ವಿಜಯ ದರ್ಪಣ ನ್ಯೂಸ್….
ನಾನು ಶಾಸಕನಾಗಲು ಸಂವಿಧಾನವೇ ಕಾರಣ ಶಾಸಕ ದರ್ಶನ್ ಧ್ರುವನಾರಾಯಣ್

ತಾಂಡವಪುರ ಜೂನ್ 16 ನಾನು ಶಾಸಕನಾಗಲು ಹಾಗೂ ನಾವು ಇಲ್ಲಿ ಒಗ್ಗಟಿನಿಂದ ಕುರಲು ಡಾ.ಬಿ ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೇ ಕಾರಣ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅಂಬೇಡ್ಕರ್ ಕನಸ್ಸುಗಳನ್ನು ಸಾಕಾರಗೊಳಿಸಬೇಕು ಅವರ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣದ ಜೊತೆಗೆ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಂವಿಧಾನದಲ್ಲಿ ಸಮಾನತೆ ನೀಡಿದ್ದಾರೆ. ಡಾ. ಅಂಬೇಡ್ಕರ್ ಅವರು ಜಯಂತಿಯನ್ನು ಒಂದೇ ಜಾತಿಗೆ ಸೀಮಿತವಲ್ಲ ಅವರು ಪ್ರತಿಯೊಬ್ಬರಿಗೂ ಸಮಾನತೆ ನೀಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರು ಇಂದಿಗೂ ಪ್ರತಿಯೊಬ್ಬ ಯುವಕರು ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಬಿ ಹರ್ಷವರ್ಧನ್ ರವರು ಮಾತನಾಡಿ ಪ್ರತಿಯೊಬ್ಬರು ಸಂವಿಧಾನದ ಮೌಲ್ಯಗಳನ್ನು ಗೌರವಿಸಬೇಕು ಬುದ್ದನ ತತ್ವಗಳು ಭಾರತೀಯ ಸಂವಿಧಾನದಲ್ಲಿ ಅಡಕವಾಗಿದ್ದು ಡಾ ಅಂಬೇಡ್ಕರ್ ಅವರ ಚಿಂತನೆಗೆ ಬೌದ್ಧ ಧರ್ಮ ಮಹತ್ತರ ಪ್ರರೇಣೆಯಾಗಿದೆ.ಶಿಕ್ಷಣದ ಮೂಲಕವೇ ಪ್ರಗತಿ ಸಾಧ್ಯವಾಗುತ್ತದೆ.ಎಂದು ತಿಳಿಸಿದರು. ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್ ಮಹದೇವಯ್ಯ ಮಾತನಾಡಿ ಡಾ. ಅಂಬೇಡ್ಕರ್ ಅವರು ದೇಶದ ಬಡವರ ಆಸ್ತಿಯಾಗಿದ್ದಾರೆ ದಲಿತರ ಹಿಂದುಳಿದ ವರ್ಗಗಳು ಸೇರಿದಂತೆ ವಿವಿಧ ವರ್ಗಗಳ ವ್ಯಕ್ತಿಗಳಿಗೆ ರಕ್ಷಣೆ ನೀಡುವಂತಹ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸಿರುವುದ್ದರಿಂದ ದೇಶದ ಎಲ್ಲಾ ಜನತೆಯು ಉತ್ತಮ ಜೀವನ ನಡೆಸಲು ಅನುಕೂಲವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಗ್ರಾ ಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ, ರಾಜು, ಮರಿಸ್ವಾಮಿ,ದೊರೆರಾಜು, ಭೀಮ ಬಳಗದ ಅದ್ಯಕ್ಷ ಕುಮಾರ್,ಉಪಾಧ್ಯಕ್ಷ ಸಿದ್ದರಾಜು,ಮಧುಕರ,ಸೇರಿದಂತೆ ಪ್ರಮುಖರು ಹಾಜರಿದ್ದರು











