--Ads--

ಇತಿಹಾಸ ಪ್ರಸಿದ್ಧವುಳ್ಳ ಐತಿಹಾಸಿಕ ಈ ಬಾರಿಯ ಮೈಸೂರು ದಸರಾದಲ್ಲಿ ಕಂಬಳ ವಿಶೇಷ ಆಕರ್ಷಣೆ ಜಿಲ್ಲಾಧಿಕಾರಿ

On: June 20, 2026 6:06 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಇತಿಹಾಸ ಪ್ರಸಿದ್ಧವುಳ್ಳ ಐತಿಹಾಸಿಕ ಈ ಬಾರಿಯ ಮೈಸೂರು ದಸರಾದಲ್ಲಿ ಕಂಬಳ ವಿಶೇಷ ಆಕರ್ಷಣೆ ಜಿಲ್ಲಾಧಿಕಾರಿ

ಮೈಸೂರುತಾಂಡದಪುರ ಜೂನ್ 20 ಇತಿಹಾಸ ಐತಿಹಾಸಿಕ ವಿಶ್ವವಿಖ್ಯಾತ ಮೈಸೂರು ದಸರಾ: ಇದೇ ಮೊದಲ ಬಾರಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಕಂಬಳ ಕಾರ್ಯಕ್ರಮವನ್ನು ವಿಶೇಷ ಆಕರ್ಷಣೆಯಾಗಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂಬಳ ಆಯೋಜನೆಯ ಬಗ್ಗೆ ಸಿದ್ಧತಾ ಸಭೆ ನಡೆಸಿ ಬಳಿಕ ಮಾತನಾಡಿ. ಕಳೆದ ವರ್ಷವೇ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತು ಸರಿಯಾದ ಸ್ಥಳ ದೊರಕದ ಹಿನ್ನಲೆಯಲ್ಲಿ ಸಾಧ್ಯವಾಗಲಿಲ್ಲ. ಈ ಬಾರಿ 3 ತಿಂಗಳ ಮೊದಲೇ ಕಂಬಳ ಆಯೋಜಿಸಲು ಮೈಸೂರು ನಗರದ ವಿಜಯನಗರ ಮೊದಲನೇ ಹಂತ, ವಿಜಯನಗರ ನಾಲ್ಕನೇ ಹಂತ ಹಾಗೂ ಸಾತಗಳ್ಳಿ ರಿಂಗ್ ರೋಡ್ ರಸ್ತೆಯಲ್ಲಿ ಮೂರು ಸ್ಥಳ ಗುರುತಿಸಲಾಗಿದ್ದು, ಒಂದು ಸ್ಥಳವನ್ನು ಆಯ್ಕೆ ಮಾಡುವುದು ಎಂದರು.

ಕಂಬಳ ಆಯೋಜನೆಗೆ ಕನಿಷ್ಠ ಏಳು ಎಕರೆ ಸ್ಥಳ ಬೇಕಿದ್ದು, ಸ್ಥಳ ಆಯ್ಕೆ ಮಾಡುವಾಗ ಪಾರ್ಕಿಂಗ್ ವ್ಯವಸ್ಥೆ, ವೀಕ್ಷಕರ ಗ್ಯಾಲರಿ, ಕೋಣಗಳು ಹಾಗೂ ಆಯೋಜಕರು ಉಳಿದುಕೊಳ್ಳಲು ಬೇಕಿರುವ ಸ್ಥಳವನ್ನು ನೋಡಿ ಆಯ್ಕೆ ಮಾಡಿ. ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುವ ಕಂಬಳ ಕಾರ್ಯಕ್ರಮದ ಉಪ ಸಮಿತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ತಿಳಿಸಿದರು

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ನ ಜನರಲ್ ಸೆಕ್ರೆಟರಿ ವಿಜಯ್ ಕುಮಾರ್, ಬೆಂಗಳೂರು ಕಂಬಳ ವರ್ಕಿಂಗ್ ಪ್ರೆಸಿಡೆಂಟ್ ಮುರುಳಿಧರ್ ರೈ ಹಾಗೂ ಜಯಸೂರ್ಯ ರೈ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು

ವರ್ಷದ ಹಿಂದೆಯೇ ಡಿಕೆಶಿ ಘೋಷಣೆ
೨೦೨೫ರ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂದಿನ ಉಪಮುಖ್ಯಮಂತ್ರಿ ಹಾಗೂ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 2026 ದಸರೆಯಲ್ಲಿ ಕಂಬಳ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದಸರೆ ಮೊಟ್ಟ ಮೊದಲ ಸಭೆಯಲ್ಲೇ ಜಿಲ್ಲಾಧಿಕಾರಿ ಈ ವಿಚಾರವನ್ನು ಮುನ್ನಲೆಯಲ್ಲಿ ಪ್ರಸ್ತಾಪಿಸಿ ಆಯೋಜನೆಗೆ ಬೇಕಾಗುವ ಎಲ್ಲಾ ತಯಾರಿಯನ್ನು ಹಮ್ಮಿಕೊಂಡಿರುವುದು ವಿಶೇಷ.

WhatsApp

Join Now

Telegram

Join Now

Instagram

Join Now