ಮಾಕಳಿ ಬೆಟ್ಟದಲ್ಲಿ  ಜಿಲ್ಲಾಧಿಕಾರಿ ಅವರಿಂದ ಗಿಡ ನೆಡುವ ಮೂಲಕ ವನಮಹೋತ್ಸವ.

ವಿಜಯ ದರ್ಪಣ ನ್ಯೂಸ್, ದೊಡ್ಡಬಳ್ಳಾಪುರ 
ಬೆಂಗಳೂರು ಗ್ರಾ ಜಿಲ್ಲೆ, ಜುಲೈ 03

ಅರಣ್ಯ ಇಲಾಖೆಯ ವನಮಹೋತ್ಸವ ಸಪ್ತಾಹದ (ಜುಲೈ 01 ರಿಂದ 07) ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿ ಬೆಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಂದು ಹಲಸು ಗಿಡ, ಆಲದ ಗಿಡ, ಅರಳಿ ಗಿಡ ಇನ್ನಿತರ ಜಾತಿಗಳ ಗಿಡಗಳನ್ನು ನೆಡಲಾಯಿತು.


ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಕುಮಾರ್ ಸುಭಾಷ್ ರಾವ್ ಪಾಟೀಲ್, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.