--Ads--

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಬಾಗವಹಿಸಿ : ಬಿ ವಿ ರಾಜೀವ್‌ಗೌಡ

On: June 19, 2026 5:20 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಬಾಗವಹಿಸಿ : ಬಿ ವಿ ರಾಜೀವ್‌ಗೌಡ

ಶಿಡ್ಲಘಟ್ಟ : ನಮ್ಮ ವಿರೋಧಿ ಪಕ್ಷಗಳು ಅವರಿಗೆ ಬೇಕಾದವರನ್ನು ಮತಗಟ್ಟೆಗಳಿಗೆ ಬಿಎಲ್‌ಒ ಅಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದು, ಅವರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಹೆಸರುಗಳನ್ನು ಮತಪಟ್ಟಿಯಿಂದ ಕೈ ಬಿಡುವ ಅವಕಾಶ ಹೆಚ್ಚಿದೆ ಎಂದು
ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್‌ ಗೌಡ ಎಂದು
ಆತಂಕ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಮತಪಟ್ಟಿಯ ಸಮಗ್ರ ಪರಿಷ್ಕರಣೆ ಇನ್ನೇನು ಆರಂಭವಾಗಲಿದ್ದು, ಕಾಂಗ್ರೆಸ್‌ನ ಯಾವೊಬ್ಬ ಕಾರ್ಯಕರ್ತರ ಹೆಸರೂ ಕೈ ಬಿಟ್ಟು ಹೋಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಯಾವುದೇ ಬಿಎಲ್‌ಓ ಗಳು ಪಕ್ಷ, ಜಾತಿ ತಾರತಮ್ಯವಾಗಿ ಕಾರ್ಯನಿರ್ವಹಿಸಿದರೆ ಕೂಡಲೇ ಅಂತಹವರ ಬಗ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರು.

ರಾಜೀವ್‌ಗೌಡ ಕಾಂಗ್ರೆಸ್ ಕಾರ್ಯಕ್ರಮಗಳಿಗೆ 100 ಬಸ್ ಗಳಷ್ಟು ಜನರನ್ನು ಕಳುಹಿಸಿ 200 ಬಸ್‌ಗಳು ಎಂದು ಹೇಳಿಕೊಳ್ಳುತ್ತಾರೆ ಎಂದು ಬೀದಿ ಬದಿಯಲ್ಲಿ ಕೂತು ಮಾತನಾಡುವವರ ಬಗ್ಗೆ ನಾನಾಗಲಿ, ನೀವಾಗಲಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ,ಮೇಕೆದಾಟು ಯೋಜನೆಗೆ ನಡೆದ ಹೋರಾಟ ಸೇರಿ ಪಕ್ಷದ ಅನೇಕ ಕಾರ್ಯಕ್ರಮಗಳಲ್ಲಿ ನಾನು ಕ್ಷೇತ್ರದಿಂದ ಕರೆದೊಯ್ದಿದ್ದ ಕಾರ್ಯಕರ್ತರ ಸಂಖ್ಯೆ, ಬಸ್‌ಗಳ ಸಂಖ್ಯೆ, ಈ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ  ಬಗ್ಗೆ ಖುದ್ದು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರಿಗೂ ಗೊತ್ತು,ವರಿಷ್ಠರಾದ ರಾಹುಲ್ ಗಾಂಧಿ ಅವರಿಗೂ ಗೊತ್ತು ಎಂದರು.

ಕಾಂಗ್ರೆಸ್ ಭವನ ಯಾರಪ್ಪನ ಸ್ವತ್ತಲ್ಲ ,ಇದು ಕಾಂಗ್ರೆಸ್ ಕಾರ್ಯಕರ್ತರ ಆಸ್ತಿ ಇಲ್ಲಿಗೆ ಬರಲು ಯಾವೊಬ್ಬ ದೊಣ್ಣೆ ನಾಯಕನ ಅನುಮತಿ ಬೇಕಿಲ್ಲ ,ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಪಕ್ಷವನ್ನು ತಾಯಿಯಂತೆ ಪ್ರೀತಿಸುವ, ಆರಾಧಿಸುವ ಪ್ರತಿಯೊಬ್ಬರೂ ಕಾಂಗ್ರೆಸ್ ಭವನಕ್ಕೆ ಬರಬಹುದು ಎಂದು ಕುಟುಕಿದರು.

ಇತ್ತೀಚಿಗೆ ಕ್ಷೇತ್ರದ 3 ಗ್ರಾಮ ಪಂಚಾಯಿತಿಗಳಲ್ಲಿ ಸಂಘಟನೆ ಸಭೆ ನಡೆಸಿದ್ದು, ಇನ್ನುಳಿದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಾರ್ಯಕರ್ತ, ಮುಖಂಡರ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂಬರುವ ಸ್ಥಳೀಯ ಚುನಾವಣೆಗೆ ಪಕ್ಷ ಸಂಘಟಿಸಲಾಗುವುದು ಎಂದು ಹೇಳಿದರು.

ಜೂನ್-21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಧಿಕಾರ ಸ್ವೀಕಾರ,
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಬಿಕೆಎಚ್‌.ಗೆ ಅಧಿಕಾರ ಹಸ್ತಾಂತರ ಹಾಗೂ ಸಿಎಂ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ, ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗೂ ತಲಾ 2 ಬಸ್, ನಗರದ ಪ್ರತಿ ವಾರ್ಡ್‌ಗೂ ಒಂದೊಂದು ಬಸ್ ಸೇರಿ ಒಟ್ಟು 100 ಬಸ್‌ಗಳು ಹಾಗೂ ಕಾರ್ಯಕ್ರಮಕ್ಕೆ ತೆರಳುವ ಎಲ್ಲರಿಗೂ ತಿಂಡಿ-ಊಟದ ವ್ಯವಸ್ಥೆ ಮಾಡಲಿದ್ದೇವೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ  ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಈ ಸಂದರ್ಭದಲ್ಲಿ ಚಿಲಕನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರೆಡ್ಡಿ, ಮುಖಂಡರಾದ ಕೆ.ಗುಡಿಯಪ್ಪ, ಅಪ್ಸರ್ ಪಾಷಾ,ತನ್ನು, ಕೃಷ್ಣಪ್ಪ,ಗುಡಿಹಳ್ಳಿ ನಾರಾಯಣಸ್ವಾಮಿ, ಬೈರೇಗೌಡ,ಅಶ್ವತ್ಥ್ ನಾರಾಯಣರೆಡ್ಡಿ , ಗೋಪಾಲರೆಡ್ಡಿ, ರಾಮಚಂದ್ರಪ್ಪ, ಎಲ್.ಮಧುಸೂದನ್,ಕಂಪೆನಿ ದೇವರಾಜ್ ,ಯಾಸ್ಮಿನ್ ತಾಜ್, ಗಾಯತ್ರಮ್ಮ, ನಾಗನರಸಿಂಹ, ಎಂ.ರಾಮಾಂಜಿನಪ್ಪ , ವೆಂಕಟೇಶ್ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now