ ಕನ್ಸ್ಯೂಮರ್ ಕೇರ್ ವಿಸ್ತರಣೆ