--Ads--

ವೃದ್ಧರು ಹಾಗೂ ವಿಶೇಷ ಚೇತನ ಮಕ್ಕಳಿಗೆ ಅನ್ನದಾಸೋಹ: ಡಾ. ಅಣ್ಣಮ್ಮ ರಾಜೇಂದ್ರ ಅವರ 45ನೇ ಜನ್ಮದಿನ ಆಚರಣೆ

On: August 1, 2026 4:38 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ವೃದ್ಧರು ಹಾಗೂ ವಿಶೇಷ ಚೇತನ ಮಕ್ಕಳಿಗೆ ಅನ್ನದಾಸೋಹ: ಡಾ. ಅಣ್ಣಮ್ಮ ರಾಜೇಂದ್ರ ಅವರ 45ನೇ ಜನ್ಮದಿನ ಆಚರಣೆ

 

ತಾವರೆಕೆರೆ : ಕೋಲಾರ ಸಮಾಜ ಸೇವಕರು ಹಾಗೂ ಬೆಂಗಳೂರು ಅಣ್ಣಮ್ಮ ದೇವಿ ದೇವಾಲಯದ ಮುಖ್ಯಸ್ಥರು, ಮುಖಂಡರಾದ ಡಾಕ್ಟರ್ ಅಣ್ಣಮ್ಮ ರಾಜೇಂದ್ರ ಅವರ 45ನೇ ವರ್ಷದ ಹುಟ್ಟುಹಬ್ಬವನ್ನು ಕೋಲಾರದ ಅಂತರಗಂಗೆ ಬುದ್ಧಿಮಾಂದ್ಯ ಆಶ್ರಮದಲ್ಲಿ ವೃದ್ಧರು ಹಾಗೂ ವಿಶೇಷ ಚೇತನ ಮಕ್ಕಳಿಗೆ ಅನ್ನದಾಸೋಹ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಆಶ್ರಮದಲ್ಲಿರುವ ವೃದ್ಧರು ಹಾಗೂ ಮಕ್ಕಳಿಗೆ ಪ್ರೀತಿಯಿಂದ ಊಟ ಬಡಿಸಿ, ಅವರೊಂದಿಗೆ ಸಮಯ ಕಳೆಯಲಾಯಿತು. ಜನ್ಮದಿನವನ್ನು ಕೇಕ್ ಕತ್ತರಿಸುವುದು ಅಥವಾ ವೈಭವದಿಂದ ಆಚರಿಸುವುದಕ್ಕಿಂತ ಸಮಾಜದ ದುರ್ಬಲ ವರ್ಗದವರ ಸೇವೆಯ ಮೂಲಕ ಆಚರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಓಂ ಶಕ್ತಿ ಚಲಪತಿ,ಸಮಾಜ ಸೇವೆಯೇ ಶ್ರೇಷ್ಠ ಸೇವೆ. ಡಾ. ಅಣ್ಣಮ್ಮ ರಾಜೇಂದ್ರ ಅವರು ತಮ್ಮ ಜನ್ಮದಿನವನ್ನು ನಿರ್ಗತಿಕರು, ವೃದ್ಧರು ಹಾಗೂ ವಿಶೇಷ ಚೇತನ ಮಕ್ಕಳೊಂದಿಗೆ ಆಚರಿಸಿರುವುದು ನಿಜಕ್ಕೂ ಮಾದರಿಯ ಕಾರ್ಯವಾಗಿದೆ. ಇಂತಹ ಸೇವಾ ಮನೋಭಾವ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ. ಅವರ ಸಮಾಜಮುಖಿ ಕಾರ್ಯಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ಶುಭ ಹಾರೈಸಿದರು.

ನಗರಸಭೆ ಸದಸ್ಯರಾದ ಮಂಜುನಾಥ್ ಮಾತನಾಡಿ,ಡಾ. ಅಣ್ಣಮ್ಮ ರಾಜೇಂದ್ರ ಅವರು ಜನಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದು, ಜನ್ಮದಿನದಂದು ಅನ್ನದಾಸೋಹದಂತಹ ಪುಣ್ಯದ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ. ಸಮಾಜದ ಪ್ರತಿಯೊಬ್ಬರೂ ಇಂತಹ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರ ಮುಂದಿನ ಜೀವನ ಸುಖ, ಸಮೃದ್ಧಿ ಹಾಗೂ ಇನ್ನಷ್ಟು ಜನೋಪಯೋಗಿ ಸೇವೆಗಳಿಂದ ಕೂಡಿರಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶ್ರಮದ ಆಡಳಿತ ಮಂಡಳಿ ಸಿಬ್ಬಂದಿ, ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷರಾದ ಓಂ ಶಕ್ತಿ ಚಲಪತಿ, ಬಂಗಾರಪೇಟೆ ಮಹೇಶ್, ಬಜರಂಗದಳ ಬಾಲಾಜಿ, ರಾಮಚಂದ್ರ, ನಗರಸಭೆ ಸದಸ್ಯರಾದ ಮಂಜುನಾಥ್, ಮುರಳಿ, ಶ್ರೀರಾಮ ಸೇನೆ, ಚಿನ್ನಪಿ, ಮಹೇಂದ್ರ, ಜೀವನ್ ರಾಜ್, ಭರತ್ ಹಾಗೂ ಸ್ನೇಹಿತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now